ಮೊಟೊರೊಲಾ ಕಂಪನಿಯ Motorola Signature ಮೊಬೈಲ್ ಪ್ರೀಮಿಯಂ ಪ್ರೈಸ್ ಹಾಗೂ ಅಧಿಕ ಬ್ಯಾಟರಿ ಆಯ್ಕೆಯ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಪ್ರಸ್ತುತ ಈ ಮೊಬೈಲ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್ ಸ್ನ್ಯಾಪ್‌ಡ್ರಾಗನ್ 8 ಜೆನ್ 5 ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 5,200mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಫೋನ್ ಪ್ಯಾಂಟೋನ್ ಕಾರ್ಬನ್ ಹಾಗೂ ಪ್ಯಾಂಟೋನ್ ಮಾರ್ಟಿನಿ ಆಲಿವ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಸಿಗ್ನಿಚರ್ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಜುಲೈ 24 ರಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ Lava Virat V1 5G ಮೊಬೈಲ್! ಇಲ್ಲಿದೆ ಮಾಹಿತಿ
ಪ್ರೀಮಿಯಂ ಬೆಲೆಯ ಹಾಗೂ ಬಿಗ್ ಬ್ಯಾಟರಿ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಮೊಟೊರೊಲಾ ಸಿಗ್ನಿಚರ್ ಸ್ಮಾರ್ಟ್‌ಫೋನ್ ಸದ್ಯ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಸಖತ್ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 16GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 79,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 62,499 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಪ್ಯಾಂಟೋನ್ ಕಾರ್ಬನ್ ಹಾಗೂ ಪ್ಯಾಂಟೋನ್ ಮಾರ್ಟಿನಿ ಆಲಿವ್ ಕಲರ್ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ.
ಮೊಟೊರೊಲಾ ಸಂಸ್ಥೆಯ ಈ ನೂತನ ಫೋನ್ 6.8 ಇಂಚಿನ ಸೂಪರ್ HD AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1,264×2,780 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದು 165Hz ವರೆಗೆ refresh rate ಹೊಂದಿದ್ದು 6,200 nits ಸೌಲಭ್ಯ ನೀಡಲಾಗಿದೆ. ಈ ಫೋನ್ Snapdragon 8 Gen 5 chipset ಪ್ರೊಸೆಸರ್ ಪವರ್ ಜೊತೆಗೆ Android 16 ಓಎಸ್ ಸಪೋರ್ಟ್ ಒಳಗೊಂಡಿದೆ. ಮೊಟೊರೊಲಾ ಸಿಗ್ನಿಚರ್ ಮೊಬೈಲ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು ಸಹ 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇವೆ. ಇನ್ನು ಸೆಲ್ಫಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ.
ಸಂಸ್ಥೆಯ ನೂತನ ಮೊಟೊರೊಲಾ ಸಿಗ್ನಿಚರ್ ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು ಇದಕ್ಕೆ ಸಪೋರ್ಟಿವ ಆಗಿ 90W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಅಂದಹಾಗೆ ಈ ಫೋನ್ 41 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ ಇದು 5W ವೈರ್ಡ್ ರಿವರ್ಸ್ ಚಾರ್ಜಿಂಗ್ ಮಾಡುವ ವ್ಯವಸ್ಥೆಯ ಆಯ್ಕೆ ಹೊಂದಿದೆ. ಉಳಿದಂತೆ ಇದು ಇದು 5G, 4G LTE, Wi-Fi 7, ಬ್ಲೂಟೂತ್ 6.0, USB ಟೈಪ್-C ಪೋರ್ಟ್, GPS ಸಪೋರ್ಟ್ ಸಹ ಪಡೆದಿದೆ.