ಜನಪ್ರಿಯ ಪೊಕೊ ಕಂಪನಿಯು ತನ್ನ ಹೊಸ POCO X8 5G ಸ್ಮಾರ್ಟ್‌ಫೋನ್ ಅನ್ನು ಇಂದು (ಸೆಪ್ಟಂಬರ್ 4 ರಂದು) ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಕಂಪನಿ ಈಗಾಗಲೇ ಫೋನ್‌ನ ಪ್ರಮುಖ ಫೀಚರ್ಸ್ ಅನ್ನು ಖಚಿತಪಡಿಸಿದ್ದು, ಈ ಫೋನ್ ಬರೋಬ್ಬರಿ 9,000 mAh ಸಾಮರ್ಥ್ಯದ ಬ್ಯಾಟರಿ ಪಡೆದಿರಲಿದೆ. ಒಂದೇ ಚಾರ್ಜ್‌ನಲ್ಲಿ ಸುಮಾರು 3.2 ದಿನಗಳ ವರೆಗೆ ಬ್ಯಾಕ್‌ಅಪ್ ನೀಡಬಹುದು ಎಂದು ಪೊಕೊ ಸಂಸ್ಥೆಯು ಹೇಳಿಕೊಂಡಿದೆ. ಹೀಗಾಗಿ ಹೊಸ X-ಸರಣಿಯ ಫೋನ್‌ನಲ್ಲಿ ಬ್ಯಾಟರಿ ಬಾಳಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಾಗಾದರೇ ಪೊಕೊ X8 5G ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಕಂಪನಿ ಖಚಿತಪಡಿಸಿರುವ ಮಾಹಿತಿ ಹಾಗೂ ಸೋರಿಕೆಯಾಗಿರುವ ನಿರೀಕ್ಷಿತ ಫೀಚರ್ಸ್‌ಗಳ ವಿವರ ಇಲ್ಲಿದೆ.
Also Read : ಸದ್ದಿಲ್ಲದೆ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Redmi 17 5G ಸ್ಮಾರ್ಟ್‌ಫೋನ್! ಫೀಚರ್ಸ್ ನೋಡಿ
ಪೊಕೊ ಮೊಬೈಲ್ ಸಂಸ್ಥೆಯ ನೂತನ ಪೊಕೊ X8 ಫೋನ್ ಲಾಂಚ್ ಮುನ್ನವೇ ಲೀಕ್ ಮಾಹಿತಿಗಳ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಭಾರತದಲ್ಲಿ ಇಂದು (ಸೆಪ್ಟಂಬರ್ 4 ರಂದು) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇನ್ನು ಈ ಮೊಬೈಲ್ ಆಕರ್ಷಕ ಕಲರ್ ಆಯ್ಕೆ ಪಡೆದಿರಲಿದ್ದು, ಇದರ ಬೆಲೆ ಸುಮಾರು 35,000 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಲೀಕ್ ಮಾಹಿತಿ ಪ್ರಕಾರ ಪೊಕೊ X8 ಸ್ಮಾರ್ಟ್‌ಫೋನ್ 6.83 ಇಂಚಿನ 1.5K AMOLED ಡಿಸ್ಪ್ಲೇ ಹೊಂದಿರಬಹುದು. ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಬೆಂಬಲಿಸುವ ನಿರೀಕ್ಷೆಯಿದೆ. ಹಾಗೆಯೇ ಇದರ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯೂ ಪಡೆದಿರಲಿದೆ. ಹಾಗೆಯೇ Snapdragon 6 Gen 5 ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರಬಹುದು ಎನ್ನಲಾಗಿದೆ. ಇದರೊಂದಿಗೆ ಅಗತ್ಯ RAM ಹಾಗೂ ಸ್ಟೋರೇಜ್ ಆಯ್ಕೆ ನೀಡಲಿದೆ. ಅಲ್ಲದೇ UFS 4.1 ಸ್ಟೋರೇಜ್ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯಿದೆ. ಬಹುದು ಎನ್ನಲಾಗಿದೆ.
ಇನ್ನು ಪೊಕೊ X8 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50MP ಸೋನಿ IMX882 ಮುಖ್ಯ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾವೈಡ್ ಕ್ಯಾಮೆರಾ ಪಡೆದಿರುವ ಸಾಧ್ಯತೆಯಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ನೀಡಬಹುದು ಎಂದು ವರದಿಗಳು ಸೂಚಿಸಿವೆ. ಅಲ್ಲದೇ 9,000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಇದು 67W ವೇಗದ ವೈರ್ಡ್ ಚಾರ್ಜಿಂಗ್ ಹಾಗೂ 22.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆಯಿದೆ. ಹಾಗೆಯೇ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳು ಇರಬಹುದು ಎನ್ನಲಾಗಿದೆ.