ಭಾರತದಲ್ಲಿ Oppo F33 Pro 5G ಬಿಡುಗಡೆಗೆ ಡೇಟ್‌ ಕನ್ಫರ್ಮ್‌! ನಿರೀಕ್ಷಿತ ಫೀಚರ್ಸ್‌ ನೋಡಿ

HIGHLIGHTS

ಇದೇ ಏಪ್ರಿಲ್‌ 15 ರಂದು ಭಾರತಕ್ಕೆ ಎಂಟ್ರಿ ಕೊಡಲಿದೆ ಒಪ್ಪೋ F33 ಪ್ರೊ ಫೋನ್‌

ಒಪ್ಪೋ F33 ಪ್ರೊ ಮೊಬೈಲ್‌ 50MP ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದೆ

ಒಪ್ಪೋದ ಈ ನೂತನ ಫೋನ್‌ ಮೂರು ಆಕರ್ಷಕ ಕಲರ್‌ ಆಯ್ಕೆಯೊಂದಿಗೆ ಬರಲಿದೆ

ಚೀನಾ ಮೂಲದ ಒಪ್ಪೋ ಕಂಪನಿಯು ಹೊಸದಾಗಿ Oppo F33 Pro 5G ಸ್ಮಾರ್ಟ್‌ಫೋನ್ ಅನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸಿದೆ. ಅಂದಹಾಗೆ ಈ ನೂತನ ಮೊಬೈಲ್‌ ಮುಂದಿನ ವಾರದಲ್ಲಿ ಬಿಡುಗಡೆ ಆಗೋದು ಖಚಿತ ಆಗಿದೆ. ಇನ್ನು ಒಪ್ಪೋ F33 ಪ್ರೊ 5G ಮೊಬೈಲ್‌ ಬಿಡುಗಡೆ ದಿನಾಂಕ ಸೇರಿದಂತೆ ಕೆಲವು ಮಾಹಿತಿಗಳು ಬಹಿರಂಗ ಆಗಿವೆ. ಈ ಸ್ಮಾರ್ಟ್‌ಫೋನ್‌ ಮಿಸ್ಟಿ ಫಾರೆಸ್ಟ್, ಸ್ಟಾರಿ ಬ್ಲೂ ಮತ್ತು ಪ್ಯಾಶನ್ ರೆಡ್ ಬಣ್ಣಗಳ ಆಯ್ಕೆಗಳನ್ನು ಹೊಂದಿರಲಿದೆ. ಅಲ್ಲದೇ ಇದು ಮುಂಭಾಗದಲ್ಲಿ 50MP ಸೆನ್ಸಾರ್‌ನ ಕ್ಯಾಮೆರಾ ಸೌಲಭ್ಯ ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾದರೆ ಮುಂಬರುವ ಒಪ್ಪೋ F33 ಪ್ರೊ 5G ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 9,000mAh ಸಿಲಿಕಾನ್ ಬ್ಯಾಟರಿ ಇರುವ OnePlus Nord 6 ಮೊಬೈಲ್‌ ನಾಳೆ ಖರೀದಿಗೆ ಲಭ್ಯ!

Oppo F33 Pro 5G ಮೊಬೈಲ್‌ನ ಲಾಂಚ್‌ ಮಾಹಿತಿ

ಒಪ್ಪೋ ಕಂಪನಿಯು ಕಡಿಮೆ ಬೆಲೆಯಲ್ಲಿ ಹೊಸದಾಗಿ ಒಪ್ಪೋ F33 ಪ್ರೊ 5G ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಸ್ಮಾರ್ಟ್‌ಫೋನ್‌ ಅನ್ನು ಇದೇ ಏಪ್ರಿಲ್‌ 15 ರಂದು ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ದೃಢಪಡಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮಿಸ್ಟಿ ಫಾರೆಸ್ಟ್, ಸ್ಟಾರಿ ಬ್ಲೂ ಮತ್ತು ಪ್ಯಾಶನ್ ಕಲರ್‌ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಅಧಿಕ. ಈ ಮೊಬೈಲ್‌ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ.

ಒಪ್ಪೋ F33 ಪ್ರೊ 5G ಫೋನಿನ ನಿರೀಕ್ಷಿತ ಫೀಚರ್ಸ್‌

ಹೊಸ ಒಪ್ಪೋ F33 ಪ್ರೊ 5G ಮೊಬೈಲ್‌ ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ರಚನೆ ಪಡೆದುಕೊಂಡಿದೆ. ಅಲ್ಲದೇ ಇದು ಫ್ಲಾಟ್ ಬ್ಯಾಕ್ ಮತ್ತು ಫ್ಲಾಟ್ ಫ್ರೇಮ್‌ ವಿನ್ಯಾಸ ಸಹ ಹೊಂದಿರಲಿದೆ. ಹಾಗೆಯೇ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಇದು ಒಳಗೊಂಡಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಇದರ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಅನ್ನು ಪಡೆದಿರುವುದು ಕನ್ಫರ್ಮ್ ಎನ್ನಲಾಗಿದೆ.

ಇನ್ನು ಒಪ್ಪೋ F33 ಪ್ರೊ 5G ಫೋನ್‌ AI ಪೋರ್ಟ್ರೇಟ್ ಗ್ಲೋ ಜೊತೆಗೆ ನ್ಯಾಚುರಲ್ ಲೈಟ್, ಫ್ಲ್ಯಾಶ್‌ಲೈಟ್, ರಿಮ್ ಲೈಟ್ ಮತ್ತು ಸ್ಟುಡಿಯೋ ಲೈಟ್ ಕ್ಯಾಮೆರಾ ಎಫೆಕ್ಟ್‌ ನಂತಹ ಆಯ್ಕೆಗಳನ್ನು ಸಹ ಪಡೆದಿರುವುವ ನಿರೀಕ್ಷೆಗಳು ಇವೆ. ಮುಂಬರುವ ಈ ಫೋನ್‌ ಆಂಡ್ರಾಯ್ಡ್ ಆಧಾರಿತ ColorOS ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್‌ IP69K ರೇಟಿಂಗ್‌ ಸೌಲಭ್ಯ ಪಡೆದುಕೊಂಡಿರಲಿದೆ. ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಹಾಗೂ ವಾಲ್ಯೂಮ್ ಕಂಟ್ರೋಲ್‌ ಆಯ್ಕೆಗಳನ್ನು ನೀಡಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :