ಇಂದು ಮಾರುಕಟ್ಟೆಗೆ ಬರ್ತಿದೆ Nothing Phone 4a ಸರಣಿ! ನಿರೀಕ್ಷಿತ ಬೆಲೆ ಮತ್ತು ಫೀಚರ್ಸ್‌ ನೋಡಿ

HIGHLIGHTS

ಇಂದು (ಮಾರ್ಚ್ 5 ರಂದು) ದೇಶಿಯ ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 4a ಸರಣಿ ಬಿಡುಗಡೆ

ನಥಿಂಗ್ ಫೋನ್ 4a ಸರಣಿಯ ಮೊಬೈಲ್‌ಗಳು 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರಲಿವೆ

ನಥಿಂಗ್ ಫೋನ್ 4a ಸರಣಿಯ ಫೋನ್‌ಗಳು 3000 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿರಲಿವೆ

ಲೀಡಿಂಗ್‌ ಮೊಬೈಲ್‌ ಕಂಪನಿಗಳ ಪೈಕಿ ಒಂದೆನಿಸಿರುವ ನಥಿಂಗ್ ಸಂಸ್ಥೆಯು ತನ್ನ ಬಹುನಿರೀಕ್ಷಿತ Nothing Phone 4a ಮೊಬೈಲ್‌ ಸರಣಿಯನ್ನು ಇಂದು (ಮಾರ್ಚ್ 5 ರಂದು) ಅಧಿಕೃತವಾಗಿ ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಅಂದಹಾಗೆ ಮುಂಬರುವ ಹೊಸ ನಥಿಂಗ್ ಫೋನ್ 4a ಸರಣಿಯು ನಥಿಂಗ್ ಫೋನ್ 4a ಹಾಗೂ ನಥಿಂಗ್ ಫೋನ್ 4a ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಇನ್ನು ಈ ಮೊಬೈಲ್‌ ಸರಣಿಯ ಲಾಂಚ್‌ ಕುರಿತು ಈಗಾಗಲೇ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೈಕ್ರೋ ಪೇಜ್‌ ಕೂಡಾ ಲೈವ್ ಆಗಿದೆ. ನಥಿಂಗ್ ಫೋನ್ 4a ಸರಣಿಯ ಮೊಬೈಲ್‌ಗಳು Snapdragon ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಅಲ್ಲದೇ AMOLED ಡಿಸ್‌ಪ್ಲೇ ಸಪೋರ್ಟ್‌ ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗಾದರೆ ನಥಿಂಗ್ ಫೋನ್ 4a ಸರಣಿಯು ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Jio ಟೆಲಿಕಾಂನ ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ 98 ದಿನಗಳ ವ್ಯಾಲಿಡಿಟಿ ಸೌಲಭ್ಯ

Nothing Phone 4a ಸರಣಿ ಇಂದು ಬಿಡುಗಡೆ

ನಥಿಂಗ್ ಸ್ಮಾರ್ಟ್‌ಫೋನ್‌ ಕಂಪನಿಯ ಮುಂಬರುವ ಹೊಸ Nothing Phone 4a ಸರಣಿಯು ಇಂದು (ಮಾರ್ಚ್ 5 ರಂದು) ಸಂಜೆ 4 ಗಂಟೆಗೆ ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಈ ಮೊಬೈಲ್‌ ಸರಣಿಯ ಲಾಂಚ್‌ ಕುರಿತು ಈಗಾಗಲೇ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೈಕ್ರೋ ಪೇಜ್‌ ಕೂಡಾ ತೆರೆಯಲಾಗಿದೆ. ಇನ್ನು ನಥಿಂಗ್‌ ಫೋನ್‌ 4a ಸರಣಿಯು ಪಿಂಕ್‌, ವೈಟ್‌ ಹಾಗೂ ಬ್ಲ್ಯಾಕ್‌ ಬಣ್ಣಗಳ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳು ಅಧಿಕ ಆಗಿವೆ. ಗಮನಿಸಬೇಕಾದ ಸಂಗತಿಯೆಂದರೆ ಕಂಪನಿಯು ಈ ಸರಣಿಯ ಮೊಬೈಲ್‌ಗಳ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ನಥಿಂಗ್‌ ಫೋನ್‌ 4a ಸರಣಿಯ ನಿರೀಕ್ಷಿತ ಫೀಚರ್ಸ್‌

ನಥಿಂಗ್‌ ಫೋನ್‌ 4a ಮತ್ತು ನಥಿಂಗ್‌ ಫೋನ್‌ 4a ಪ್ರೊ ಈ ಎರಡು ಮಾಡೆಲ್‌ಗಳು 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಸೌಲಭ್ಯದಲ್ಲಿ ಕೆಲಸ ಮಾಡಲಿವೆ ಎನ್ನಲಾಗಿದೆ. ಹಾಗೆಯೇ ಈ ಎರಡು ಫೋನ್‌ಗಳು 3000 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿರುವ ನಿರೀಕ್ಷೆಗಳು ಇವೆ. ಅಲ್ಲದೇ ನಥಿಂಗ್‌ ಫೋನ್‌ 4a ಪ್ರೊ ಮೊಬೈಲ್ Snapdragon 8s Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಹಾಗೂ 12GB RAM + 256GB ವರೆಗೂ ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿರುವ ನಿರೀಕ್ಷೆಗಳು ಇವೆ.

ನಥಿಂಗ್‌ ಫೋನ್‌ 4a ಮೊಬೈಲ್ 5,080 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಬೆಂಬಲಿಸಬಹುದು ಹಾಗೂ ಅದಕ್ಕೆ ಪೂರಕವಾಗಿ 50W ಫಾಸ್ಟ್ ಚಾರ್ಜಿಂಗ್ ಆಯ್ಕೆ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇನ್ನು ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸೌಲಭ್ಯ ಅನ್ನು ಪಡೆಯಬಹುದು ಎನ್ನಲಾಗಿದೆ. ನಥಿಂಗ್ ಮೊಬೈಲ್‌ ಕಂಪನಿಯ ಬರಲಿರುವ ಈ ನೂತನ ಫೋನ್‌ ಆಂಡ್ರಾಯ್ಡ್ 16 ಅನ್ನು ಆಧರಿಸಿದ ನಥಿಂಗ್ OS 4 ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :