ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ Lava ಸಂಸ್ಥೆಯು ಕೆಲವು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಕಂಪನಿಯು ಇದೀಗ ತನ್ನ Bold ಸರಣಿಯಲ್ಲಿ ಹೊಸದಾಗಿ Lava Bold N2 5G ಸ್ಮಾರ್ಟ್‌ಫೋನ್ ಪರಿಚಯಿಸಲು ಸಿದ್ಧವಾಗಿದೆ. ಲಾವಾ ಬೋಲ್ಡ್ N2 5G ಮೊಬೈಲ್ ಇದೇ ಜೂನ್ 3 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇನ್ನು ಮುಂಬರುವ ಲಾವಾ ಬೋಲ್ಡ್ N2 5G ಮೊಬೈಲ್ ಲಾಂಚ್ ಕುರಿತು ಅಮೆಜಾನ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಅಂದಹಾಗೆ ಈ ಫೋನ್ 13MP ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ ಎನ್ನಲಾಗಿದೆ. ಹಾಗಾದರೆ ಮಾರುಕಟ್ಟೆಗೆ ಲಗ್ಗೆ ಇಡುವ ಲಾವಾ ಬೋಲ್ಡ್ N2 5G ಮೊಬೈಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 10,001mAh ಬ್ಯಾಟರಿ ಮೂಲಕ ಗಮನ ಸೆಳೆದಿರುವ realme P4 Power 5G ಬೆಲೆಯಲ್ಲಿ ಈಗ ಇಳಿಕೆ!
ಲಾವಾ ಕಂಪನಿಯ ಲಾವಾ ಬೋಲ್ಡ್ N2 5G ಮೊಬೈಲ್ ಇದೇ ಜೂನ್ 3 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಕುರಿತು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ಲೈವ್ ಮಾಡಲಾಗಿದೆ. ಅಲ್ಲದೇ ಲಾಂಚ್ ಬಳಿಕ ಈ ಫೋನ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಈ ಫೋನ್ ಬ್ಲೂ ಕಲರ್ ಆಯ್ಕೆಯಲ್ಲಿ ಎಂಟ್ರಿ ನೀಡುವ ಸಾಧ್ಯತೆಗಳು ಇವೆ.
ಲಾವಾ ಬೋಲ್ಡ್ N2 5G ಮೊಬೈಲ್ ಬ್ಲೂ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವುದು ಬಹುತೇಕ ಪಕ್ಕಾ ಎಂದು ಹೇಳಲಾಗಿದೆ. ಹಾಗೆಯೇ ಈ ಮೊಬೈಲ್ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಇರಲಿದ್ದು ಅದರ ಜೊತೆಗೆ LED ಫ್ಲ್ಯಾಷ್ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಯಿದೆ. ಅಂದಹಾಗೆ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಈ ಮೊಬೈಲ್ Unisoc 9863A ಚಿಪ್‌ಸೆಟ್ ಪ್ರೊಸೆಸರ್ ಹೊಂದಿರುವ ನಿರೀಕ್ಷೆಗಳು ಇವೆ.
ಲಾವಾ ಬೋಲ್ಡ್ N2 5G ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್ ಆಗಿರಲಿದ್ದು ಇದು 4 GB RAM ಮತ್ತು 64 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆಯಬಹುದು. ಹಾಗೆಯೇ ಈ ಸ್ಮಾರ್ಟ್‌ಫೋನ್ 18W ಚಾರ್ಜಿಂಗ್ ಸಪೋರ್ಟ್ ಜೊತೆಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆಯುವ ಸಾಧ್ಯತೆ ಇದೆ. ಟೀಸರ್‌ನಿಂದ ತಿಳಿದಂತೆ ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5mm ಆಡಿಯೊ ಜ್ಯಾಕ್ ಮತ್ತು ಸ್ಪೀಕರ್ ಗ್ರಿಲ್ ಅನ್ನು ಫೋನಿನ ಕೆಳಭಾಗದಲ್ಲಿ ನೀಡಲಾಗಿದೆ.