ಲಾವಾ ಮೊಬೈಲ್ ಕಂಪನಿಯ Lava Bold N1 5G ಸ್ಮಾರ್ಟ್‌ಫೋನ್ ಸೇಲ್ ಇಂದು (ಮೇ 27 ರಂದು) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಶುರುವಾಗಲಿದೆ. ಈ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ T765 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಮೊಬೈಲ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದುಕೊಂಡಿದೆ. ಇದಲ್ಲದೆ ಹಿಂಭಾಗದಲ್ಲಿ ಪ್ರೀಮಿಯಂ ಗ್ಲಾಸಿ ಡಿಸೈನ್ ಅನ್ನು ಪಡೆದಿರುವುದು ಹೈಲೈಟ್ ಎನಿಸಿದ್ದು, 13MP ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಅಲ್ಲದೇ ರಾಯಲ್ ಬ್ಲೂ ಮತ್ತು ಚಾಂಪಿಯನ್ ಗೋಲ್ಡ್ ಕಲರ್ ಕಲರ್ ಆಯ್ಕೆ ಸಹ ಪಡೆದುಕೊಂಡಿದೆ. ಹಾಗಾದರೆ ಹೊಸ ಲಾವಾ ಬೋಲ್ಡ್ N1 5G ಸ್ಮಾರ್ಟ್‌ಫೋನ್ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ.
Also Read : Jio ಟೆಲಿಕಾಂನ ಈ ಅಗ್ಗದ ಪ್ಲಾನಿನಲ್ಲಿ ಪ್ರತಿದಿನ ಡೇಟಾ ಜೊತೆಗೆ ಎಂಟರ್‌ಟೈನ್‌ಮೆಂಟ್ ಧಮಾಕಾ!
ಹೊಸ ಲಾವಾ ಬೋಲ್ಡ್ N1 5G ಮೊಬೈಲ್ ಅಗ್ಗದ ಬೆಲೆಯ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ನಾಳೆ (ಮೇ 27 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಈ ಮೊಬೈಲ್ 4 GB RAM + 64 GB ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದ್ದು, ಇದರ ಬೆಲೆಯು 11,999 ರೂ.ಗಳು ಆಗಿದೆ. ಇನ್ನು ಈ ಫೋನ್ ರಾಯಲ್ ಬ್ಲೂ ಮತ್ತು ಚಾಂಪಿಯನ್ ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಲಭ್ಯ.
ನೂತನ ಲಾವಾ ಬೋಲ್ಡ್ N1 5G ಮೊಬೈಲ್ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದರ ಸ್ಕ್ರೀನ್ 90Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 2.5D ಗ್ಲಾಸ್ ರಕ್ಷಣೆಯನ್ನು ಪಡೆದಿರುವ ಜೊತೆಗೆ 20:9 ಆಕಾರ ಅನುಪಾತವನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್ ಆಕ್ಟಾ ಕೋರ್ T765 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಪಡೆದಿದೆ.
ಅಲ್ಲದೇ ಲಾವಾ ಬೋಲ್ಡ್ N1 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 10W ವೈರ್ಡ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.