ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಾವಾ ಮೊಬೈಲ್‌ಗಳು ಬೇಡಿಕೆ ಪಡೆದಿವೆ. ಲಾವಾ ಕಂಪನಿಯು ಇದೀಗ ಹೊಸದಾಗಿ Lava Virat V1 5G ಹಾಗೂ Lava Virat V1 ಸ್ಮಾರ್ಟ್‌ಫೋನ್‌ಗಳನ್ನು ನಾಳೆ (ಜುಲೈ 24 ರಂದು) ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶೇಷವಾಗಿ ಲಾವಾ ವಿರಾಟ್ V1 5G ಮಾದರಿಯು UNISOC T8200 ಆಕ್ಟಾ ಕೋರ್ ಚಿಪ್‌ಸೆಟ್ ಪ್ರೊಸೆಸರ್ ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಪವರ್ ಅನ್ನು ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಅಲ್ಲದೇ ಮುಂಬರುವ ಈ ಎರಡು ಮೊಬೈಲ್ 13MP AI ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ ಎನ್ನಲಾಗಿದೆ. ಹಾಗಾದರೆ ಮಾರುಕಟ್ಟೆಗೆ ಬರಲಿರುವ ಲಾವಾ ವಿರಾಟ್ V1 ಸರಣಿಯ ಫೋನ್‌ಗಳ ಲಾಂಚ್ ಡೇಟ್ ಹಾಗೂ ಇತರೆ ಮಾಹಿತಿ ಮುಂದೆ ತಿಳಿಯೋಣ.
Also Read : Samsung Galaxy Watch 9 ಬಿಡುಗಡೆ: ಹೊಸ ಸ್ನಾಪ್‌ಡ್ರಾಗನ್ ವೇರ್ ಎಲೈಟ್ ಚಿಪ್ ಸೌಲಭ್ಯ
ಲಾವಾ ಕಂಪನಿಯು ತನ್ನ ಹೊಸ ಲಾವಾ ವಿರಾಟ್ V1 5G ಮತ್ತು ಲಾವಾ ವಿರಾಟ್ V1 ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅಂದಹಾಗೆ ಈ ಎರಡೂ ಫೋನ್‌ಗಳು ನಾಳೆ (ಜುಲೈ 24 ರಂದು) ಮಧ್ಯಾಹ್ನ 12 ಗಂಟೆಗೆ ಲಾಂಚ್ ಆಗಲಿವೆ. ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗಳಿಗಾಗಿ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಬಿಡುಗಡೆಯ ನಂತರ ಎರಡೂ ಮಾದರಿಗಳು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿ ದೃಢಪಡಿಸಿದೆ.
ಮುಂಬರುವ ಹೊಸ ಲಾವಾ ವಿರಾಟ್ V1 5G ಫೋನ್ 6.75 ಇಂಚಿನ HD+ ಡಿಸ್ಪ್ಲೇ ಪಡೆದಿರಲಿದ್ದು, ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸಪೋರ್ಟ್‌ನಲ್ಲಿ ಇರಲಿದೆ. ಇನ್ನು ಈ ಫೋನ್ ಆಕ್ಟಾ ಕೋರ್ UNISOC T8200 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಹೊಂದಿರಲಿದ್ದು ಇದಕ್ಕೆ ಅನುಗುಣವಾಗಿ 4GB RAM + 64GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ಹಾಗೆಯೇ 4GB virtual RAM ಸಪೋರ್ಟ್ ಇರಲಿದೆ ಎನ್ನಲಾಗಿದೆ.
ಲಾವಾ ವಿರಾಟ್ V1 5G ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿರಲಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 13MP AI ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರಲಿದೆ. ಅಲ್ಲದೇ ಧೂಳು ಮತ್ತು ನೀರು-ನಿರೋಧಕ್ಕಾಗಿ ಇದು IP64 ರೇಟಿಂಗ್ ಸೌಲಭ್ಯ ಹೊಂದಿರಲಿದೆ.