ಅಗ್ಗದ ಬೆಲೆಯಲ್ಲಿ Jio Bharat V4 4G ಮೊಬೈಲ್‌ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್‌ ನೋಡಿ

ರಿಲಯನ್ಸ್ ಜಿಯೋ ಕಂಪನಿಯು ಈಗಾಗಲೇ ಗ್ರಾಹಕರಿಗೆ ಹಲವು ಭಿನ್ನ ರೇಂಜ್‌ನ ಮೊಬೈಲ್‌ ಪರಿಚಯಿಸಿದೆ. ಅದರ ಮುಂದುವರಿದ ಭಾಗವಾಗಿ ಕಂಪನಿಯು ತನ್ನ ಹೊಸ ಮತ್ತು ಕೈಗೆಟುಕುವ Jio Bharat V4 4G ಫೀಚರ್ ಫೋನ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮುಖ್ಯವಾಗಿ ಫೀಚರ್‌ ಫೋನ್‌ ಬಳಕೆ ಮಾಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಫೋನ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು 1.7 ಇಂಚಿನ ಡಿಸ್ಪ್ಲೇ ಹಾಗೂ 1000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನ್‌ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯ. ಹಾಗಾದರೆ ಜಿಯೋ ಭಾರತ್ V4 4G ಫೀಚರ್ ಫೋನ್‌ನ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿದುಕೊಳ್ಳೋಣ.

Also Read : 80W ಫಾಸ್ಟ್‌ ಚಾರ್ಜಿಂಗ್ ಇರುವ Oppo K13 Turbo 5G ಮೊಬೈಲ್‌ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!

ಹೊಸ Jio Bharat V4 4G ಬೆಲೆ ಹಾಗೂ ಲಭ್ಯತೆ

ಜಿಯೋ ಕಂಪನಿಯ ಹೊಸ ಜಿಯೋ ಭಾರತ್ V4 4G ಫೋನ್‌ನ ಬೆಲೆ 799 ರೂ.ಗಳು ಆಗಿದೆ. ಈ ಫೋನ್ ಅನ್ನು ಆಸಕ್ತ ಗ್ರಾಹಕರು JioMart, ಜಿಯೋದ ಅಧಿಕೃತ ವೆಬ್‌ಸೈಟ್, ರಿಲಯನ್ಸ್ ಜಿಯೋ ರಿಟೇಲ್ ಸ್ಟೋರ್‌ಗಳು ಹಾಗೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದು. ರೀಟೈಲ್‌ ಮಾರುಕಟ್ಟೆಯಲ್ಲಿ ಇದು ಬ್ಲೂ ಮತ್ತು ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಜಿಯೋ ಭಾರತ್ V4 4G ಫೀಚರ್ಸ್‌ ಮಾಹಿತಿ

ಜಿಯೋ ಭಾರತ್ V4 4G ಫೋನ್ 1.7 ಇಂಚಿನ TFT ಡಿಸ್‌ಪ್ಲೇ ಪಡೆದುಕೊಂಡ ಇದೆ. ಅಲ್ಲದೇ ಈ ಮೊಬೈಲ್‌ 0.3 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇನ್ನು ಇದು Unisoc ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ 1000mAh ಸಾಮರ್ಥ್ಯದ ಲಿ-ಐಯಾನ್ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದೆ. ಇದರ ಜೊತೆಗೆ ಮೈಕ್ರೋSD ಕಾರ್ಡ್ ಸಹಾಯದಿಂದ 128GB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸಬಹುದಾಗಿದೆ.

ಈ ಫೋನ್‌ನಲ್ಲಿ JioCompanion, JioTV, Jio Hotstar, JioPay, JioSaavn ಹಾಗೂ JioPhotos ಸೇರಿದಂತೆ ಹಲವು ಜಿಯೋ ಆಪ್‌ಗಳು ಮೊದಲೇ ಇನ್‌ಸ್ಟಾಲ್ ಆಗಿರುತ್ತವೆ. ಇದರೊಂದಿಗೆ ಜಿಯೋ ಭಾರತ್ V4 4G ಬಳಕೆದಾರರಿಗೆ ಪರಿಚಿತ ಕೀಪ್ಯಾಡ್ ಅನುಭವವನ್ನು ಉಳಿಸಿಕೊಂಡೇ 2G ಯಿಂದ 4G ಸೇವೆಗೆ ಸುಲಭವಾಗಿ ಅಪ್‌ಗ್ರೇಡ್ ಆಗುವ ಅವಕಾಶವನ್ನು ಒದಗಿಸುತ್ತದೆ. ಜಿಯೋದ 4G ನೆಟ್‌ವರ್ಕ್ ಮೂಲಕ ವೀಡಿಯೊ ಸ್ಟ್ರೀಮಿಂಗ್, ಚಲನಚಿತ್ರ ವೀಕ್ಷಣೆ ಹಾಗೂ ಕ್ರೀಡಾ ಮುಖ್ಯಾಂಶಗಳನ್ನು ಆನಂದಿಸಬಹುದಾಗಿದೆ. ಇದಲ್ಲದೆ FM ರೇಡಿಯೋ, 4G ಬ್ಯಾಂಡ್ ಬೆಂಬಲ ಮತ್ತು ಲೌಡ್‌ಸ್ಪೀಕರ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಈ ಫೋನ್ ನ್ಯಾನೋ ಸಿಮ್ ಅನ್ನು ಬೆಂಬಲಿಸುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :