ನಾಳೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ iQOO 15R ಮೊಬೈಲ್‌! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Updated on 23-Feb-2026
HIGHLIGHTS

iQOO 15R ಫೋನ್‌ Snapdragon 8 Gen 5 ಪ್ರೊಸೆಸರ್‌ ಪಡೆದಿರುವ ಸಾಧ್ಯತೆ

ಈ ಮೊಬೈಲ್‌ 2160 fps ನಲ್ಲಿ 4K ರೆಕಾರ್ಡಿಂಗ್ ಸೌಲಭ್ಯ ಒಳಗೊಂಡಿರಲಿದೆ

iQOO 15R ಮೊಬೈಲ್‌ 7600mAh ಬ್ಯಾಟರಿ ಸಪೋರ್ಟ್‌ ಪಡೆದಿರಲಿದೆ

ಭಿನ್ನ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಈಗಾಗಲೇ ಗಮನ ಸೆಳೆದಿರುವ ಐಕ್ಯೂ ಕಂಪನಿಯು ತನ್ನ ಹೊಸ iQOO 15R ಮೊಬೈಲ್‌ ಅನ್ನು ನಾಳೆ (ಫೆಬ್ರವರಿ 24 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಅಂದಹಾಗೆ ಈ ಮೊಬೈಲ್‌ ಕ್ವಾಲ್ಕಮ್‌ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಈ ಫೋನ್ ಮೀಡ್‌ರೇಂಜ್‌ ಪ್ರಿಮಿಯಂ ವಿಭಾಗದಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್‌ ಬರೋಬ್ಬರಿ 7600 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಹೆಚ್ಚಿವೆ. ಇನ್ನುಳಿದಂತೆ iQOO 15R ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಶೀಘ್ರದಲ್ಲೇ ಕೈಗೆಟುವ ಬೆಲೆಯಲ್ಲಿ iPhone 17e ಲಾಂಚ್‌! ಫೀಚರ್ಸ್‌ ಮತ್ತು ಬೆಲೆ ಮಾಹಿತಿ ಇಲ್ಲಿದೆ

iQOO 15R ನಿರೀಕ್ಷಿತ ಬೆಲೆ ಹಾಗೂ ಲಭ್ಯತೆ

iQOO 15R ಮೊಬೈಲ್‌ ನಾಳೆ (ಫೆಬ್ರವರಿ 24 ರಂದು) ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ ತಾಣದ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಅಮೆಜಾನ್‌ ಇ-ಕಾಮರ್ಸ್ ತಾಣದಲ್ಲಿ iQOO 15R ಫೋನ್‌ ಲಾಂಚ್ ಕುರಿತಾಗಿ ಮೈಕ್ರೋ ಪೇಜ್‌ ಸಹ ತೆರೆಯಲಾಗಿದೆ. ಇನ್ನು ಈ ಮೊಬೈಲ್‌ ಭಾರತದಲ್ಲಿ ಸುಮಾರು 45,000 ರೂ.ಗಳಿಂದ 55,000 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್‌ನ ಅಧಿಕೃತ ಬೆಲೆಯ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

iQOO 15R ನಿರೀಕ್ಷಿತ ಫೀಚರ್ಸ್‌ ಮಾಹಿತಿ

iQOO 15R ಸ್ಮಾರ್ಟ್‌ಫೋನ್‌ 144Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 1260×2750 ಪಿಕ್ಸಲ್‌ ರೆಸಲ್ಯೂಶನನ್ನು ಸಪೋರ್ಟ್‌ ಮಾಡಲಿದೆ. ಹಾಗೆಯೇ ಈ ನೂತನ ಮೊಬೈಲ್‌ ಕ್ವಾಲ್ಕಾಮ್ Snapdragon 8 Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಪಡೆದಿರುವ ಜೊತೆಗೆ Funtouch OS 16 ನೊಂದಿಗೆ Android v16 ಓಎಸ್‌ ಇರುವ ಸಾಧ್ಯತೆಗಳು ಅಧಿಕವಾಗಿವೆ. ಇದಕ್ಕೆ ಪೂರಕವಾಗಿ 12GB RAM ಜೊತೆಗೆ 256GB ಹಾಗೂ 512GB ಸ್ಟೋರೇಜ್‌ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲಿರುವ iQOO 15R ಮೊಬೈಲ್‌ 100W ಸೂಪರ್‌ ಫ್ಲ್ಯಾಶ್ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಜೊತೆಗೆ 7600mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು. ಅಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಪಡೆದಿರಲಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 200MP ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಬಹುದು. ಅದೇ ರೀತಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32MP ಸೆನ್ಸಾರ್‌ನ ಕ್ಯಾಮೆರಾವನ್ನು ಹೊಂದಿರಬಹುದು. ಇದರೊಂದಿಗೆ ಈ ಫೋನ್‌ ಅತ್ಯುತ್ತಮ ವೀಡಿಯೊಗಾಗಿ ಎರಡು ಕ್ಯಾಮೆರಾಗಳಲ್ಲಿಲೂ 2160 fps ನಲ್ಲಿ 4K ರೆಕಾರ್ಡಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :