ಐಕ್ಯೂ ಮೊಬೈಲ್ ಕಂಪನಿಯು Z ಸರಣಿಯಲ್ಲಿ ಹೊಸದಾಗಿ iQOO Z11x 5G ಮೊಬೈಲ್ ಅನ್ನು ಈ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಡೇಟ್ ಫಿಕ್ಸ್ ಮಾಡಿಕೊಂಡಿದೆ. ಮುಂಬರುವ ಐಕ್ಯೂ Z11x 5G ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ಐಕ್ಯೂ ಕಂಪನಿಯು ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಟರ್ಬೊ ಚಿಪ್‌ಸೆಟ್ ಪ್ರೊಸೆಸರ್ ಪಡೆದಿರುವುದು ಬಹುತೇಕ ಕನ್ಫರ್ಮ್ ಆಗಿದೆ. ಅಲ್ಲದೇ 7,200mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಇದು ಪಡೆದುಕೊಂಡಿದೆ. ಹಾಗೆಯೇ ಇದು ಆಂಡ್ರಾಯ್ಡ್ 16 ಓಎಸ್ ಸಪೋರ್ಟ್ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಇನ್ನುಳಿದಂತೆ ಮುಂಬರುವ ಐಕ್ಯೂ Z11x ಮೊಬೈಲ್‌ನ ಬಿಡುಗಡೆ ದಿನಾಂಕ, ನಿರೀಕ್ಷಿತ ಫೀಚರ್ಸ್‌ಗಳ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಇದೇ ಮಾರ್ಚ್ 11 ರಂದು ಭಾರತದಕ್ಕೆ Xiaomi 17 ಸರಣಿ ಎಂಟ್ರಿ ಕೊಡಲಿದೆ! ಫೀಚರ್ಸ್ ನೋಡಿ
ಐಕ್ಯೂ ಸಂಸ್ಥೆಯು Z ಸರಣಿಯಲ್ಲಿ ಪರಿಚಯಿಸಲಿರುವ ಐಕ್ಯೂ Z11x ಈಗಾಗಲೇ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಈ ಸ್ಮಾರ್ಟ್‌ಫೋನ್ ಮಾರ್ಚ್ 12 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಫೋನ್ ಕುರಿತು ಅಮೆಜಾನ್ ತಾಣದಲ್ಲಿ ಮೀಸಲಾದ ಮೈಕ್ರೋಸೈಟ್ ಈಗಾಗಲೇ ಲೈವ್ ಆಗಿದೆ. ಅಂದಹಾಗೆ ಈ ಫೋನ್ ಎರಡು ಬಣ್ಣಗಳ ಆಯ್ಕೆ ಪಡೆದಿರಲಿದ್ದು ಅವುಗಳು ಕ್ರಮವಾಗಿ ಬ್ಲ್ಯಾಕ್ ಹಾಗೂ ಮಿಂಟ್ ಗ್ರೀನ್ ಕಲರ್ ಆಗಿರಲಿವೆ ಎಂದು ಹೇಳಲಾಗುತ್ತಿದೆ. ಇನ್ನು ಫೋನಿನ ಅಧಿಕೃತ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ. ಈ ಫೋನ್ ಅಮೆಜಾನ್ ಇ ಕಾಮರ್ಸ್ ಮೂಲಕ ಮಾರಾಟ ಪ್ರಾರಂಭಿಸಲಿದೆ.
ಐಕ್ಯೂ Z11x ಮೊಬೈಲ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ 6.72 ಇಂಚಿನ FHD+ IPS LCD ಪ್ಯಾನಲ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಮೊಬೈಲ್ MediaTek Dimensity 7400 Turbo ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವುದು ಖಚಿತವಾಗಿದೆ. ಇನ್ನು ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ OriginOS 6 ಇರುವುದು ಪಕ್ಕಾ ಎನ್ನಲಾಗಿದೆ. ಹಾಗೆಯೇ ಈ ಫೋನಿನ ಟಾಪ್ ಎಂಡ್ ವೇರಿಯಂಟ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಅಲ್ಲದೇ ಈ ಮೊಬೈಲ್ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.
ಅದೇ ರೀತಿ ಮುಂಬರುವ ಐಕ್ಯೂ Z11x ಮೊಬೈಲ್ ಹಿಮಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಇದರ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್ ಬಲ ಪಡೆದಿರುವ ಜೊತೆಗೆ ಸೆಕೆಂಡರಿ ಕ್ಯಾಮೆರಾವು 8MP ಲೆನ್ಸ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಒದಗಿಸಬಹುದು. ಇದರೊಂದಿಗೆ ರಿಂಗ್ ಶೈಲಿಯ LED ಸಪೋರ್ಟ್ ಒಳಗೊಂಡಿದೆ ಎಂದು ತೋರುತ್ತದೆ ಹಾಗೂ ಸಿಮ್ ಟ್ರೇ ಅನ್ನು ಎಡ ಅಂಚಿನಲ್ಲಿ ನೀಡಲಾಗಿದೆ. ಇನ್ನು ಈ ಫೋನ್ ದೀರ್ಘ ಬ್ಯಾಟರಿ ಬಾಳಿಕೆಯನ್ನು ಬಯಸುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಮಾರುಕಟ್ಟೆ ಪ್ರವೇಶಿಸುತ್ತಿದೆ ಎನ್ನಲಾಗಿದೆ.