ಹಲವು ಭಿನ್ನ ಮಾದರಿಯ ಫೋನ್‌ಗಳ ಮೂಲಕ ಭಾರತದಲ್ಲಿ ಸದ್ದು ಮಾಡಿರುವ ಒಪ್ಪೋ ಮೊಬೈಲ್ ಬ್ರಾಂಡ್ ಇದೀಗ ಹೊಸದೊಂದು 5G ಮೊಬೈಲ್ ಲಾಂಚ್ ಮಾಡಲು ಸಜ್ಜಾಗುತ್ತಿದೆ. ಟಿಪ್‌ಸ್ಟಾರ್ ವರದಿಗಳ ಪ್ರಕಾರ ಒಪ್ಪೋ ಹೊಸದಾಗಿ OPPO A6s 5G ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಮೂಲಕ ಒಪ್ಪೋ ತನ್ನ A ಸರಣಿಯ ಶ್ರೇಣಿಯನ್ನು ವಿಸ್ತರಿಸಲಿದೆ. ಮುಂಬರುವ ಒಪ್ಪೋ A6s 5G ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್ ಆಗಿರಲಿದೆ. ನೂತನ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಹಾಗೆಯೇ ಮುಂಬರುವ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಹಾಗಾದರೆ ಒಪ್ಪೋ A6s 5G ಮೊಬೈಲ್‌ನ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
Also Read : ಬಜೆಟ್ ಬೆಲೆಯಲ್ಲಿ iQOO Z11x 5G ಮೊಬೈಲ್ ಬಿಡುಗಡೆ! ಸ್ಟೈಲಿಶ್ ಲುಕ್ ಜೊತೆಗೆ 7,200mAh ಬ್ಯಾಟರಿ
ಒಪ್ಪೋ ಸಂಸ್ಥೆಯು ಪರಿಚಯಿಸಲಿರುವ ನೂತನ ಒಪ್ಪೋ A6s 5G ಮೊಬೈಲ್ ಇದೇ ಮಾರ್ಚ್ 20 ರ ಒಳಗೆ ಅಧಿಕೃತವಾಗಿ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಎಂಟ್ರಿ ಕೊಡಬಹುದು. ಅಲ್ಲದೇ ಅರೋರಾ ಗೋಲ್ಡ್ ಮತ್ತು ಪ್ಲಮ್ ಪರ್ಪಲ್ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯವಾಗಬಹುದು ಎಂದು ಹೇಳಲಾಗುತ್ತಿದೆ. ಇದು ಎಂಟ್ರಿ ಲೆವೆಲ್ ಮೊಬೈಲ್ ಆಗಿರುವುದರಿಂದ ಈ ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಅಂದಹಾಗೆ ಒಪ್ಪೋ ಸಂಸ್ಥೆಯು ಬೆಲೆ ಹಾಗೂ ಲಾಂಚ್ ಡೇಟ್ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಒಪ್ಪೋ A6s 5G ಮೊಬೈಲ್ 6.75 ಇಂಚಿನ LCD ಡಿಸ್‌ಪ್ಲೇ ಪಡೆದಿರಲಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಜೊತೆಗೆ 1,125 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನು ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ನಿರೀಕ್ಷೆಗಳು ಇವೆ. ಹಾಗೆಯೇ ಒಪ್ಪೋ A6s 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದ್ದು ಇದರ ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಬಲದಲ್ಲಿ ಇರಲಿದೆ.
ಇನ್ನು ಒಪ್ಪೋ A6s 5G ಫೋನ್ 6,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿರಲಿದ್ದು ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರುವ ಸಾಧ್ಯತೆಗಳು ಇವೆ. ಈ ಫೋನಿನ ಗ್ಲೋಬಲ್ ವೇರಿಯಂಟ್ 7000mAh ಬ್ಯಾಟರಿ ಪಡೆದಿದೆ. ಅದಕ್ಕೆ ಹೋಲಿಸಿದರೆ ಭಾರತೀಯ ವೇರಿಯಂಟ್ ಫೋನ್ ಸ್ಪಲ್ಪ ಕಡಿಮೆ ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.