itel A100 ಲಾಂಚ್! ಕಡಿಮೆ ಬೆಲೆಯಲ್ಲಿ ಲಗ್ಗೆ ಇಟ್ಟಿರುವ ಈ ಫೋನ್‌ 5,000mAh ಬ್ಯಾಟರಿ ಪಡೆದಿದೆ

Updated on 09-Feb-2026
HIGHLIGHTS

ಐಟೆಲ್‌ A100 ಫೋನ್‌ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಸೌಲಭ್ಯ ಹೊಂದಿದೆ

ಐಟೆಲ್‌ A100 ಫೋನ್‌ UniSoC T7100 ಪ್ರೊಸೆಸರ್‌ ಸೌಲಭ್ಯ ಪಡೆದಿದೆ

ಐಟೆಲ್‌ ಕಂಪನಿಯ ಈ ಹೊಸ ಫೋನ್‌ IPX4 ಸ್ಪ್ಲಾಶ್ ಸೌಲಭ್ಯ ಒಳಗೊಂಡಿದೆ

itel ಕಂಪನಿಯು ಭಾರತದಲ್ಲಿ ಹೊಸದಾಗಿ itel A100 4G ಸ್ಮಾರ್ಟ್‌ಫೋನ್‌ ಅನ್ನು ಸದ್ದಿಲ್ಲದೇ ಬಿಡುಗಡೆ ಮಾಡಿದೆ. ಈ ಮೂಲಕ ಕಂಪನಿಯು ತನ್ನ ಮೊಬೈಲ್‌ಗಳ ಶ್ರೇಣಿಯನ್ನು ವಿಸ್ತರಿಸಿದೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ itel A100 ಮೊಬೈಲ್‌ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ ದೀರ್ಘಾವಧಿ ಬ್ಯಾಕ್‌ಅಪ್‌ ಒದಗಿಸುವುದಕ್ಕಾಗಿ 5,000mAh ಬ್ಯಾಟರಿ ಸಪೋರ್ಟ್‌ ಪಡೆದಿದೆ. ಅಲ್ಲದೇ ಈ ಮೊಬೈಲ್ 8MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಅಂದಹಾಗೆ ಈ ಎಂಟ್ರಿ ಲೆವೆಲ್‌ ಫೋನ್ ಹಲವು ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಇನ್ನು itel A100 ಮೊಬೈಲ್‌ ಮಾರಾಟ ದಿನಾಂಕ, ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಅಗ್ಗದ ಬೆಲೆಯಲ್ಲಿ Samsung Galaxy F70e ಸ್ಮಾರ್ಟ್‌ಫೋನ್‌ ಬಿಡುಗಡೆ; ಬೆಲೆ, ಫೀಚರ್ಸ್‌ ಮಾಹಿತಿ ಇಲ್ಲಿದೆ!

itel A100 ಮೊಬೈಲ್‌ ಬೆಲೆ ಮತ್ತು ಲಭ್ಯತೆಯ ಮಾಹಿತಿ

itel ಸಂಸ್ಥೆಯ ನೂತನ itel A100 4G ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಗೆ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. ಈ ಮೊಬೈಲ್‌ 3GB + 64GB ಸ್ಟೋರೇಜ್ ಆವೃತ್ತಿಯ ಬೆಲೆ ರೂ. 6,799 ಆಗಿದೆ. ಹಾಗೆಯೇ ಇದರ 4GB + 64GB ಸ್ಟೋರೇಜ್ ಹೊಂದಿರುವ ವೇರಿಯಂಟ್‌ ಬೆಲೆ ರೂ. 7,499 ಆಗಿದೆ. ಗ್ರಾಹಕರು ಐಟೆಲ್‌ A100 ಅನ್ನು ಭಾರತದಾದ್ಯಂತ ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಅಂದಹಾಗೆ ನೂತನ ಐಟೆಲ್‌ A100 ಫೋನ್‌ ಸಿಲ್ಕ್ ಗ್ರೀನ್, ಪ್ಯೂರ್ ಬ್ಲ್ಯಾಕ್ ಮತ್ತು ಪ್ಲಾಟಿನಂ ಗೋಲ್ಡ್ ಸೇರಿದಂತೆ ಹಲವು ಕಲರ್‌ ಆಯ್ಕೆ ಪಡೆದುಕೊಂಡಿದೆ.

itel A100 ಫೋನಿನ ಫೀಚರ್ಸ್‌

ಐಟೆಲ್‌ ಮೊಬೈಲ್‌ ಸಂಸ್ಥೆಯ ಈ ನೂತನ ಐಟೆಲ್‌ A100 ಮೊಬೈಲ್‌ 6.6 ಇಂಚಿನ HD+ IPS ಡಿಸ್‌ಪ್ಲೇ ಪಡೆದಿದ್ದು, ಇದರ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ರಚನೆ ಅನ್ನು ಪಡೆದಿದೆ. ಹಾಗೆಯೇ ಇದರ ಸ್ಕ್ರೀನ್‌ 90Hz ರಿಫ್ರೆಶ್ ರೇಟ್ ಜೊತೆಗೆ 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಪಡೆದಿದೆ. ಅಲ್ಲದೇ 720 x 1,612 ಪಿಕ್ಸಲ್‌ ರೆಸಲ್ಯೂಶನ್‌ ಅನ್ನು ಹೊಂದಿದ್ದು, ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 269PPI ಆಗಿದೆ. ಇನ್ನು ಈ ಫೋನ್ UniSoC T7100 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಜೊತೆಗೆ Android 15 ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ.

ಐಟೆಲ್‌ A100 ಮೊಬೈಲ್‌ ಹಿಂಬದಿಯಲ್ಲಿ 8 ಮೆಗಾಪಿಕ್ಸಲ್ ಕ್ಯಾಮೆರಾ ಸೆನ್ಸಾರ್‌ ಪಡೆದಿದ್ದು ಜೊತೆಗೆ ಎಲ್‌ಇಡಿ ಪ್ಲ್ಯಾಷ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಬ್ಲೂಟೂತ್, ವೈ-ಫೈ, GPS, 3.5mm ಹೆಡ್‌ಫೋನ್ ಜ್ಯಾಕ್, IR ಬ್ಲಾಸ್ಟರ್ ಮತ್ತು USB ಟೈಪ್-C ಪೋರ್ಟ್ ಸೇರಿವೆ. ಅಲ್ಲದೇ ಐಟೆಲ್ A100 ಫೋನ್‌ 10W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒಳಗೊಂಡ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :