Motorola ಸಂಸ್ಥೆಯ ಎಡ್ಜ್ ಸರಣಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಆ ಪೈಕಿ Motorola Edge 70 ಸಹ ಒಂದಾಗಿದೆ. ಪ್ರಸ್ತುತ ಈ ಆಕರ್ಷಕ ಮೊಬೈಲ್ Flipkart ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ಬೆಲೆ ಇಳಿಕೆ ಹೊಂದಿದ್ದು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಬಹುದಾಗಿದೆ. ಇನ್ನು ಈ ಮೊಬೈಲ್ ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರುವ ಜೊತೆಗೆ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. Motorola ಪ್ಲಾಟ್‌ಫಾರ್ಮ್ ನಲ್ಲಿ ಈ ಫೋನಿಗೆ ಲಭ್ಯ ಇರುವ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸದ್ದಿಲ್ಲದೆ ಭಾರತದಲ್ಲಿ Oppo Reno 15c ಲಾಂಚ್; ಬೆಲೆ ಹಾಗೂ ಫೀಚರ್ಸ್ ತಿಳಿಯಿರಿ
Motorola ಮೊಬೈಲ್ ಬ್ರ್ಯಾಂಡ್‌ನ Motorola Edge 70 ಮೊಬೈಲ್ ಬೊಂಬಾಟ್ ಬೆಲೆ ಇಳಿಕೆ ಪಡೆದಿದೆ. Flipkart ಇ ಕಾಮರ್ಸ್ ತಾಣದಲ್ಲಿ 8GB RAM + 256 GB ವೇರಿಯಂಟ್‌ನ ಈ ಮೊಬೈಲ್ 34,999 ರೂಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಆದರೆ ಇದೀಗ 29,999 ರೂಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಆಫರ್ ಸಹ ಪಡೆಯಬಹುದು. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಭಿನ್ನ ಯೋಜನೆಗಳ EMI ಆಯ್ಕೆಗಳನ್ನು ಪಡೆಯಬಹುದು. ಇನ್ನು ಈ ಫೋನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Motorola Edge 70 ಮೊಬೈಲ್ 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ ಅತ್ಯುತ್ತಮ ರೆಸಲ್ಯೂಶನ್ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಹೊಂದಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 4,500 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸೌಲಭ್ಯ ಒಳಗೊಂಡಿದೆ. ಇದು Dolby Vision ಸಪೋರ್ಟ್ ಕೂಡಾ ಪಡೆದಿದೆ. ಅಂದಹಾಗೆ ಈ ಮೊಬೈಲ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 8GB RAM ಮತ್ತು 256 GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ Motorola Edge 70 ಮೊಬೈಲ್ ಕ್ಯಾಮೆರಾ ವಿಭಾಗದಿಂದಲೂ ಆಕರ್ಷಕ ಎನಿಸುತ್ತದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್ ಆಗಿದ್ದು, ಸೆಕೆಂಡರಿ ಕ್ಯಾಮೆರಾವು ಸಹ 50MP ಸೆನ್ಸಾರ್ ಆಗಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 50MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 5000mAh ಬ್ಯಾಟರಿ ಜೊತೆಗೆ 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.