ನಾಳೆ Motorola Signature ಫೋನ್‌ ಮಾರಾಟ ಆರಂಭಿಸಲಿದೆ; ಈ ರೀತಿ ಖರೀದಿಸಿದರೆ ಆಫರ್‌ ಸಿಗುತ್ತೆ!

Updated on 29-Jan-2026
HIGHLIGHTS

Motorola Signature ಜನವರಿ 30 ರಂದು ಭಾರತದಲ್ಲಿ ಮಾರಾಟ ಪ್ರಾರಂಭಿಸಲಿದೆ

Motorola Signature ಮೊಬೈಲ್‌ ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ

Motorola Signature ಮೊಬೈಲ್‌ Flipkart ತಾಣದ ಮೂಲಕ ಸೇಲ್ ಆರಂಭಿಸಲಿದೆ

Motorola ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ Motorola Signature ಸ್ಮಾರ್ಟ್‌ಫೋನ್‌ ತನ್ನ ಡಿಸೈನ್‌ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಪ್ರೀಮಿಯಂ ಮೊಬೈಲ್‌ ನಾಳೆ (ಜನವರಿ 30 ರಂದು) ಭಾರತದ ಮಾರುಕಟ್ಟೆಯಲ್ಲಿ ಸೇಲ್‌ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಮೊಬೈಲ್‌ Snapdragon 8 Gen 5 chipset ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ. ಹಾಗೆಯೇ ಹಿಂಬದಿಯಲ್ಲಿ 50 ಮೆಗಾಪಿಕ್ಸಲ್ ಸೆನ್ಸಾರ್‌ ಇರುವ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇನ್ನುಳಿದಂತೆ Motorola Signature ಫೋನ್‌ ಎಲ್ಲಿ ಖರೀದಿಸಬೇಕು ಹಾಗೂ ಬೆಲೆ ಎಷ್ಟು ಮುಂದೆ ತಿಳಿಯೋಣ.

Also Read : OnePlus 13 ಬೆಲೆಯಲ್ಲಿ 8,000 ರೂಗಳ ನೇರ ಡಿಸ್ಕೌಂಟ್‌! ಈ ಜಬರ್ದಸ್ತ್‌ ಆಫರ್‌ ಎಲ್ಲಿ ಗೊತ್ತಾ?

Motorola Signature ವೇರಿಯಂಟ್‌ ಆಯ್ಕೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ Motorola Signature ಫೋನ್‌ ಮೂರು ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಇದರ 12GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 59,999 ರೂಗಳು ಆಗಿದೆ. ಹಾಗೆಯೇ 16GB RAM + 512GB ಸ್ಟೋರೇಜ್ ಹೊಂದಿರುವ ವೇರಿಯಂಟ್‌ ಬೆಲೆ 64,999 ರೂಗಳು ಆಗಿದ್ದು ಇನ್ನು 16GB RAM + 1TB ಸ್ಟೋರೇಜ್‌ ವೇರಿಯಂಟ್‌ ದರವು 69,999 ರೂಗಳು ಆಗಿದೆ. ಇನ್ನು ಈ ಫೋನ್ ಖರೀದಿ ಮಾಡುವ ಗ್ರಾಹಕರು HDFC ಬ್ಯಾಂಕ್ ಮತ್ತು Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 5,000 ರೂ.ಗಳ ಇನ್‌ಸ್ಟಂಟ್‌ ಡಿಸ್ಕೌಂಟ್‌ ಪಡೆಯಬಹುದಾಗಿದೆ. ಅಲ್ಲದೇ 5,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್ ಪ್ರಯೋಜನ ಸಹ ಸಿಗಲಿದೆ. ಇನ್ನು ಈ ಮೊಬೈಲ್‌ ಜನವರಿ 30 ರಂದು Flipkart ತಾಣದ ಮೂಲಕ ಸೇಲ್ ಆರಂಭಿಸಲಿದೆ. ಇನ್ನು ಈ ಫೋನ್ ಪ್ಯಾಂಟೋನ್ ಕಾರ್ಬನ್ ಹಾಗೂ ಪ್ಯಾಂಟೋನ್ ಮಾರ್ಟಿನಿ ಆಲಿವ್ ಕಲರ್‌ ಆಯ್ಕೆ ಪಡೆದುಕೊಂಡಿದೆ.

Motorola Signature ಫೋನಿನ ಪ್ರಮುಖ ಫೀಚರ್

ಮೊಟೊರೊಲಾ ಸಂಸ್ಥೆಯ ಈ ನೂತನ ಫೋನ್‌ 6.8 ಇಂಚಿನ Super HD AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1,264×2,780 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದು 165Hz ವರೆಗೆ refresh rate ಪಡೆದಿರುವ ಜೊತೆಗೆ 6,200 nits ಸೌಲಭ್ಯ ಹೊಂದಿದೆ. ಈ ಫೋನ್ Snapdragon 8 Gen 5 chipset ಪ್ರೊಸೆಸರ್‌ ಬಲದ ಜೊತೆಗೆ Android 16 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಹಾಗೆಯೇ ಮೊಬೈಲ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಸಹ 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇವೆ. ಇದರ ಜೊತೆಗೆ ಸೆಲ್ಫಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.

ಹೊಸ Motorola Signature ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಪವರ್‌ ಪಡೆದುಕೊಂಡಿದ್ದು ಇದಕ್ಕೆ ಅನುಗುಣವಾಗಿ ಆಗಿ 90W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್‌ ಹೊಂದಿದೆ. ಅಂದಹಾಗೆ ಈ ಫೋನ್ 41 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ ಇದು 5W ವೈರ್ಡ್ ರಿವರ್ಸ್ ಚಾರ್ಜಿಂಗ್ ಮಾಡುವ ವ್ಯವಸ್ಥೆಯ ಆಯ್ಕೆ ಹೊಂದಿದೆ. ಹಾಗೆಯೇ ಈ ಫೋನ್‌ 5G, 4G LTE, Wi-Fi 7, ಬ್ಲೂಟೂತ್ 6.0, USB ಟೈಪ್-C ಪೋರ್ಟ್, GPS ಸಪೋರ್ಟ್ ಸಹ ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :