Moto G37 Launched in India Price Under Rs 15000
ಮೊಟೊರೊಲಾ ಕಂಪನಿಯು ತನ್ನ g ಸರಣಿಯಲ್ಲಿ ಹೊಸದಾಗಿ Moto G37 ಮತ್ತು Moto G37 Power ಹೆಸರಿನ ಎರಡು ಮಾಡೆಲ್‌ಗಳನ್ನು ಸೇರ್ಪಡೆ ಮಾಡಲು ತಯಾರಾಗಿದೆ. ಈ ಮೊಬೈಲ್‌ಗಳ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಅಂದಹಾಗೆ ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರಲಿವೆ. ಇದರೊಂದಿಗೆ 7,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿರಲಿವೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್ ರಕ್ಷಣೆ ಸಹ ಹೊಂದಿರಲಿವೆ. ಹಾಗಾದರೆ ಮುಂಬರುವ ಮೊಟೊ G37 ಹಾಗೂ ಮೊಟೊ G37 ಪವರ್ ಫೋನ್‌ಗಳ ಲಾಂಚ್ ಡೇಟ್, ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : ಅಗ್ಗದ ದರದ TECNO POP X ಮೊಬೈಲ್ ಈಗ ಮತ್ತಷ್ಟು ರಿಯಾಯಿತಿ ಬೆಲೆಗೆ ಲಭ್ಯ!
ಮೊಟೊರೊಲಾ ಕಂಪನಿಯು ಹೊಸದಾಗಿ ಮೊಟೊ G37 ಹಾಗೂ ಮೊಟೊ G37 ಪವರ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದೆ. ಈ ಎರಡು ಮೊಬೈಲ್‌ಗಳು ನಾಳೆ ( ಮೇ 19 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿವೆ. ಲಾಂಚ್ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಪೇಜ್ ಸಹ ಲೈವ್ ಆಗಿದೆ. ಇನ್ನು ಈ ಫೋನ್‌ಗಳು blue ಮತ್ತು turquoise green colour ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಫೋನ್‌ಗಳ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.
ಮುಂಬರುವ ಹೊಸ ಮೊಟೊ G37 ಮತ್ತು ಮೊಟೊ G37 ಪವರ್ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿವೆ ಎನ್ನಲಾಗಿದೆ. ಅಲ್ಲದೇ ಈ ಮೊಬೈಲ್‌ಗಳು 7,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರುತ್ತದೆ ಎಂದು ಮೊಟೊ ದೃಢಪಡಿಸಿದೆ. ಹಾಗೆಯೇ ಈ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್ ರಕ್ಷಣೆ ಹಾಗೂ MIL-STD-810H ಮಿಲಿಟರಿ-ದರ್ಜೆಯ ಪ್ರಮಾಣೀಕರಣವನ್ನು ಸಹ ಒಳಗೊಂಡಿರುತ್ತವೆ ಎನ್ನಲಾಗಿದೆ.
ಇನ್ನು ಈ ಫೋನ್ 6.67 ಇಂಚಿನ HD+ LCD ಡಿಸ್‌ಪ್ಲೇ ಹೊಂದಿರಲಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಜೊತೆಗೆ 1,050 nits ಬ್ರೈಟ್ನೆಸ್ ಸಪೋರ್ಟ್ ಪಡೆದಿರುವ ನಿರೀಕ್ಷೆಗಳು ಇವೆ. ಇನ್ನು ಇದು 4GB RAM + 128GB/ 256GB ಸ್ಟೋರೇಜ್ ಆಯ್ಕೆ ಒಳಗೊಂಡಿರಲಿವೆ. ಹಾಗೆಯೇ 50MP ಮುಖ್ಯ ಕ್ಯಾಮೆರಾ ಹಾಗೂ 8MP ಮುಂಭಾಗದ ಕ್ಯಾಮೆರಾ ರಚನೆ ಪಡೆದಿರಲಿವೆ. ಇದರೊಂದಿಗೆ IP64 ನೀರು ಮತ್ತು ಧೂಳು ನಿರೋಧಕ ರೇಟಿಂಗ್ ಸೌಲಭ್ಯ ಇರಬಹುದು.