ನಾಳೆ Lava Bold 2 5G ಮೊಬೈಲ್‌ ಮಾರಾಟ ಪ್ರಾರಂಭ! 50MP ಕ್ಯಾಮೆರಾ ಸೆನ್ಸಾರ್‌

HIGHLIGHTS

ನಾಳೆ (ಮಾರ್ಚ್ 19 ರಂದು) ಲಾವಾ ಬೋಲ್ಡ್‌ 2 5G ಸೇಲ್‌ ಶುರು

ಲಾವಾ ಕಂಪನಿಯ ಈ ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ

ಲಾವಾ ಕಂಪನಿಯ ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ

Lava ಮೊಬೈಲ್ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ Lava Bold 2 5G ಸ್ಮಾರ್ಟ್‌ಫೋನ್‌ ನಾಳೆ (ಮಾರ್ಚ್ 19 ರಂದು) ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಮೊಬೈಲ್‌ ಬಜೆಟ್‌ ವಿಭಾಗದಲ್ಲಿ ಕಾಣಿಸಿಕೊಂಡಿದ್ದು 5,000mAh ಬ್ಯಾಟರಿ ಬ್ಯಾಕ್‌ಅಪ್‌ ಮೂಲಕ ಗಮನ ಸೆಳೆದಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7060 ಚಿಪ್‌ಸೆಟ್‌ ಪ್ರೊಸೆಸರ್ ಪವರ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ಮೊಬೈಲ್‌ 50MP ಕ್ಯಾಮೆರಾ ಸೆನ್ಸಾರ್‌ ಸೌಲಭ್ಯವನ್ನು ಒಳಗೊಂಡಿದೆ. ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಲಾವಾ ಬೋಲ್ಡ್‌ 2 5G ಸ್ಮಾರ್ಟ್‌ಫೋನ್ ಫೆದರ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಲಾವಾ ಬೋಲ್ಡ್‌ 2 5G ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಭಾರತದಲ್ಲಿ Poco X8 Pro 5G ಸ್ಮಾರ್ಟ್‌ಫೋನ್‌ ಬಿಡುಗಡೆ! ಜಬರ್ದಸ್ತ್‌ ಫೀಚರ್ಸ್‌

Lava Bold 2 5G ಫೋನ್ ಸೇಲ್‌ ಡಿಟೇಲ್ಸ್‌

ಮಾರುಕಟ್ಟೆ ಪ್ರವೇಶಿಸಿರುವ ಲಾವಾ ಬೋಲ್ಡ್‌ 2 5G ಮೊಬೈಲ್‌ ಅಗ್ಗದ ಬೆಲೆಯ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ ನಾಳೆ (ಮಾರ್ಚ್ 19 ರಂದು) ಅಮೆಜಾನ್ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಲಿದೆ. ಅಂದಹಾಗೆ ಈ ಫೋನ್‌ 6GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 12,999 ರೂಗಳು ಆಗಿದೆ. ಹಾಗೆಯೇ ಲಾವಾ ಬೋಲ್ಡ್ 2 5G ಫೋನ್ ಫೆದರ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ದೊರೆಯುತ್ತದೆ.

ಲಾವಾ ಬೋಲ್ಡ್‌ 2 5G ಫೀಚರ್ಸ್‌ ಹೀಗಿವೆ

ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ಲಾವಾ ಬೋಲ್ಡ್‌ 2 5G ಮೊಬೈಲ್ 6.67 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7060 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 6GB RAM + 128GB ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಇದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು ಆಂಡ್ರಾಯ್ಡ್ 15 ಓಎಸ್‌ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಲಾವಾ ಬೋಲ್ಡ್‌ 2 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು ಎರಡನೇ ಕ್ಯಾಮೆರಾ ಬೇಸಿಕ್ ಲೆನ್ಸ್‌ ಸೌಲಭ್ಯ ಹೊಂದಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 33W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಬೆಂಬಲ ಸಹ ಹೊಂದಿದೆ. ಅಲ್ಲದೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಈ ಫೋನ್ IP64 ರೇಟಿಂಗ್‌ ಸೌಲಭ್ಯ ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :