ಭಾರತದಲ್ಲಿ Nothing Phone 4a ಸರಣಿ ಬಿಡುಗಡೆ! ವೇಗದ ಪ್ರೊಸೆಸರ್‌, 50MP ಕ್ಯಾಮೆರಾ ಸೌಲಭ್ಯ

HIGHLIGHTS

ನಥಿಂಗ್ ಫೋನ್ 4a ಸರಣಿಯು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ

ನಥಿಂಗ್ ಫೋನ್ 4a ಮೊಬೈಲ್‌ ಹೊಸ ಗ್ಲಿಫ್ ಬಾರ್ ಇಂಟರ್ಫೇಸ್ ಅನ್ನು ಪಡೆದಿದೆ

ನಥಿಂಗ್ ಫೋನ್ 4a ಸರಣಿಯ ಮೊಬೈಲ್‌ಗಳು ಸ್ನಾಪ್‌ಡ್ರಾಗನ್ 7 ಸರಣಿಯ ಚಿಪ್‌ಸೆಟ್‌ ಸೌಲಭ್ಯ ಪಡೆದಿವೆ

ನಥಿಂಗ್ ಸ್ಮಾರ್ಟ್‌ಫೋನ್‌ ಕಂಪನಿಯು ತನ್ನ ಹೊಸ Nothing Phone 4a ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ನಥಿಂಗ್ ಫೋನ್ 4a ಮತ್ತು ನಥಿಂಗ್ ಫೋನ್ 4a ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಇನ್ನು ಈ ಎರಡು ಮೊಬೈಲ್‌ಗಳು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಸರಣಿಯ ಚಿಪ್‌ಸೆಟ್‌ ಪವರ್‌ ಅನ್ನು ಪಡೆದಿವೆ. ಹಾಗೆಯೇ ಈ ಸರಣಿಯ ಬೇಸ್ ಮಾಡೆಲ್ ಹೊಸ ಗ್ಲಿಫ್ ಬಾರ್ ಇಂಟರ್ಫೇಸ್ ಅನ್ನು ಹೊಂದಿವೆ. ಇನ್ನು ನಥಿಂಗ್ ಫೋನ್ 4a ನಾಲ್ಕು ಕಲರ್‌ ಆಯ್ಕೆ ಒಳಗೊಂಡಿದೆ. ಅದೇ ರೀತಿ ನಥಿಂಗ್ ಫೋನ್ 4a ಪ್ರೊ ಮಾಡೆಲ್‌ ಮೂರು ಕಲರ್‌ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ನಥಿಂಗ್ ಫೋನ್ 4a ಮತ್ತು Nothing Phone 4a Pro ಫೋನ್‌ಗಳ ಬೆಲೆ, ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Also Read : ಶೀಘ್ರದಲ್ಲೇ ಭಾರತದಲ್ಲಿ Lava Bold 2 5G ಮೊಬೈಲ್‌ ಬಿಡುಗಡೆ! ಡಿಸೈನ್‌ ಹೇಗಿದೆ ನೋಡಿ

Nothing Phone 4a ಸರಣಿ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ನಥಿಂಗ್ ಫೋನ್ 4a ಮೊಬೈಲ್‌ನ 8GB RAM ಮತ್ತು 128GB ವೇರಿಯಂಟ್‌ ಬೆಲೆ 31,999ರೂ.ಗಳು ಆಗಿದೆ. ಹಾಗೆಯೇ 8GB+256GB ವೇರಿಯಂಟ್‌ ಬೆಲೆ 34,999 ರೂಗಳು ಆಗಿದೆ. ಇನ್ನು 12GB+256GB RAM ವೇರಿಯಂಟ್‌ ಬೆಲೆ 37,999 ರೂಗಳು ಆಗಿದೆ. ಗ್ರಾಹಕರು ಈ ಮೊಬೈಲ್‌ ಖರೀದಿಸುವಾಗ 1,000 ರೂಗಳ ಬ್ಯಾಂಕ್ ಕೊಡುಗೆ ಮತ್ತು ಹೆಚ್ಚುವರಿ 6,000 ರೂಗಳ ಎಕ್ಸ್‌ಚೇಂಜ್ ಬೋನಸ್ ಅನ್ನು ಪಡೆಯಬಹುದು. ಇನ್ನು ಈ ಫೋನ್‌ ಬ್ಲ್ಯಾಕ್, ಬ್ಲೂ, ಪಿಂಕ್ ಮತ್ತು ವೈಟ್‌ ಕಲರ್‌ ಆಯ್ಕೆಯಲ್ಲಿ ಲಭ್ಯ. ಇನ್ನು ನಥಿಂಗ್ ಫೋನ್ 4a ಪ್ರೊ ಮೊಬೈಲ್‌ನ 8GB+128GB ವೇರಿಯಂಟ್‌ ಬೆಲೆಯು 39,999 ರೂಗಳು ಆಗಿದೆ. ಹಾಗೆಯೇ 8GB+256GB ವೇರಿಯಂಟ್‌ ಬೆಲೆಯು 42,999 ರೂಗಳು ಆಗಿದೆ. ಇನ್ನು ಈ ಮೊಬೈಲ್‌ ಬ್ಲ್ಯಾಕ್, ಪಿಂಕ್ ಮತ್ತು ವೈಟ್‌ ಬಣ್ಣಗಳಲ್ಲಿ ಲಭ್ಯವಾಗಲಿದೆ.

ನಥಿಂಗ್‌ ಫೋನ್‌ 4a ಫೀಚರ್ಸ್‌

ನಥಿಂಗ್‌ ಫೋನ್‌ 4a ಫೋನ್‌ 6.78 ಇಂಚಿನ LTPS ಫ್ಲೆಕ್ಸಿಬಲ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್‌ ಜೊತೆಗೆ 4,500 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್‌ Snapdragon 7s Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್‌ ಸೌಲಭ್ಯ ಒಳಗೊಂಡಿದೆ. ಈ ಫೋನ್ ಹೊಸ ಗ್ಲಿಫ್ ಬಾರ್ ಇಂಟರ್ಫೇಸ್ ಅನ್ನು ಸಹ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು OIS ಬೆಂಬಲಿತ 50MP ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಪೆರಿಸ್ಕೋಪ್ ಸೆನ್ಸಾರ್‌ ಹಾಗೂ 8MP ಅಲ್ಟ್ರಾವೈಡ್ ಸೆನ್ಸಾರ್‌ ಸಪೋರ್ಟ್‌ ಪಡೆದಿವೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ 5,400mAh ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 50W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ನಥಿಂಗ್‌ ಫೋನ್‌ 4a ಪ್ರೊ ಫೀಚರ್ಸ್‌

ನಥಿಂಗ್‌ ಫೋನ್‌ 4a ಪ್ರೊ ಮೊಬೈಲ್‌ 6.83 ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 144Hz ವರೆಗೆ ರಿಫ್ರೆಶ್ ರೇಟ್‌ ಜೊತೆಗೆ 5,000 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್‌ ಕ್ವಾಲ್ಕಾಮ್‌ನ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್‌ ಸೌಲಭ್ಯ ಒಳಗೊಂಡಿದೆ. ಈ ಫೋನ್ ದೊಡ್ಡ ಗ್ಲಿಫ್ ಮ್ಯಾಟ್ರಿಕ್ಸ್ ಇಂಟರ್ಫೇಸ್ ಅನ್ನು ಸಹ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು Sony LYT-700c ಬೆಂಬಲಿತ 50MP ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಟೆಲಿಫೋಟೋ ಸೆನ್ಸಾರ್‌ ಹಾಗೂ 8MP ಅಲ್ಟ್ರಾವೈಡ್ ಸೆನ್ಸಾರ್‌ ಸಪೋರ್ಟ್‌ ಪಡೆದಿವೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ 5,400mAh ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 50W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :