ಮೊಟೊರೊಲಾ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ದೈತ್ಯ Motorola Razr Fold ಸ್ಮಾರ್ಟ್‌ಫೋನ್ ಇಂದು (ಮೇ 20 ರಂದು) ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಿದೆ. ಈ ಮಡಚುವ ಮಾದರಿಯ ಮೊಬೈಲ್ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್ ಪ್ರೊಸೆಸರ್ ಸಪೋರ್ಟ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಇದು 50MP ಸೋನಿ LYTIA ಸೆನ್ಸರ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿರುವ ಜೊತೆಗೆ ಈ ಮೊಬೈಲ್ ಪ್ಯಾಂಟೋನ್ ಬ್ಲ್ಯಾಕೆಂಡ್ ಬ್ಲೂ ಮತ್ತು ಪ್ಯಾಂಟೋನ್ ಲಿಲಿ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಮೊಟೊರೊಲಾ ರೇಜರ್ ಫೋಲ್ಡ್ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸದ್ದಿಲ್ಲದೆ ಭಾರತದಲ್ಲಿ Moto G37 ಸ್ಮಾರ್ಟ್‌ಫೋನ್ ಲಾಂಚ್! ಅಗ್ಗದ ಬೆಲೆಯಲ್ಲಿ ಲಭ್ಯ
ಮೊಟೊರೊಲಾ ಸಂಸ್ಥೆಯ ಮೊಟೊರೊಲಾ ರೇಜರ್ ಫೋಲ್ಡ್ ಮೊಬೈಲ್ ಇಂದು (ಮೇ 20 ರಂದು) ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಶುರು ಮಾಡಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮೊಬೈಲ್‌ನ 12GB RAM + 256GB ಸ್ಟೋರೇಜ್ ವೇರಿಯಂಟ್ 1,49,999 ರೂ.ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 16GB + 512GB ಸ್ಟೋರೇಜ್ ವೇರಿಯಂಟ್ ಮಾಡೆಲ್ 1,59,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಮೊಬೈಲ್ ಎರಡು ಬಣ್ಣಗಳ ಆಯ್ಕೆ ಪಡೆದಿದ್ದು ಅವುಗಳು ಕ್ರಮವಾಗಿ ಪ್ಯಾಂಟೋನ್ ಬ್ಲ್ಯಾಕೆಂಡ್ ಬ್ಲೂ ಮತ್ತು ಪ್ಯಾಂಟೋನ್ ಲಿಲಿ ವೈಟ್ ಕಲರ್ ಆಗಿವೆ.
ಮೊಟೊರೊಲಾ ರೇಜರ್ ಫೋಲ್ಡ್ ಮೊಬೈಲ್‌ನ ಕವರ್ ಡಿಸ್‌ಪ್ಲೇಯು 6.6 ಇಂಚಿನ LTPO pOLED ಅನ್ನು ಹೊಂದಿದೆ. ಹಾಗೆಯೇ ಒಳ ಡಿಸ್‌ಪ್ಲೇಯು 8.1 ಇಂಚಿನ LTPO pOLED ಆಗಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 12GB RAM + 256GB ಹಾಗೂ 16GB + 512GB ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 6,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸಪೋರ್ಟ್ ಜೊತೆಗೆ 80W ಟರ್ಬೊಪವರ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.
ಹಾಗೆಯೇ ಮೊಟೊರೊಲಾ ರೇಜರ್ ಫೋಲ್ಡ್ ಮೊಬೈಲ್ ಇದರ ಪ್ರಾಥಮಿಕ ಕ್ಯಾಮೆರಾವು 50MP ಸೋನಿ LYTIA ಸೆನ್ಸಾರ್ ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 50MP ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾ ಸಹ 50MP ಸೆನ್ಸಾರ್ ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ರಿಯರ್ ಕ್ಯಾಮೆರಾಗಳು 30fps ನಲ್ಲಿ 8K ವರೆಗೆ, 60fps ನಲ್ಲಿ 4K ವರೆಗೆ ವೀಡಿಯೊ ರೆಕಾರ್ಡಿಂಗ್ ಅನ್ನು ಸಪೋರ್ಟ್ ಮಾಡುತ್ತವೆ.