ಜನಪ್ರಿಯ iQOO ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಿರುವ iQOO 15 ಸ್ಮಾರ್ಟ್‌ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ಐಕ್ಯೂ ಕಂಪನಿಯು ಹೊಸ iQOO 15 ಮೊಬೈಲ್ Apex ಕಲರ್‌ನಲ್ಲಿ ಅಧಿಕೃತವಾಗಿ ಲಾಂಚ್ ಮಾಡಲು ಸಜ್ಜಾಗಿದೆ. ಸಂಸ್ಥೆಯು ನಾಳೆ (ಏಪ್ರಿಲ್ 1 ರಂದು) ಹೊಸದಾಗಿ Apex ಕಲರ್ ಆಯ್ಕೆಯಲ್ಲಿ ಫೋನ್ ಅನ್ನು ಪರಿಚಯಿಸಲಿದೆ. ಇನ್ನು ಈ ಫೋನ್ 7000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ 100W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇನ್ನುಳಿದಂತೆ ಅಪೆಕ್ಸ್ ಕಲರ್‌ನಲ್ಲಿ ಬರಲಿರುವ ಹೊಸ iQOO 15 ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Jio 449 ರೂ.ಗಳ ಯೋಜನೆಯಲ್ಲಿ 75GB ಡೇಟಾ ಪ್ರಯೋಜನ ಜೊತೆಗೆ SMS ಸೌಲಭ್ಯ
ಐಕ್ಯೂ ಕಂಪನಿಯು ನೂತನವಾಗಿ ಐಕ್ಯೂ 15 ಫೋನ್ ಅಪೆಕ್ಸ್ ಬಣ್ಣದಲ್ಲಿ ಅನ್ನು ನಾಳೆ (ಏಪ್ರಿಲ್ 1 ರಂದು) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಬಳಿಕ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಫೋನಿನ ಬೆಲೆಯ ಬಗ್ಗೆ ಕಂಪನಿಯು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಹೊಸ ಐಕ್ಯೂ 15 ಅಪೆಕ್ಸ್ ಮೊಬೈಲ್ 6.85 ಇಂಚಿನ Samsung 2K M14 LTPO OLED ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 2600 nits ಗ್ಲೋಬಲ್ ಪೀಕ್ ಬ್ರೈಟ್ನೆಸ್ ಪಡೆದಿದೆ. ಈ ಮೊಬೈಲ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 16GB ವರೆಗಿನ RAM ಜೊತೆಗೆ 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP68/IP69 ರೇಟಿಂಗ್ ಸೌಲಭ್ಯ ಒಳಗೊಂಡಿದೆ.
ಐಕ್ಯೂ 15 ಅಪೆಕ್ಸ್ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಸೆನ್ಸರ್ ಸೌಲಭ್ಯ ಹೊಂದಿವೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸಲ್ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 7000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 100W ವೈರ್ಡ್ ಚಾರ್ಜಿಂಗ್ ಬೆಂಬಲ ಸಹ ಪಡೆದುಕೊಂಡಿದೆ. ಅಲ್ಲದೇ ಇದು ಸಿಮೆಟ್ರಿಕಲ್ ಡ್ರಮ್ ಮಾಸ್ಟರ್ ಸ್ಟೀರಿಯೊ ಸ್ಪೀಕರ್‌ಗಳು, 4D ಡ್ಯುಯಲ್-ಆಕ್ಸಿಸ್ ವೈಬ್ರೇಶನ್ ಮೋಟಾರ್ ಹಾಗೂ ಅಲ್ಟ್ರಾಸಾನಿಕ್ 3D ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಗಳನ್ನು ಪಡೆದುಕೊಂಡಿದೆ.