ಪ್ರಮುಖ ಮೊಬೈಲ್ ಬ್ರಾಂಡ್‌ಗಳ ಪೈಕಿ ಒಂದಾದ ಒಪ್ಪೋ ಕಂಪನಿಯು ಸದ್ದಿಲ್ಲದೆ ಹೊಸ Oppo A6s 5G ಸ್ಮಾರ್ಟ್‌ಫೋನ್ ಅನ್ನು ಇಂದು (ಮಾರ್ಚ್ 18 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಮೊಬೈಲ್ ಆಕ್ಟಾ ಕೋರ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡುವ ಜೊತೆಗೆ ColorOS 15 ಸಪೋರ್ಟ್ ಸಹ ಒಳಗೊಂಡಿದೆ. ಹಾಗೆಯೇ 6,500mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದೆ. ಈ ಮೊಬೈಲ್ ಅರೋರಾ ಗೋಲ್ಡ್ ಮತ್ತು ಪ್ಲಮ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಾಗಾದರೆ ಒಪ್ಪೋ A6s 5G ಮೊಬೈಲ್‌ನ ಬೆಲೆ, ಮಾರಾಟದ ಮಾಹಿತಿ, ಫೀಚರ್ಸ್ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಇಂದಿನಿಂದ Xiaomi 17 Ultra ಸೇಲ್ ಪ್ರಾರಂಭ! 200MP ಕ್ಯಾಮೆರಾ, ವೇಗದ ಪ್ರೊಸೆಸರ್
ನೂತನವಾಗಿ ಮಾರುಕಟ್ಟೆ ಪ್ರವೇಶಿಸಿರುವ ಒಪ್ಪೋ A6s 5G ಮೊಬೈಲ್ ಬಜೆಟ್ ಪ್ರೈಸ್‌ಟ್ಯಾಗ್ ಹೊಂದಿದೆ. ಈ ಸ್ಮಾರ್ಟ್‌ಫೋನಿನ ಆರಂಭಿಕ 4GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 18,999 ರೂಗಳು ಆಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 20,999 ರೂಗಳು ಆಗಿದೆ. ಪ್ರಸ್ತುತ ಈ ಮೊಬೈಲ್ ಅಮೆಜಾನ್, ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಹಾಗೂ ಪ್ರಮುಖ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇನ್ನು ಈ ಮೊಬೈಲ್ ಅರೋರಾ ಗೋಲ್ಡ್ ಮತ್ತು ಪ್ಲಮ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಆಸಕ್ತ ಗ್ರಾಹಕರು 1,000 ರೂಗಳ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಅಲ್ಲದೇ SBI ಕಾರ್ಡ್‌ಗಳು, ಕೋಟಕ್ ಮಹೀಂದ್ರಾ ಬ್ಯಾಂಕ್, IDFC ಫಸ್ಟ್ ಬ್ಯಾಂಕ್, BOB ಕಾರ್ಡ್‌ಗಳು, ಯೆಸ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಸೇರಿದಂತೆ ಆಯ್ದ ಕ್ರೆಡಿಟ್ ಕಾರ್ಡ್‌ಗಳಲ್ಲಿ ಮೂರು ತಿಂಗಳ ನೋ ಕಾಸ್ಟ್ EMI ಸೌಲಭ್ಯ ಪಡೆಯಬಹುದು.
ನೂತನ ಒಪ್ಪೋ A6s 5G ಮೊಬೈಲ್ 6.75 ಇಂಚಿನ LCD ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 1125 nits ಬ್ರೈಟ್ನೆಸ್ ಹೊಂದಿದೆ. ಈ ಮೊಬೈಲ್ ಆಕ್ಟಾ ಕೋರ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 4GB + 128GB ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಜನದಟ್ಟಣೆ ಮತ್ತು ಕಡಿಮೆ ನೆಟ್‌ವರ್ಕ್ ಪ್ರದೇಶಗಳಲ್ಲಿ ಉತ್ತಮ ನೆಟ್‌ವರ್ಕ್ ಗಾಗಿ AI ಲಿಂಕ್‌ಬೂಸ್ಟ್ 3.0 ಆಯ್ಕೆಯನ್ನು ಸಹ ಒಳಗೊಂಡಿದೆ.
ಒಪ್ಪೋ A6s 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಆಗಿದ್ದು ದ್ವಿತೀಯ ಕ್ಯಾಮೆರಾ 2MP ಸೆನ್ಸರ್ ಸೌಲಭ್ಯ ಪಡೆದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಮೆಗಾಪಿಕ್ಸಲ್ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 6,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಪಡೆದುಕೊಂಡಿದೆ.