Moto G Max launching tomorrow but know complete features of the phone on today
ಜನಪ್ರಿಯ ಮೊಟೊರೊಲಾ ಸಂಸ್ಥೆಯು ನೂತನವಾಗಿ Moto G Max ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಮೊಟೊರೊಲಾ ಕಂಪನಿಯು ತನ್ನ ಈ ಹೊಸ ಮೊಬೈಲ್ ಅನ್ನು ಇಂದು (ಆಗಷ್ಟ್ 14 ರಂದು) ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಮೊಟೊ G ಮ್ಯಾಕ್ಸ್ ಮೊಬೈಲ್ 7,000mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಈ ಮೊಬೈಲ್ ಸ್ನ್ಯಾಪ್‌ಡ್ರಾಗನ್ 6s ಜೆನ್ 4 ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಇದು ಮೂರು ಆಕರ್ಷಕ ಕಲರ್ ಆಯ್ಕೆ ಪಡೆದಿರುವ ಜೊತೆಗೆ LCD ಡಿಸ್‌ಪ್ಲೇ ಪಡೆದಿರುವ ನಿರೀಕ್ಷೆಗಳು ಹೆಚ್ಚಿವೆ. ಹಾಗಾದರೇ ಮೊಟೊ G ಮ್ಯಾಕ್ಸ್ ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
Also Read : BSNL ಗ್ರಾಹಕರಿಗೆ ಸಿಹಿಸುದ್ದಿ! ಈ ಪ್ಲಾನ್‌ನಲ್ಲಿ ಇದೀಗ 412 ದಿನಗಳ ವ್ಯಾಲಿಡಿಟಿ ಸೌಲಭ್ಯ
ದೇಶೀಯ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಮೊಟೊ G ಮ್ಯಾಕ್ಸ್ ಫೋನಿನ ನಿರೀಕ್ಷಿತ ಫೀಚರ್ಸ್ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಮೊಬೈಲ್ ಇಂದು (ಆಗಷ್ಟ್ 14 ರಂದು) ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆದಿದೆ. Pantone Stargazer, Pantone Malaga ಮತ್ತು Pantone Alaskan Blue ಬಣ್ಣಗಳ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.
ಮೊಟೊ G ಮ್ಯಾಕ್ಸ್ ಮೊಬೈಲ್ 6.72 ಇಂಚಿನ FHD+ LCD ಡಿಸ್ಪ್ಲೇ ಸೌಲಭ್ಯ ಹೊಂದಿರಲಿದ್ದು, ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ನೀಡಲಿದೆ. ಫೋನಿನ ಡಿಸ್‌ಪ್ಲೇಯ ರಕ್ಷಣೆಗೆ Corning Gorilla Glass 7i ಬಳಸಲಾಗಿದೆ. ಅಲ್ಲದೇ ಈ ಫೋನ್ ಸ್ನ್ಯಾಪ್‌ಡ್ರಾಗನ್ 6s ಜೆನ್ 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ 6GB + 128 GB ಹಾಗೂ 8GB + 128 GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಹಾಗೆಯೇ ಇದು IP64 ರೇಟಿಂಗ್ ಸೌಲಭ್ಯ ಸಹ ಒಳಗೊಂಡಿರಲಿದೆ.
ಮೊಟೊ G ಮ್ಯಾಕ್ಸ್ ಮೊಬೈಲ್ ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಗಮನ ನೀಡಿರುವಂತೆ ತೋರುತ್ತಿದ್ದು, ಇದು ಹಿಂಭಾಗದಲ್ಲಿ 50MP Sony LYT-600 ಪ್ರೈಮರಿ ಕ್ಯಾಮೆರಾ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಮೊಟೊ ಸಂಸ್ಥೆಯು ಹಗಲು ಹಾಗೂ ಮಂದ ಬೆಳಕಿನಲ್ಲೂ ಉತ್ತಮ ಫೋಟೋಗಳನ್ನು ನೀಡುವತ್ತ ಗಮನಹರಿಸಿದೆ. ಅಲ್ಲದೇ ಇದು 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರುವುದು ಖಚಿತ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್ 16 ನೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಸಹ ಪಡೆಯುತ್ತದೆ.