Motorola Edge 70 Pro ಬಿಡುಗಡೆಗೆ ಮುಹೂರ್ತ ಫಿಕ್ಸ್‌! ಕರ್ವ್ಡ್ AMOLED ಡಿಸ್‌ಪ್ಲೇ ಸಾಧ್ಯತೆ

HIGHLIGHTS

ಮೊಟೊ ಎಡ್ಜ್‌ 70 ಪ್ರೊ ಮೊಬೈಲ್‌ ಇದೇ ಏಪ್ರಿಲ್‌ 22 ರಂದು ಬರಲಿದೆ

ಮೊಟೊರೊಲಾದ ಈ ಮೊಬೈಲ್ 6,500mAh ಬ್ಯಾಟರಿ ಪಡೆದಿರುವ ಸಾಧ್ಯತೆ

ಮುಂಬರುವ ಈ ಫೋನ್‌ ಮೂರು ಆಕರ್ಷಕ ಕಲರ್‌ ಆಯ್ಕೆ ಒಳಗೊಂಡಿರಲಿದೆ

ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ Motorola Edge 70 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಹುನಿರೀಕ್ಷಿತ ಈ ಮೊಬೈಲ್‌ ಇದೇ ಏಪ್ರಿಲ್‌ 22 ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಈ ಮೊಬೈಲ್‌ನ ಕೆಲವು ಫೀಚರ್ಸ್‌ ಈಗಾಗಲೇ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಆಕರ್ಷಿಸಿವೆ. ಮುಖ್ಯವಾಗಿ ಈ ಸ್ಮಾರ್ಟ್‌ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಅಲ್ಲದೇ ಇದು ಪ್ರಮುಖ ಹೈಲೈಟ್‌ ಎನಿಸಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುವುದು ಖಚಿತ ಎನ್ನಲಾಗಿದೆ. ಹಾಗಾದರೆ ಮುಂಬರುವ ಮೊಟೊರೊಲಾ ಎಡ್ಜ್‌ 70 ಪ್ರೊ ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : OnePlus Nord 5 ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ! ಬೆಲೆಯಲ್ಲಿ ಭಾರೀ ಇಳಿಕೆ

Motorola Edge 70 Pro ಮೊಬೈಲ್‌ ಬಿಡುಗಡೆ ದಿನಾಂಕ

ಮೊಟೊರೊಲಾ ಕಂಪನಿಯು ಮೀಡ್‌ರೇಂಜ್‌ನಲ್ಲಿ ಮೊಟೊರೊಲಾ ಎಡ್ಜ್‌ 70 ಪ್ರೊ ಲಾಂಚ್ ಮಾಡಲು ಸಕಲ ಸಜ್ಜಾಗಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ ಅನ್ನು ಇದೇ ಏಪ್ರಿಲ್‌ 22 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ. ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಲಾಂಚ್ ಬಳಿಕ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ. ಅಂದಹಾಗೆ ಈ ಫೋನ್‌ ಪ್ಯಾಂಟೋನ್ ಟೀ, ಪ್ಯಾಂಟೋನ್ ಟೈಟಾನ್ ಮತ್ತು ಪ್ಯಾಂಟೋನ್ ಲಿಲಿ ವೈಟ್ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿರಲಿದೆ.

ಮೊಟೊರೊಲಾ ಎಡ್ಜ್‌ 70 ಪ್ರೊ ನಿರೀಕ್ಷಿತ ಫೀಚರ್ಸ್‌

ಹೊಸ ಮೊಟೊರೊಲಾ ಎಡ್ಜ್‌ 70 ಪ್ರೊ ಮೊಬೈಲ್‌ 6.8 ಇಂಚಿನ 1.5K ರೆಸಲ್ಯೂಶನ್‌ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಇದರ ಸ್ಕ್ರೀನ್‌ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಜೊತೆಗೆ 5,200 nits ಬ್ರೈಟ್ನೆಸ್‌ ಬೆಂಬಲ ಹೊಂದಿರಲಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 90W ಟರ್ಬೊಪವರ್ ಚಾರ್ಜಿಂಗ್ ಬೆಂಬಲ ಸಹ ಒಳಗೊಂಡಿರುವ ಸಾಧ್ಯತೆಗಳು ಇವೆ.

ಇನ್ನು ಮೊಟೊರೊಲಾ ಎಡ್ಜ್‌ 70 ಪ್ರೊ ಫೋನ್‌ ಹಿಂಭಾಗದಲ್ಲಿ 50MP ಸೋನಿ LYT-710 ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಮುಂಭಾಗದಲ್ಲಿನ ಕ್ಯಾಮೆರಾವು ಸಹ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರುವ ನಿರೀಕ್ಷೆಗಳು ಇವೆ. ಇದು ಹಲೋ UI ಜೊತೆಗೆ Android 16 ಓಎಸ್‌ ಸಪೋರ್ಟ್‌ ಒಳಗೊಂಡಿರಲಿದೆ. ಅಲ್ಲದೇ ಈ ಫೋನ್‌ 12GB RAM ವರೆಗೂ ಆಯ್ಕೆ ಹೊಂದಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :