ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ Poco M8 Power ಸ್ಮಾರ್ಟ್‌ಫೋನ್‌! ಬಿಗ್‌ ಬ್ಯಾಟರಿ ಖಚಿತ

HIGHLIGHTS

ಮಾರುಕಟ್ಟೆಗೆ ಬರಲು ಪೊಕೊ M8 ಪವರ್ ಮೊಬೈಲ್‌ ಸಜ್ಜು

ಪೊಕೊ M8 ಪವರ್ ಫೋನ್‌ 50MP ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದೆ

ಪೊಕೊ ಈ ಸ್ಮಾರ್ಟ್‌ಫೋನ್‌ 8,000mAh ಬ್ಯಾಟರಿ ಪವರ್ ಒಳಗೊಂಡಿರಲಿದೆ

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೊಕೊ ಮೊಬೈಲ್‌ಗಳು ಡಿಮ್ಯಾಂಡ್‌ ಪಡೆದಿವೆ. ಪೊಕೊ ಕಂಪನಿಯು ಇದೀಗ ಹೊಸದಾಗಿ Poco M8 Power ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್‌ ಲಾಂಚ್ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ವಿಶೇಷ ಮೈಕ್ರೋಪೇಜ್‌ ಸಹ ತೆರೆದಿದೆ. ವಿಶೇಷವಾಗಿ ಪೊಕೊ M8 ಪವರ್ ಮೊಬೈಲ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 Gen 4 ಚಿಪ್‌ಸೆಟ್‌ ಪ್ರೊಸೆಸರ್ ಜೊತೆಗೆ 8,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಅಲ್ಲದೇ ಮುಂಬರುವ ಈ ಎರಡು ಮೊಬೈಲ್‌ 50MP ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಹಾಗಾದರೆ ಮಾರುಕಟ್ಟೆಗೆ ಬರಲಿರುವ ಪೊಕೊ M8 ಪವರ್ ಫೋನ್‌ಗಳ ಲಾಂಚ್‌ ಡೇಟ್ ಹಾಗೂ ಇತರೆ ಮಾಹಿತಿ ಮುಂದೆ ತಿಳಿಯೋಣ.

Also Read : ಜುಲೈ 24 ರಂದು ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ Lava Virat V1 5G ಮೊಬೈಲ್‌! ಇಲ್ಲಿದೆ ಮಾಹಿತಿ

ಸದ್ಯದಲ್ಲೇ ಬರಲಿದೆ Poco M8 Power ಮೊಬೈಲ್‌

ಪೊಕೊ ಕಂಪನಿಯು ತನ್ನ ಹೊಸ ಪೊಕೊ M8 ಪವರ್ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಬಿಡುಗಡೆಯ ದಿನಾಂಕವನ್ನು ಅಧಿಕೃತ ಘೋಷಣೆ ಮಾಡಿಲ್ಲ. ಈ ಮೊಬೈಲ್‌ ಲಾಂಚ್ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ವಿಶೇಷ ಮೈಕ್ರೋಪೇಜ್‌ ಸಹ ತೆರೆದಿದೆ. ಜುಲೈ ಅಂತ್ಯ ಅಥವಾ ಆಗಸ್ಟ್ 2026 ರ ಆರಂಭದಲ್ಲಿ ಈ ಸ್ಮಾರ್ಟ್‌ಫೋನ್ ಬರುವ ನಿರೀಕ್ಷೆಗಳು ಇವೆ. ಸುಮಾರು 20,000 ರೂ.ಗಳ ಆಸುಪಾಸಿನಲ್ಲಿ ಈ ಫೋನ್‌ ಲಗ್ಗೆ ಇಡುವ ಸಾಧ್ಯತೆಗಳು ಇವೆ.

ಪೊಕೊ M8 ಪವರ್ ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಮುಂಬರುವ ಹೊಸ ಪೊಕೊ M8 ಪವರ್ ಫೋನ್‌ 7 ಇಂಚಿನ OLED ಡಿಸ್‌ಪ್ಲೇ ಪಡೆದಿರುವ ಜೊತೆಗೆ 1,800 nits ಬ್ರೈಟ್ನೆಸ್‌ ಒಳಗೊಂಡಿರಲಿದೆ. ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸಪೋರ್ಟ್‌ನಲ್ಲಿ ಇರಲಿದೆ. ಇನ್ನು ಈ ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಹೊಂದಿರಲಿದ್ದು ಇದಕ್ಕೆ ಅನುಗುಣವಾಗಿ 8GB RAM + 256GB ಸ್ಟೋರೇಜ್‌ ವರೆಗೂ ಆಯ್ಕೆ ಹೊಂದಿರಲಿದೆ. ಹಾಗೆಯೇ IP65 ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್ ಸಪೋರ್ಟ್‌ ಇರಲಿದೆ ಎನ್ನಲಾಗಿದೆ.

ಪೊಕೊ M8 ಪವರ್ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರಲಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್‌ 8,000 mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರಲಿದೆ. ಇದಕ್ಕೆ ಪೂರಕವಾಗಿ ಈ ಫೋನ್‌ 45W ವೈರ್ಡ್ ಫಾಸ್ಟ್‌ ಚಾರ್ಜಿಂಗ್ ಹಾಗೂ 22.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸಪೋರ್ಟ್‌ ಕೂಡಾ ಒಳಗೊಂಡಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :