ಮಾರ್ಚ್ 13 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ Lava Bold 2 5G! ನಿರೀಕ್ಷಿತ ಫೀಚರ್ಸ್‌ ನೋಡಿ

HIGHLIGHTS

ಮಾರ್ಚ್ 13 ರಂದು ಭಾರತದಕ್ಕೆ ಬರಲಿದೆ Lava Bold 2 5G ಮೊಬೈಲ್‌

ಲಾವಾ ಬೋಲ್ಡ್‌ 2 5G ಮೊಬೈಲ್‌ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ ಆಗಿರಲಿದೆ

ಲಾವಾ ಬೋಲ್ಡ್‌ 2 5G ಮೊಬೈಲ್‌ ಡ್ಯುಯಲ್ ಕ್ಯಾಮೆರಾ ಪಡೆದಿರುವ ಸಾಧ್ಯತೆಗಳು ಇವೆ

ಲಾವಾ ಕಂಪನಿಯ ಮುಂಬರುವ Lava Bold 2 5G ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ. ಈ ಮೊಬೈಲ್‌ ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪನಿಯು ಈಗ ಬಹಿರಂಗಪಡಿಸಿದೆ. ಇನ್ನು ಈ ಫೋನ್‌ ಲಾಂಚ್‌ ಕುರಿತಾಗಿ Amazon ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಕೂಡಾ ತೆರೆಯಲಾಗಿದೆ. ಲಾವಾ ಬೋಲ್ಡ್‌ 2 5G ಫೋನ್‌ 3D ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ 120Hz ವರೆಗಿನ ರಿಫ್ರೆಶ್ ರೇಟ್‌ ಪಡೆದಿರುವುದು ಪ್ರಮುಖ ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ. ಹಾಗೆಯೇ ಈ ಮೊಬೈಲ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿರಲಿದೆ ಎನ್ನಲಾಗಿದೆ. ಹಾಗಾದರೆ ಲಾವಾ ಬೋಲ್ಡ್‌ 2 5G ಫೋನಿನ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಸೇರಿದಂತೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Amazon EPL 2026 ಸೇಲ್‌: Vivo X300 5G ಮೊಬೈಲ್‌ ಖರೀದಿಗೆ ಇದೇ ಬೆಸ್ಟ್‌ ಟೈಮ್‌

Lava Bold 2 5G ಮೊಬೈಲ್‌ ಲಾಂಚ್ ಯಾವಾಗ

ಲಾವಾ ಸಂಸ್ಥೆಯು ಲಾವಾ ಬೋಲ್ಡ್‌ 2 5G ಮೊಬೈಲ್‌ ಅನ್ನು ಇದೇ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ದೃಢಪಡಿಸಿದೆ. ಇನ್ನು ಈ ಮೊಬೈಲ್‌ ಬ್ರೈಟರ್, ಸ್ಲಿಮ್ಮರ್, ಬೋಲ್ಡರ್ ಎಂಬ ಟ್ಯಾಗ್ ಲೈನ್‌ನೊಂದಿಗೆ ಎಂಟ್ರಿ ಕೊಡುವ ಸೂಚನೆ ನೀಡಿದೆ. ಕಂಪನಿಯು ಫೋನ್‌ನ ವಿನ್ಯಾಸವನ್ನು ಸಹ ಟೀಸ್ ಮಾಡಿದೆ.ಈ ಸ್ಮಾರ್ಟ್‌ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಈಗ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಲೈವ್ ಆಗಿದೆ. ಹಾಗೆಯೇ ಲಾವಾ ಬೋಲ್ಡ್‌ 2 5G ಮೊಬೈಲ್‌ ಇಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಪ್ರತ್ಯೇಕವಾಗಿ ಲಭ್ಯವಿರುತ್ತದೆ ಎನ್ನಲಾಗಿದೆ.

ಹಾಗೆಯೇ ಲಾವಾ ಬೋಲ್ಡ್‌ 5G ಮೊಬೈಲ್‌ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ರಚನೆಯನ್ನು ಒಳಗೊಂಡಿರಲಿದ್ದು ಇದು ಹಿಂಬದಿಯಲ್ಲಿ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿರಲಿದೆ. ಅಲ್ಲದೇ ಈ ಮೊಬೈಲ್‌ ಫ್ಲಾಟ್ ಫ್ರೇಮ್ ಮತ್ತು ಫ್ಲಾಟ್ ಬ್ಯಾಕ್‌ ಪ್ಯಾನೆಲ್ ಅನ್ನು ಹೊಂದಿರಲಿದೆ ಜೊತೆಗೆ ಹಿಂಭಾಗದಲ್ಲಿ LED ಫ್ಲ್ಯಾಷ್ ಅನ್ನು ಪಡೆದಿರಲಿದೆ. ಇನ್ನು ಮೊಬೈಲ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ ಬಟನ್ ಒಳಗೊಂಡಿರಲಿದೆ. ಇನ್ನು ಫೋನಿನ ಅಧಿಕೃತ ಲಾಂಚ್‌ ಡೇಟ್‌ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ.

ಲಾವಾ ಕಂಪನಿಯ ಈ ಹಿಂದಿನ ಲಾವಾ ಬೋಲ್ಡ್‌ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 6GB ವರೆಗೆ RAM ಮತ್ತು 128GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಈ ಫೋನ್‌ ಹಿಂಭಾಗದಲ್ಲಿ ಸೋನಿ ಸೆನ್ಸಾರ್‌ ಒಳಗೊಂಡ 64 ಮೆಗಾಪಿಕ್ಸೆಲ್ AI ಬೆಂಬಲಿತ ಕ್ಯಾಮೆರಾ ರಚನೆಯನ್ನು ಪಡೆದಿದೆ. ಅಲ್ಲದೇ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್‌ ಸೌಲಭ್ಯ ಪಡೆದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :