ಮೊಟೊ ಸಂಸ್ಥೆಯು ಭಿನ್ನ ಶ್ರೇಣಿಯ ಮೊಬೈಲ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಕಂಪನಿಯು ಇತ್ತೀಚಿಗೆ ಲಾಂಚ್ ಮಾಡಿರುವ Moto G37 Power ಮೊಬೈಲ್‌ನ ಮೊದಲ ಮಾರಾಟ ಇಂದು (ಮೇ 25 ರಂದು) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಶುರುವಾಗಲಿದೆ. ಈ ಬಜೆಟ್ ದರದ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 SoC ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 7,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಈ ಮೊಬೈಲ್ ಪ್ಯಾಂಟೋನ್ ನಾಟಿಕಲ್ ಬ್ಲೂ, ಪ್ಯಾಂಟೋನ್ ಇಂಪೆನೆಟ್ರೇಬಲ್ ಮತ್ತು ಪ್ಯಾಂಟೋನ್ ಕ್ಯಾಪ್ರಿ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಮೊಟೊ G37 ಪವರ್ ಸ್ಮಾರ್ಟ್‌ಫೋನ್ ಸೇಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Jio ಟೆಲಿಕಾಂನ ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ ಪಕ್ಕಾ
ಇತ್ತೀಚಿಗೆ ಬಿಡುಗಡೆ ಆಗಿರುವ ಮೊಟೊ G37 ಪವರ್ ಫೋನ್ ಆಕರ್ಷಕ ಫೀಚರ್ಸ್ ಮೂಲಕ ಗಮನ ಸೆಳೆದಿದೆ. ಈ ಮೊಬೈಲ್ ಇಂದು (ಮೇ 25 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮೊದಲ ಸೇಲ್ ಪ್ರಾರಂಭ ಮಾಡಲಿದೆ. ಈ ಮೊಬೈಲ್‌ನ 4GB + 64GB ಸ್ಟೋರೇಜ್ ವೇರಿಯಂಟ್ 15,999 ರೂ.ಗಳ ಬೆಲೆಯನ್ನು ಹೊಂದಿದೆ. ಹಾಗೆಯೇ 8GB + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 18,999 ರೂ.ಗಳು ಆಗಿದೆ. ಇನ್ನು ಈ ಫೋನ್ ಪ್ಯಾಂಟೋನ್ ನಾಟಿಕಲ್ ಬ್ಲೂ, ಪ್ಯಾಂಟೋನ್ ಇಂಪೆನೆಟ್ರೇಬಲ್ ಮತ್ತು ಪ್ಯಾಂಟೋನ್ ಕ್ಯಾಪ್ರಿ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ಮೊಟೊ G37 ಪವರ್ ಮೊಬೈಲ್ 6.7 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದ್ದು ಇದರ ಸ್ಕ್ರೀನ್ 1604 x 720 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಜೊತೆಗೆ 1050 nits ಬ್ರೈಟ್‌ನೆಸ್ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಒಳಗೊಂಡಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 4GB RAM + 64GB ಹಾಗೂ 8GB + 128GB ಸ್ಟೋರೇಜ್ ಆಯ್ಕೆ ಪಡೆದಿದೆ. ಇನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದು.
ಮೊಟೊ G37 ಪವರ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಆಗಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 30W ಟರ್ಬೋಚಾರ್ಜಿಂಗ್ ಹಾಗೂ 6W ರಿವರ್ಸ್ ಚಾರ್ಜಿಂಗ್ ಬೆಂಬಲ ಹೊಂದಿದೆ.