Lava Virat V1 Pro 5G
ಲಾವಾ ಕಂಪನಿಯ ಹೊಸದಾಗಿ ಬಿಡುಗಡೆ ಮಾಡಿರುವ Lava Virat V1 Pro 5G ಫೋನ್ ಬಜೆಟ್ ಬೆಲೆ ಹಾಗೂ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ನಾಳೆ (ಆಗಷ್ಟ್ 31 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಸೇಲ್ ಪ್ರಾರಂಭ ಮಾಡಿದೆ. ಈ ನೂತನ ಮೊಬೈಲ್ ಆಕ್ಟಾ-ಕೋರ್ ಯುನಿಸಾಕ್ T8200 ಚಿಪ್‌ಸೆಟ್ ಪ್ರೊಸೆಸರ್ ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಇನ್ನು ಹಾಗೆಯೇ ಈ ಮೊಬೈಲ್ 50MP ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಸಿಕ್ಕಿಂ ಮಿಡ್‌ನೈಟ್ ಮತ್ತು ಸ್ಪಿಟಿ ಫ್ರಾಸ್ಟ್ ಕಲರ್ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ಲಾವಾ ವಿರಾಟ್ V1 ಪ್ರೊ 5G ಸ್ಮಾರ್ಟ್‌ಫೋನ್ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಹೊಸ Realme C100i ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ; ಅಗ್ಗದ ಪ್ರೈಸ್‌ಟ್ಯಾಗ್
ಲಾವಾ ಕಂಪನಿಯ ನೂತನ ಲಾವಾ ವಿರಾಟ್ V1 ಪ್ರೊ 5G ಮೊಬೈಲ್ ನಾಳೆ (ಆಗಷ್ಟ್ 31 ರಿಂದ) ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಲಿದೆ. ಈ ಮೊಬೈಲ್‌ನ 6GB RAM + 128GB ಸ್ಟೋರೇಜ್ ವೇರಿಯಂಟ್ 15,999 ರೂ.ಗಳ ಬೆಲೆಯನ್ನು ಹೊಂದಿದೆ. ಆದರೆ ಆರಂಭಿಕ ಕೊಡುಗೆಯಾಗಿ ಕಂಪನಿಯು 2,000 ರೂ.ಗಳ ವರೆಗೆ ಬ್ಯಾಂಕ್ ರಿಯಾಯಿತಿಯನ್ನು ತಿಳಿಸಿದೆ ಹೀಗಾಗಿ ಈ ಫೋನ್ ಬೆಲೆ 13,999 ರೂ.ಗಳು ಆಗಿದೆ. ಈ ಫೋನ್ ಸಿಕ್ಕಿಂ ಮಿಡ್‌ನೈಟ್ ಮತ್ತು ಸ್ಪಿಟಿ ಫ್ರಾಸ್ಟ್ ಕಲರ್ ಆಯ್ಕೆ ಪಡೆದುಕೊಂಡಿದೆ.
ಲಾವಾ ವಿರಾಟ್ V1 ಪ್ರೊ 5G ಮೊಬೈಲ್ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಜೊತೆಗೆ 720 x 1,600 ಪಿಕ್ಸಲ್ ರೆಸಲ್ಯೂಶನ ಸೌಲಭ್ಯ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಆಕ್ಟಾ-ಕೋರ್ ಯುನಿಸಾಕ್ T8200 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಈ ಫೋನ್ 6GB RAM + 128GB ವೇರಿಯಂಟ್ ಆಯ್ಕೆ ಒಳಗೊಂಡಿದೆ. ಅಲ್ಲದೇ ಈ ಫೋನ್ IP64 ರೇಟಿಂಗ್ ಹೊಂದಿದೆ.
ಹಾಗೆಯೇ ಲಾವಾ ವಿರಾಟ್ V1 ಪ್ರೊ 5G ಮೊಬೈಲ್ ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು AI ಸೆನ್ಸಾರ್ ಬಲವನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 6,000mAh ಬ್ಯಾಟರಿ ಸಪೋರ್ಟ್ ಹೊಂದಿದೆ. ಇದು 5G, 4G LTE, Wi-Fi 5, ಬ್ಲೂಟೂತ್ 5.4, USB ಟೈಪ್-C ಪೋರ್ಟ್ ಮತ್ತು ಸಂಪರ್ಕಕ್ಕಾಗಿ GPS ಅನ್ನು ಬೆಂಬಲಿಸುತ್ತದೆ.