ಸದ್ಯದಲ್ಲೇ ಬರಲಿರುವ Motorola Edge 70 Fusion ಫೋನಿನ ಆರಂಭಿಕ ಸೇಲ್‌ ಡೇಟ್‌ ಬಹಿರಂಗ

HIGHLIGHTS

ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮಾರ್ಚ್‌ 6 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ

ಮೊಟೊರೊಲಾ ಎಡ್ಜ್ 70 ಫ್ಯೂಷನ್ Snapdragon 7s Gen 3 ಪ್ರೊಸೆಸರ್‌ ಪವರ್‌ ಹೊಂದಿರಲಿದೆ

ಮೊಟೊರೊಲಾ ಎಡ್ಜ್ 70 ಫ್ಯೂಷನ್ ಫೋನಿನ ಸ್ಕ್ರೀನ್‌ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿರಲಿದೆ

ಮೊಟೊರೊಲಾ ಮೊಬೈಲ್‌ ಸಂಸ್ಥೆಯು ಅಧಿಕೃತವಾಗಿ Motorola Edge 70 Fusion ಹೆಸರಿನ ಮತ್ತೊಂದು ಹೊಸ 5G ಸ್ಮಾರ್ಟ್‌ಫೋನ್‌ ಅನ್ನು ಘೋಷಿಸಿದೆ. ನೂತನ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮಾರ್ಚ್ 6 ರಂದು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಮೊಟೊರೊಲಾ ದೃಢಪಡಿಸಿದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಮೂಲಕ ಕಂಪನಿಯು ಹೊಸ ಮೊಬೈಲ್‌ನ ಆರಂಭಿಕ ಮಾರಾಟ ದಿನಾಂಕವನ್ನು ಬಹಿರಂಗಪಡಿಸಿದೆ. ಅಂದಹಾಗೆ ಈ ಫೋನ್‌ ಮೊಟೊ AI ಬೆಂಬಲಿತ 50MP ಸೋನಿ LYT-710 ಮುಖ್ಯ ಸೆನ್ಸಾರ್‌ ಪಡೆದಿರುವುದು ಪ್ರಮುಖ ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ. ಹಾಗೆಯೇ Snapdragon 7s Gen 3 SoC ಪ್ರೊಸೆಸರ್‌ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನುಳಿದಂತೆ ಮುಂಬರುವ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಫೋನ್‌ನ ಇನ್ನಷ್ಟು ವಿವರಗಳನ್ನು ಮುಂದೆ ತಿಳಿಯೋಣ.

Also Read : ಜನಪ್ರಿಯ Google Pixel 10 Pro ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ! ಇದು ಅತ್ಯುತ್ತಮ ಕ್ಯಾಮೆರಾ ಫೋನ್‌

Motorola Edge 70 Fusion ಆರಂಭಿಕ ಮಾರಾಟ ದಿನಾಂಕ

ಮೊಟೊ ಸಂಸ್ಥೆಯು ಮೊಟೊರೊಲಾ ಎಡ್ಜ್‌ 70 ಸರಣಿಯಲ್ಲಿ ಪರಿಚಯಿಸಲಿರುವ ಮೊಟೊರೊಲಾ ಎಡ್ಜ್‌ 70 ಫ್ಯೂಷನ್‌ ಈಗಾಗಲೇ ಗ್ರಾಹಕರು ಕುತೂಹಲ ಹೆಚ್ಚಿಸಿದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಡರ್ ಈ ಮೊಬೈಲ್‌ನ ಆರಂಭಿಕ ಮಾರಾಟ ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದೆ. ಅಂದಹಾಗೆ ಈ ಫೋನ್‌ ಪ್ಯಾಂಟೋನ್ ಸಿಲೂಯೆಟ್, ಪ್ಯಾಂಟೋನ್ ಬ್ಲೂ ಸರ್ಫ್ ಮತ್ತು ಪ್ಯಾಂಟೋನ್ ಕಂಟ್ರಿ ಏರ್ ಕಲರ್‌ ಆಯ್ಕೆ ಪಡೆದಿರಬಹುದು ಎನ್ನಲಾಗಿದೆ. ಅಧಿಕೃತ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

ಮೊಟೊರೊಲಾ ಎಡ್ಜ್‌ 70 ಫ್ಯೂಷನ್‌ ನಿರೀಕ್ಷಿತ ಫೀಚರ್ಸ್‌

ಮೊಟೊರೊಲಾದ ಮುಂಬರುವ ಈ ಹೊಸ ಫೋನ್‌ 6.78 ಇಂಚಿನ ಕ್ವಾಡ್‌ ಕರ್ವ್ OLED ಮಾದರಿಯ ಡಿಸ್‌ಪ್ಲೇ ಹೊಂದಿರಲಿದೆ. ಹಾಗೆಯೇ ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್‌ ಒಳಗೊಂಡಿರುವ ಸಾಧ್ಯತೆಗಳು ಇವೆ ಜೊತೆಗೆ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಣೆ ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್‌ Snapdragon 7s Gen 3 SoC ಚಿಪ್‌ಸೆಟ್‌ ಪ್ರೊಸೆಸರ್‌ ಬಲ ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ Hello UI ಸಪೋರ್ಟ್‌ ಜೊತೆಗೆ ಇತ್ತೀಚಿನ ಆಂಡ್ರಾಯ್ಡ್ 16 OS ನಲ್ಲಿ ರನ್‌ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಾಗೆಯೇ ಮೊಟೊರೊಲಾ ಎಡ್ಜ್‌ 70 ಫ್ಯೂಷನ್‌ ಮೊಬೈಲ್‌ 50MP ಸೋನಿ LYT-710 ಸೆನ್ಸಾರ್‌ ಪಡೆದಿರುವ ನಿರೀಕ್ಷೆಗಳು ಇವೆ. ಇದರೊಂದಿಗೆ ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾ ವೈಡ್ ಸೆನ್ಸಾರ್‌ ಪಡೆದಿರಲಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಒದಗಿಸುವ ಸೂಚನೆಗಳು ಇವೆ. ಅಂದಹಾಗೆ ಎಲ್ಲಾ ಕ್ಯಾಮೆರಾಗಳಿಗೆ 4K ಸಪೋರ್ಟ್‌ ಇರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 7000 mAh ಬ್ಯಾಟರಿ ಸಪೋರ್ಟ್‌ ಜೊತೆಗೆ 68W ಟರ್ಬೊ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿರುವುದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :