OnePlus Nord 5
OnePlus Nord ಸ್ಮಾರ್ಟ್‌ಫೋನ್ ಪ್ರಿಯರೇ ಇಲ್ಲಿ ಗಮನಿಸಿ! ನೀವೇನಾದರೂ ಭರ್ಜರಿ ಆಫರ್‌ನಲ್ಲಿ OnePlus ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸಿದರೆ ಈ ಬೊಂಬಾಟ್ ಅವಕಾಶ ಮಿಸ್ ಮಾಡ್ಕೋಬೇಡಿ. ಹೌದು, ಒನ್‌ಪ್ಲಸ್ ಕಂಪನಿಯ OnePlus Nord CE 5 ಫೋನಿನ ಬೆಲೆಯಲ್ಲಿ ಆಕರ್ಷಕ ಇಳಿಕೆಯಾಗಿದೆ. ರಿಯಾಯಿತಿಯ ಜೊತೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಜೊತೆಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ ಇದೆ. ಅಂದಹಾಗೆ ಈ OnePlus Nord CE 5 ಮೊಬೈಲ್ MediaTek Dimensity 8350 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯಮಾಡಲಿದೆ. ಹಾಗಾದರೇ OnePlus Nord CE5 ಫೋನಿಗೆ ಡಿಸ್ಕೌಂಟ್ ಎಲ್ಲಿ ಸಿಗಲಿದೆ? ಈ ಫೋನಿನ ಫೀಚರ್ಸ್ ಏನು? ಎಂಬುದನ್ನು ಮುಂದೆ ನೋಡೋಣ.
Also Read : ಬಿಡುಗಡೆಗೆ ಸಿದ್ಧವಾಗಿದೆ Vivo V70 Series; ನಿರೀಕ್ಷಿತ ಫೀಚರ್ಸ್ ಏನು ಮತ್ತು ಬೆಲೆ ಎಷ್ಟು ಇಲ್ಲಿ ತಿಳಿಯಿರಿ
ಅಧಿಕೃತ ಒನ್‌ಪ್ಲಸ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ OnePlus Nord CE 5 5G ಫೋನ್ ಅತ್ಯುತ್ತಮ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್ ವೇರಿಯಂಟ್ 24,499 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ ಗ್ರಾಹಕರು HDFC ಅಥವಾ AXIS ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೂಲಕ ಖರೀದಿಸಿದರೆ 1,500 ರೂಗಳ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ ಗ್ರಾಹಕರು HDFC ಕ್ರೆಡಿಟ್ ಕಾರ್ಡ್ ನಾನ್ ಇಎಮ್‌ಐ ಮೂಲಕ ಖರೀದಿ ಮಾಡಿದರೆ 1,000 ರೂಗಳ ಇನ್‌ಸ್ಟಂಟ್ ರಿಯಾಯಿತಿ ದೊರೆಯುತ್ತದೆ. ಈ ಫೋನ್ ಬ್ಲ್ಯಾಕ್ ಇನ್ಫಿನಿಟಿ, ಮಾರ್ಬಲ್ ಮಿಸ್ಟ್ ಹಾಗೂ ನೆಕ್ಸಸ್ ಬ್ಲೂ ಕಲರ್ ಆಯ್ಕೆಗಳನ್ನು ಒಳಗೊಂಡಿದೆ.
OnePlus Nord CE 5 ಈ ಮೊಬೈಲ್ 6.77 ಇಂಚಿನ AMOLED ಡಿಸ್‌ಪ್ಲೇಯನ್ನು ಪಡೆದಿದ್ದು, ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಮತ್ತು 1400nits ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಇನ್ನು ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು ಅವುಗಳು ಕ್ರಮವಾಗಿ 8GB+128GB, 8GB+256GB ಮತ್ತು 12GB+256GB ಆಯ್ಕೆ ಆಗಿವೆ. ಇದರ ಜೊತೆಗೆ MediaTek Dimensity 8350 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ.
ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್ ಬರೋಬ್ಬರಿ 7100 mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ ಹೊಂದಿದ್ದು ಇದಕ್ಕೆ ಪೂರಕವಾಗಿ 80W Super VOOC ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಪಡೆದುಕೊಂಡಿದೆ. ಹಾಗೆಯೇ ಇದು USB Type-C ಪೋರ್ಟ್ ಆಯ್ಕೆ ಪಡೆದುಕೊಂಡಿದೆ.