ಅಗ್ಗದ ಬೆಲೆಗೆ Lava Bold N2 ಲಾಂಚ್! ಡ್ಯುಯಲ್‌ ಕ್ಯಾಮೆರಾ ಜೊತೆಗೆ 5,000mAh ಬ್ಯಾಟರಿ ಸೌಲಭ್ಯ

Updated on 17-Feb-2026
HIGHLIGHTS

ಲಾವಾ ಸಂಸ್ಥೆಯ ಈ ಮೊಬೈಲ್‌ 4GB RAM + 64 GB ಸಪೋರ್ಟ್ ಪಡೆದಿದೆ

ಲಾವಾದ ಈ ನೂತನ ಮೊಬೈಲ್‌ Android 15 Go ಓಎಸ್‌ನಲ್ಲಿ ಕೆಲಸ ಮಾಡಲಿದೆ

ಲಾವಾ ಕಂಪನಿಯ ಈ ನೂತನ ಫೋನ್‌ಫೆಬ್ರವರಿ 27 ರಂದು ಮಾರಾಟ ಶುರು ಮಾಡಲಿದೆ

ಲಾವಾ ಮೊಬೈಲ್ ಬ್ರ್ಯಾಂಡ್ ಇಂದು (ಫೆಬ್ರವರಿ 17 ರಂದು) ಭಾರತದಲ್ಲಿ Lava Bold N2 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಮೂಲಕ ಲಾವಾ ತನ್ನ ಮೊಬೈಲ್‌ ಶ್ರೇಣಿಯನ್ನು ವಿಸ್ತರಿಸಿದೆ. ಈ ಫೋನ್‌ Unisoc SC9863A ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು ಈ ಫೋನ್‌ ಬರೋಬ್ಬರಿ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಹೊಂದಿದೆ. ದೇಶಿಯ ಮಾರುಕಟ್ಟೆಗೆ Lava Bold N2 ಸ್ಮಾರ್ಟ್‌ಫೋನ್ ಎರಡು ಕಲರ್‌ ಆಯ್ಕೆಗಳಲ್ಲಿ ಪ್ರವೇಶ ಮಾಡಿದೆ. ಇನ್ನುಳಿದಂತೆ Lava Bold N2 ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಶೀಘ್ರದಲ್ಲೇ Vivo X300 FE ಲಾಂಚ್! 50MP ಕ್ಯಾಮೆರಾ, 12GB RAM ಜೊತೆಗೆ ಬಿಗ್‌ ಬ್ಯಾಟರಿ ಸಾಧ್ಯತೆ

Lava Bold N2 ಮೊಬೈಲ್‌ ಬೆಲೆ ಹಾಗೂ ಲಭ್ಯತೆ

Lava ಕಂಪನಿಯು ಹೊಸದಾಗಿ Lava Bold N2 ಮೊಬೈಲ್‌ ಅನ್ನು ಅಗ್ಗದ ದರದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನಿನ 4GB RAM + 64 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 7,499 ರೂಗಳು ಆಗಿದೆ. ಇನ್ನು ಈ ಫೋನ್‌ ಇದೇ ಫೆಬ್ರವರಿ 27 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಮೊಬೈಲ್ ಇಂಡಸ್ ಬ್ಲ್ಯಾಕ್ ಮತ್ತು ಸಿಯಾಚಿನ್ ವೈಟ್ ಈ ಎರಡು ಕಲರ್‌ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.

Lava Bold N2 ಮೊಬೈಲ್‌ನ ಫೀಚರ್ಸ್‌

Lava Bold N2 ಮೊಬೈಲ್‌ 90Hz ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದು ವಾಟರ್‌ ಡ್ರಾಪ್ ಶೈಲಿಯ ನಾಚ್ ಹೊಂದಿದೆ. ಅಂದಹಾಗೆ ಈ ಫೋನ್‌ Unisoc SC9863A ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಇದರೊಂದಿಗೆ 4GB RAM + 64GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದಿದ್ದು ಇದಕ್ಕೆ ಪೂರಕವಾಗಿ Android 15 Go ಓಎಸ್‌ ಸಪೋರ್ಟ್‌ ಪಡೆದುಕೊಂಡಿದೆ. ಅಲ್ಲದೇ ಸುರಕ್ಷತೆಗಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ. ಈ ಫೋನ್‌ 4GB RAM + 64 GB ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಇನ್ನು Lava Bold N2 ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಜೊತೆಗೆ ಸಪೋರ್ಟಿವ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಹಿಂಭಾಗದಲ್ಲಿ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಹಾಗೆಯೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಈ ಫೋನ್ IP64 ರೇಟಿಂಗ್‌ ಸೌಲಭ್ಯ ಪಡೆದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :