Motorola Edge 70 Fusion
ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ Motorola Edge 70 Fusion ಮೊಬೈಲ್ ಭಾರತದಲ್ಲಿ ಇಂದು (ಮಾರ್ಚ್ 6 ರಂದು) ಬಿಡುಗಡೆ ಆಗಿದೆ. ಈ ಹೊಸ ಮೊಬೈಲ್ Snapdragon 7s Gen 4 ಚಿಪ್‌ಸೆಟ್ ಪ್ರೊಸೆಸರ್ ಸಪೋರ್ಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 144Hz ರಿಫ್ರೆಶ್ ರೇಟ್ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು 50MP ಸೋನಿ LYT-710 ಸೆನ್ಸರ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಮೊಬೈಲ್ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಕಲರ್ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಹಾಗಾದರೇ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Airtel ಟೆಲಿಕಾಂನ ಈ ಬಜೆಟ್ ಬೆಲೆಯ ಪ್ಲಾನ್‌ನಲ್ಲಿ 365 ದಿನಗಳ ವ್ಯಾಲಿಡಿಟಿ ಸಿಗುತ್ತೆ
ಮೊಟೊರೊಲಾ ಕಂಪನಿಯ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ 8GB + 256GB ಸ್ಟೋರೇಜ್ ವೇರಿಯಂಟ್ 26,999 ರೂಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 12GB + 256GB ಸ್ಟೋರೇಜ್ ವೇರಿಯಂಟ್ ಮಾಡೆಲ್ 32,999 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಮೊಬೈಲ್ ಮೂರು ಬಣ್ಣಗಳ ಆಯ್ಕೆ ಪಡೆದಿದ್ದು ಅವುಗಳು ಕ್ರಮವಾಗಿ ಬ್ಲೂ ಸರ್ಫ್, ಕಂಟ್ರಿ ಏರ್ ಮತ್ತು ಸಿಲೂಯೆಟ್ ಆಗಿವೆ. ಈ ಸ್ಮಾರ್ಟ್‌ಫೋನ್ ಇಂದು (ಮಾರ್ಚ್ 6 ರಂದು) ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಸೀಮಿತ ಮಾರಾಟದ ಅವಧಿಗೆ ಲಭ್ಯವಿದೆ. ಇದು ಮಾರ್ಚ್ 12, ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್, Motorola.in ಮತ್ತು ಪ್ರಮುಖ ರಿಟೇಲ್ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಬರಲಿದೆ.
ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ 6.78 ಇಂಚಿನ 1.5K ಕ್ವಾಡ್ ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 44Hz ರಿಫ್ರೆಶ್ ರೇಟ್ ಜೊತೆಗೆ 5,200 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 7s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB + 256GB ಹಾಗೂ 12GB + 256GB ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 7000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸಪೋರ್ಟ್ ಜೊತೆಗೆ 68W ಟರ್ಬೊಪವರ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.
ಹಾಗೆಯೇ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ ಇದರ ಪ್ರಾಥಮಿಕ ಕ್ಯಾಮೆರಾವು 50MP ಸೋನಿ LYT-710 ಸೆನ್ಸಾರ್ ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾ ವೈಡ್ ಕ್ಯಾಮೆರಾ ಅನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಈ ಮೊಬೈಲ್ ಎಲ್ಲಾ ಕ್ಯಾಮೆರಾಗಳಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಫೋನ್ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೋ ಸಪೋರ್ಟ್ ಜೊತೆಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.