ಇಂದು iQOO Z11x 5G ಮೊಬೈಲ್‌ ಬಿಡುಗಡೆ! ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್‌ ಖಚಿತ

HIGHLIGHTS

ಭಾರತದಲ್ಲಿ ಇಂದು (ಮಾರ್ಚ್ 12 ರಂದು) ಐಕ್ಯೂ Z11x ಲಾಂಚ್

ಐಕ್ಯೂ Z11x ಮೊಬೈಲ್‌ 50MP ಕ್ಯಾಮೆರಾ ಸೆನ್ಸಾರ್‌ ಪಡೆದಿರುವ ಸಾಧ್ಯತೆಗಳು ಇವೆ

ಐಕ್ಯೂ Z11x ಫೋನ್ ಬ್ಲ್ಯಾಕ್‌ ಹಾಗೂ ಮಿಂಟ್‌ ಗ್ರೀನ್‌ ಬಣ್ಣಗಳ ಆಯ್ಕೆ ಪಡೆದಿರಲಿದೆ

iQOO ಮೊಬೈಲ್‌ ಕಂಪನಿಯ ನೂತನ iQOO Z11x 5G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 12 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್ ಕುರಿತಾಗಿ ಈಗಾಗಲೇ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಈಗ ಲೈವ್ ಇದೆ. ಗ್ರ್ಯಾಂಡ್‌ ಎಂಟ್ರಿಗೆ ಸಜ್ಜಾಗಿರುವ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಟರ್ಬೊ ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ. ಇದರೊಂದಿಗೆ 7,200mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿರುವುದು ಖಚಿತ ಎನ್ನಲಾಗಿದೆ. ಹಾಗೆಯೇ ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗಾದರೆ ಮುಂಬರುವ ಐಕ್ಯೂ Z11x ಮೊಬೈಲ್‌ನ ಬಿಡುಗಡೆ ದಿನಾಂಕ, ನಿರೀಕ್ಷಿತ ಫೀಚರ್ಸ್‌ಗಳ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಭಾರತದಲ್ಲಿ ಲಾಂಚ್‌ ಆಗಿಯೇ ಬಿಡ್ತು Xiaomi 17 Ultra ಮೊಬೈಲ್‌! 200MP ಲೈಕಾ ಕ್ಯಾಮೆರಾ

iQOO Z11x 5G ಮೊಬೈಲ್‌ ಇಂದು ಬಿಡುಗಡೆ

ಐಕ್ಯೂ Z11x ಮೊಬೈಲ್‌ ಇಂದು (ಮಾರ್ಚ್ 12 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಅಮೆಜಾನ್‌ ಇ-ಕಾಮರ್ಸ್ ತಾಣದಲ್ಲಿ ಹೊಸ ಐಕ್ಯೂ Z11x ಫೋನ್‌ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಎರಡು ಬಣ್ಣಗಳ ಆಯ್ಕೆ ಪಡೆದಿರಲಿದ್ದು ಅವುಗಳು ಕ್ರಮವಾಗಿ ಬ್ಲ್ಯಾಕ್‌ ಹಾಗೂ ಮಿಂಟ್‌ ಗ್ರೀನ್‌ ಕಲರ್ ಆಗಿರಲಿವೆ ಎಂದು ಹೇಳಲಾಗುತ್ತಿದೆ. ಇನ್ನು ಮೊಬೈಲ್‌ನ ಅಧಿಕೃತ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

ಐಕ್ಯೂ Z11x ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಐಕ್ಯೂ Z11x ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಜೊತೆಗೆ 6.72 ಇಂಚಿನ FHD+ IPS LCD ಪ್ಯಾನಲ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಮೊಬೈಲ್‌ MediaTek Dimensity 7400 Turbo ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವುದು ಖಚಿತವಾಗಿದೆ. ಇನ್ನು ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ OriginOS 6 ಇರುವುದು ಪಕ್ಕಾ ಎನ್ನಲಾಗಿದೆ. ಹಾಗೆಯೇ ಈ ಫೋನಿನ ಟಾಪ್‌ ಎಂಡ್‌ ವೇರಿಯಂಟ್‌ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಅಲ್ಲದೇ ಈ ಮೊಬೈಲ್‌ 44W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.

ಅದೇ ರೀತಿ ಮುಂಬರುವ ಐಕ್ಯೂ Z11x ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯ ಪಡೆದಿರುವ ಜೊತೆಗೆ ಸೆಕೆಂಡರಿ ಕ್ಯಾಮೆರಾವು 8MP ಲೆನ್ಸ್‌ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಒದಗಿಸಬಹುದು. ಇದರೊಂದಿಗೆ ರಿಂಗ್ ಶೈಲಿಯ LED ಸಪೋರ್ಟ್ ಒಳಗೊಂಡಿದೆ ಎಂದು ತೋರುತ್ತದೆ ಹಾಗೂ ಸಿಮ್ ಟ್ರೇ ಅನ್ನು ಎಡ ಅಂಚಿನಲ್ಲಿ ನೀಡಲಾಗಿದೆ. ಇನ್ನು ಈ ಫೋನ್‌ ದೀರ್ಘ ಬ್ಯಾಟರಿ ಬಾಳಿಕೆಯನ್ನು ಬಯಸುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಮಾರುಕಟ್ಟೆ ಪ್ರವೇಶಿಸುತ್ತಿದೆ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :