ಗ್ರಾಹಕರ ಗಮನ ಸೆಳೆದಿರುವ OPPO K13x 5G ಮೊಬೈಲ್‌ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ!

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ಒಪ್ಪೋ K13x 5G ಆಕರ್ಷಕ ಡಿಸ್ಕೌಂಟ್‌ ಪಡೆದಿದೆ

ಒಪ್ಪೋದ ಈ ಮೊಬೈಲ್‌ ಮೂರು ಆಕರ್ಷಕ ಕಲರ್‌ ಆಯ್ಕೆಗಳನ್ನು ಪಡೆದಿದೆ

ಒಪ್ಪೋ K13x 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿದೆ

ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಹೊಸದೊಂದು ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವ ಗ್ರಾಹಕರಿಗೆ ಸದ್ಯ Flipkart ಅತ್ಯುತ್ತಮ ತಾಣ. ಹೌದು, Flipkart ಇ ಕಾಮರ್ಸ್‌ ತಾಣವು ಇದೀಗ OPPO K13x 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಘೋಷಿಸಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಒಪ್ಪೋ ಸಂಸ್ಥೆಯ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಹೊಂದಿದೆ. ಹಾಗಾದರೆ Flipkart ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಒಪ್ಪೋ K13x 5G ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Vivo T5 Pro ಸ್ಮಾರ್ಟ್‌ಫೋನ್‌!

OPPO K13x 5G ಮೊಬೈಲ್‌ ಆಫರ್‌ನಲ್ಲಿ ಲಭ್ಯ

ಒಪ್ಪೋ ಸಂಸ್ಥೆಯ ಒಪ್ಪೋ K13x 5G ಫೋನ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 6GB RAM + 128GB ವೇರಿಯಂಟ್‌ ಬೆಲೆ 16,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 16,680 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಈ ಮೊಬೈಲ್‌ ಮಿಡ್‌ನೈಟ್ ವೈಲೆಟ್, ಸನ್‌ಸೆಟ್ ಪೀಚ್ ಮತ್ತು ಬ್ರೀಜ್ ಬ್ಲೂ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

ಒಪ್ಪೋ K13x 5G ಫೀಚರ್ಸ್‌ ಮಾಹಿತಿ

ಒಪ್ಪೋ K13x 5G ಫೋನ್‌ ಡಿಸ್‌ಪ್ಲೇಯು 6.72 ಇಂಚಿನ ಅಲ್ಟ್ರಾ ಬ್ರೈಟ್ LCD ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಹೊಂದಿದ್ದು ಜೊತೆಗೆ 1000 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಒಪ್ಪೋದ ಈ ಮೊಬೈಲ್‌ 4GB RAM + 64GB, 6GB + 128GB ಹಾಗೂ 8GB + 128GB ವೇರಿಯಂಟ್‌ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್ 15 ನಲ್ಲಿ ColorOS 15 ಅನ್ನು ರನ್ ಮಾಡುತ್ತದೆ.

ಹಾಗೆಯೇ ಒಪ್ಪೋ K13x 5G ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಒಳಗೊಂಡಿದ್ದು ಸೆಕೆಂಡರಿ ಕ್ಯಾಮೆರಾ 2MP ಸೆನ್ಸಾರ್‌ ಮಾದರಿಯಲ್ಲಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 8MP ಸೆನ್ಸಾರ್ ಕ್ಯಾಮೆರಾ ವ್ಯವಸ್ಥೆ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ 6,000 mAh ಬ್ಯಾಟರಿ ಜೊತೆಗೆ 45W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಅಲ್ಲದೇ ಇದು ಧೂಳು ಹಾಗೂ ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :