ಒಪ್ಪೋ ಕಂಪನಿಯ ಬಹುನಿರೀಕ್ಷಿತ Oppo F33 Pro 5G ಸ್ಮಾರ್ಟ್‌ಫೋನ್ ಸರಣಿಯು ಭಾರತದಲ್ಲಿ ನಾಳೆ (ಏಪ್ರಿಲ್ 15 ರಂದು) ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಮೊಬೈಲ್ ಸರಣಿಯು ಒಪ್ಪೋ F33 5G ಹಾಗೂ ಒಪ್ಪೋ F33 ಪ್ರೊ 5G ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಈ ಫೋನ್ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಪೇಜ್ ಲೈವ್ ಆಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಸರಣಿಯು 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಈ ಫೋನ್ 50MP ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಇದು ಮಿಸ್ಟಿ ಫಾರೆಸ್ಟ್, ಸ್ಟಾರಿ ಬ್ಲೂ ಮತ್ತು ಫ್ಯಾಶನ್ ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ. ಹಾಗಾದರೆ ಒಪ್ಪೋ F33 ಪ್ರೊ ಮೊಬೈಲ್ ಸರಣಿಯ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Samsung Galaxy M56 5G ಮೊಬೈಲ್‌ಗೆ ಭರ್ಜರಿ ಆಫರ್! ಭಾರೀ ಬೆಲೆ ಇಳಿಕೆ
ಒಪ್ಪೋ ಕಂಪನಿಯು ಕಡಿಮೆ ಬೆಲೆಯಲ್ಲಿ ಹೊಸದಾಗಿ ಒಪ್ಪೋ F33 ಪ್ರೊ 5G ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಸ್ಮಾರ್ಟ್‌ಫೋನ್ ಸರಣಿಯನ್ನು ನಾಳೆ (ಏಪ್ರಿಲ್ 15 ರಂದು) ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ದೃಢಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮಿಸ್ಟಿ ಫಾರೆಸ್ಟ್, ಸ್ಟಾರಿ ಬ್ಲೂ ಮತ್ತು ಫ್ಯಾಶನ್ ಕಲರ್ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಅಧಿಕ. ಈ ಮೊಬೈಲ್‌ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ.
ಹೊಸ ಒಪ್ಪೋ F33 ಪ್ರೊ 5G ಮೊಬೈಲ್ ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ರಚನೆ ಪಡೆದುಕೊಂಡಿದೆ. ಅಲ್ಲದೇ ಇದು ಫ್ಲಾಟ್ ಬ್ಯಾಕ್ ಮತ್ತು ಫ್ಲಾಟ್ ಫ್ರೇಮ್ ವಿನ್ಯಾಸ ಸಹ ಹೊಂದಿರಲಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಇದು ಒಳಗೊಂಡಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಇದರ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿರುವುದು ಕನ್ಫರ್ಮ್ ಎನ್ನಲಾಗಿದೆ.
ಇನ್ನು ಒಪ್ಪೋ F33 ಪ್ರೊ 5G ಫೋನ್ AI ಪೋರ್ಟ್ರೇಟ್ ಗ್ಲೋ ಜೊತೆಗೆ ನ್ಯಾಚುರಲ್ ಲೈಟ್, ಫ್ಲ್ಯಾಶ್‌ಲೈಟ್, ರಿಮ್ ಲೈಟ್ ಮತ್ತು ಸ್ಟುಡಿಯೋ ಲೈಟ್ ಕ್ಯಾಮೆರಾ ಎಫೆಕ್ಟ್ ನಂತಹ ಆಯ್ಕೆಗಳನ್ನು ಸಹ ಪಡೆದಿರುವುವ ನಿರೀಕ್ಷೆಗಳು ಇವೆ. ಮುಂಬರುವ ಈ ಫೋನ್ ಆಂಡ್ರಾಯ್ಡ್ ಆಧಾರಿತ ColorOS ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP69K ರೇಟಿಂಗ್ ಸೌಲಭ್ಯ ಪಡೆದುಕೊಂಡಿರಲಿದೆ. ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಹಾಗೂ ವಾಲ್ಯೂಮ್ ಕಂಟ್ರೋಲ್ ಆಯ್ಕೆಗಳನ್ನು ನೀಡಲಾಗಿದೆ.