ಮಾರುಕಟ್ಟೆಯಲ್ಲಿ ತನ್ನದೇ ಖದರ ಹೊಂದಿರುವ Oppo ಮೊಬೈಲ್ ಬ್ರ್ಯಾಂಡ್ ಇದೀಗ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸುವ ಸಿದ್ಧತೆಯಲ್ಲಿ ಇದೆ. ಅದರ ಭಾಗವಾಗಿ ಸಂಸ್ಥೆಯು ಹೊಸದಾಗಿ Oppo Find X9 Ultra ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ. ಇನ್ನು ಮೊಬೈಲ್ ಅನ್ನು ಮೊದಲು ಚೀನಾದಲ್ಲಿ 2026ರ 2ನೇ ತ್ರೈಮಾಸಿಕದ ಪ್ರಾರಂಭದಲ್ಲಿ ಲಾಂಚ್ ಮಾಡುವ ನಿರೀಕ್ಷೆಗಳು ಇವೆ. ಆ ಬಳಿಕ ಭಾರತದ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇವೆ. ಮುಂಬರುವ ಈ ಫ್ಲ್ಯಾಗ್‌ಶಿಪ್ ಫೋನಿನಲ್ಲಿ ಅದರ ಡಿಸೈನ್ ಪ್ರಮುಖ ಹೈಲೈಟ್ ಆಗಿರಲಿದ್ದು ಇತರೆ ಸಾಮಾನ್ಯ ಗ್ಲಾಸ್ ಬ್ಯಾಕ್ ಇರುವ ಫ್ಲ್ಯಾಗ್‌ಶಿಪ್ ಮೊಬೈಲ್‌ಗಳಿಂತ ವಿಭಿನ್ನ ವಿನ್ಯಾಸವನ್ನು ಹೊಂದಿರಲಿದೆ ಎಂದು ವರದಿಗಳು ಸೂಚಿಸುತ್ತಿವೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್ ಕುರಿತಾದ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
Also Read : ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmi Note 15 Pro 5G ಸರಣಿ; ಲಾಂಚ್ ಯಾವಾಗ ಇಲ್ಲಿದೆ ಮಾಹಿತಿ
ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ Oppo Find X9 Ultra ಸ್ಮಾರ್ಟ್‌ಫೋನ್ ರೆಟ್ರೋ ಪ್ರೇರಿತ ಹಾಗೂ ರಗಡ ವಿನ್ಯಾಸದ ರಚನೆಯೊಂದಿಗೆ ಬಿಡುಗಡೆ ಆಗಲಿದೆ. ಈ ಫೋನ್ ಇತರೆ ಸಾಮಾನ್ಯ Flagship ಫೋನ್‌ಗಳ ಡಿವೈಸ್‌ಗಳಿಗಿಂತ ಭಿನ್ನವಾಗಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇವೆ ಎಂದು ವರದಿಯಿಂದ ತಿಳಿದುಬಂದಿದೆ. ಇನ್ನು ಕಂಪನಿಯು ಈ ಫೋನ್‌ನ್ನು ಭಿನ್ನ ಫಿನಿಷ್ ಆಯ್ಕೆಗಳಲ್ಲಿ ಪರಿಚಯಿಸುವ ಸಾಧ್ಯತೆಗಳೂ ಸಹ ಇದೆ. ಆ ಪೈಕಿ ಒಂದು ಪೂರ್ಣ ಗ್ಲಾಸ್ ಬಾಡಿ ಮಾಡೆಲ್ ಸಹ ಇರಲಿದೆ. ಹಾಗೆಯೇ ಗ್ಲಾಸ್, ಮೆಟಲ್ ಮತ್ತು ಫಾಕ್ಸ್ ಲೆದರ್ ಸಂಯೋಜನೆಯೊಂದಿಗೆ ತಯಾರಿಸಲಾದ ಪ್ರೀಮಿಯಂ ಫ್ಲ್ಯಾಗ್‌ಶಿಪ್ ವೇರಿಯಂಟ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಅದೇ ರೀತಿ ಒಪ್ಪೋ Find X9 Ultra ಫೋನ್ ಕನಿಷ್ಠ ಮೂರು ಕಲರ್ ಆಯ್ಕೆಗಳಲ್ಲಿ ಎಂಟ್ರಿ ಕೊಡುವ ನಿರೀಕ್ಷೆಯಿದ್ದು, ಅವುಗಳು ಕ್ರಮವಾಗಿ ಬ್ಲ್ಯಾಕ್, ಆರೆಂಜ್ ಮತ್ತು ಬ್ರೌನ್ ಕಲರ್ ಆಗಿರಲಿವೆ.
ಲೀಕ್ ಮಾಹಿತಿ ಪ್ರಕಾರ Oppo Find X9 Ultra ಫೋನ್ 6.82 ಇಂಚಿನ 2K ಫ್ಲಾಟ್ AMOLED ಮಾದರಿಯ ಡಿಸ್‌ಪ್ಲೇ ಹೊಂದಿರುವ ಜೊತೆಗೆ 120Hz ರಿಫ್ರೆಶ್ ರೇಟ್ ಪಡೆದಿರಲಿದೆ. ಈ ಫೋನ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ ColorOS 16 ಸಪೋರ್ಟ್ ಕೂಡಾ ಪಡೆದಿರಲಿದೆ. ಹಾಗೆಯೇ ಈ ಫೋನ್ 7,300mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳಿದ್ದು ಅದಕ್ಕೆ ಬೆಂಬಲವಾಗಿ ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಒದಗಿಸಲಾಗುತ್ತದೆ.
ಅಂದಹಾಗೆ ಈ ಫೋನ್ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ರಚನೆ ಪಡೆದಿರಲಿದ್ದು, 200 ಮೆಗಾಪಿಕ್ಸೆಲ್ ಸೋನಿ LYT-901 ಸೆನ್ಸರ್ ಕ್ಯಾಮೆರಾ ಆಯ್ಕೆ ಇರಲಿದೆ. ಇದನ್ನು 50MP ಸ್ಯಾಮ್‌ಸಂಗ್ JN5 ಅಲ್ಟ್ರಾ ವೈಡ್ ಶೂಟರ್ ಜೊತೆಗೆ ಜೋಡಿಸುವ ನಿರೀಕ್ಷೆಗಳಿವೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ LYT-600 ಸೆನ್ಸರ್ 10X ಆಪ್ಟಿಕಲ್ ಜೂಮ್ ನೀಡುತ್ತದೆ. ಹಾಗೆಯೇ ಫೋನಿಒನ ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒದಗಿಸುವ ನಿರೀಕ್ಷೆಗಳು ಇವೆ.