ಪೊಕೊ ಕಂಪನಿಯ ಹೊಸ Poco X8 Pro ಸ್ಮಾರ್ಟ್‌ಫೋನ್ ಇಂದು (ಮಾರ್ಚ್ 17 ರಂದು) ಭಾರತದಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದ ಈ ಮೊಬೈಲ್ ಆಕ್ಟಾ ಕೋರ್ MediaTek Dimensity 8500 Ultra ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿರುವ ಜೊತೆಗೆ 9,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದೆ. ಹಾಗೆಯೇ ಈ ಮೊಬೈಲ್‌ನ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದೆ. ಈ ಮೊಬೈಲ್ ಬ್ಲ್ಯಾಕ್, ಗ್ರೀನ್ ಮತ್ತು ವೈಟ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಾಗಾದರೆ ಪೊಕೊ X8 ಪ್ರೊ 5G ಸ್ಮಾರ್ಟ್‌ಫೋನ್‌ನ ಬೆಲೆ, ಮಾರಾಟ, ಫೀಚರ್ಸ್ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸದ್ದಿಲ್ಲದೆ ಭಾರತದಲ್ಲಿ Oppo K14 5G ಸ್ಮಾರ್ಟ್‌ಫೋನ್ ಲಾಂಚ್! ಬೆಲೆ ಮತ್ತು ಫೀಚರ್ಸ್ ನೋಡಿ
ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಪೊಕೊ X8 ಪ್ರೊ 5G ಮೊಬೈಲ್ ಮೀಡ್‌ರೇಂಜ್ ಪ್ರೈಸ್‌ಟ್ಯಾಗ್ ಪಡೆದಿದೆ. ಈ ಮೊಬೈಲ್‌ನ ಆರಂಭಿಕ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 29,999 ರೂಗಳು ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 32,999 ರೂಗಳು ಆಗಿದೆ. ಹಾಗೆಯೇ ಪೊಕೊ X8 ಪ್ರೊ 5G ಐರನ್ ಮ್ಯಾನ್ ವೇರಿಯಂಟ್ (12GB RAM + 256GB) ಬೆಲೆ 34,999 ರೂಗಳು ಆಗಿದೆ. ಅಂದಹಾಗೆ ಈ ಫೋನ್ ಇದೇ ಮಾರ್ಚ್ 23 ರಿಂದ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಮೊಬೈಲ್ ಬ್ಲ್ಯಾಕ್, ಗ್ರೀನ್ ಮತ್ತು ವೈಟ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ನೂತನ ಪೊಕೊ X8 ಪ್ರೊ 5G ಮೊಬೈಲ್ 6.59 ಇಂಚಿನ AMOLED ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 3500 nits ಬ್ರೈಟ್ನೆಸ್ ಹೊಂದಿದೆ. ಈ ಮೊಬೈಲ್ ಆಕ್ಟಾ ಕೋರ್ MediaTek Dimensity 8500 Ultra ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 8GB RAM + 256GB ಹಾಗೂ 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಮೊಬೈಲ್ IP66 + IP68 + IP69 ರೇಟಿಂಗ್ ಸೌಲಭ್ಯ ಪಡೆದುಕೊಂಡಿದೆ.
ಪೊಕೊ X8 ಪ್ರೊ 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಆಗಿದ್ದು ದ್ವಿತೀಯ ಕ್ಯಾಮೆರಾ 8MP ಸೆನ್ಸರ್ ಸೌಲಭ್ಯ ಪಡೆದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 20MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್ 9,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಪಡೆದುಕೊಂಡಿದೆ.