ಮೊಟೊರೊಲಾ ಸಂಸ್ಥೆಯ ಇತ್ತೀಚಿನ ಕೆಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿವೆ. ಅವುಗಳ ಪೈಕಿ Motorola g57 power 5G ಮೊಬೈಲ್ ಕೂಡಾ ಒಂದಾಗಿದೆ. ಬಜೆಟ್ ದರದ ವಿಭಾಗದಲ್ಲಿ ಕಾಣಿಸಿಕೊಂಡಿರುವ ಈ ಮೊಬೈಲ್ ಇದೀಗ ಭರ್ಜರಿ ಬೆಲೆ ಇಳಿಕೆ ಪಡೆದು ಮತ್ತಷ್ಟು ಸಸ್ತಾ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹೌದು ಇ ಕಾಮರ್ಸ್ ತಾಣ Flipkart ನಲ್ಲಿ ಮೊಟೊರೊಲಾ ಸಂಸ್ಥೆಯ Motorola g57 power 5G ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಅಂದಹಾಗೆ ಈ ಮೊಬೈಲ್ Snapdragon 6s gen 4 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ Motorola g57 power 5G ಫೋನಿಗೆ ಲಭ್ಯ ಇರುವ ಆಫರ್ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಫೆಬ್ರವರಿ 10 ರಂದು ಮಾರುಕಟ್ಟೆಗೆ ಬರ್ತಿದೆ OPPO K14x 5G ಮೊಬೈಲ್! ವಾವ್ ಎನಿಸುವ ಫೀಚರ್ಸ್
Motorola g57 power 5G ಮೊಬೈಲ್ ಬೊಂಬಾಟ್ ಬೆಲೆ ಇಳಿಕೆ ಕಂಡಿದೆ. Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಈ ಫೋನಿನ 8 GB RAM + 128 GB ವೇರಿಯಂಟ್ 17,999 ರೂಗಳ ಪ್ರೈಸ್‌ಟ್ಯಾಗ್ ಪಡೆದಿದ್ದು, ಆದರೆ ಪ್ರಸ್ತುತ 13,999 ರೂಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಪಡೆಯಬಹುದು. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಭಿನ್ನ EMI ಆಯ್ಕೆಗಳನ್ನು ಪಡೆಯಬಹುದು. ಇನ್ನು ಈ ಫೋನ್ Pantone Regatta, Pantone Fluidity ಮತ್ತು Pantone Corsair ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Motorola g57 power 5G ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.7 ಇಂಚಿನ ಪುಲ್ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಈ ಮೊಬೈಲ್ Snapdragon 6s gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ Motorola g57 power 5Gಮೊಬೈಲ್ ಹಿಂಭಾಗದಲ್ಲಿ ಆಕರ್ಷಕ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿರುವ ಜೊತೆಗೆ 8MP ಸೆನ್ಸಾರ್ ಪಡೆದಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 8MP ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಲದೇ ಪನೋರಮಾ, ಪೋರ್ಟ್ರೇಟ್, ಪ್ರೊ ವೀಡಿಯೊ, ಸಿಂಗಲ್ ಟೇಕ್, ಸ್ಲೋ ಮೋಷನ್ ಆಯ್ಕೆಗಳು ಇವೆ. ಹಾಗೆಯೇ ಈ ಫೋನ್ 7000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.