ಆಪಲ್ ತನ್ನ ನಾಳೆ (ಸೆ.9 ರಂದು) Surprise and Shine ಈವೆಂಟ್‌ನಲ್ಲಿ ಆಪಲ್ ತನ್ನ ಮುಂದಿನ ಪೀಳಿಗೆಯ ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ iPhone 18 Pro ಮತ್ತು iPhone 18 Pro Max ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪೀಳಿಗೆಯ iPhone 17 Pro Max ಖರೀದಿಸಲು ಬಯಸುವವರಿಗೆ ಇದೀಗ ಗುಡ್‌ನ್ಯೂಸ್ ಲಭ್ಯವಾಗಿದೆ. ಆಪಲ್‌ನ ಹೊಸ ಮಾದರಿಗಳ ಅಧಿಕೃತ ಬಿಡುಗಡೆಗೂ ಮುನ್ನವೇ ಐಫೋನ್ 17 ಪ್ರೊ ಮ್ಯಾಕ್ಸ್ ಫೋನ್ ವಿಜಯ್ ಸೇಲ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಕರ್ಷಕ ರಿಯಾಯಿತಿಯೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಇದಲ್ಲದೆ ಅರ್ಹ ಬ್ಯಾಂಕ್ ಹಾಗೂ ಕಾರ್ಡ್ ಆಫರ್‌ಗಳನ್ನು ಬಳಸಿಕೊಂಡರೆ ಫೋನ್‌ನ ಪರಿಣಾಮಕಾರಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಿಕೊಳ್ಳುವ ಅವಕಾಶವೂ ಇದೆ. ಹಾಗಾದರೇ ಐಫೋನ್ 17 ಪ್ರೊ ಮ್ಯಾಕ್ಸ್ ಫೋನಿಗೆ ಲಭ್ಯವಿರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
Also Read : Apple Launch Event 2026: ಈ ಕಾರ್ಯಕ್ರಮದ ಲೈವ್ ವೀಕ್ಷಣೆ ಹೇಗೆ? ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ
ಭಾರತದಲ್ಲಿ ಆಪಲ್ ಐಫೋನ್ 17 ಪ್ರೊ ಮ್ಯಾಕ್ಸ್ ಬೆಲೆ ಬಿಡುಗಡೆಯಾದ ಸಮಯದಲ್ಲಿ 1,49,900 ರೂ.ಗಳ ಇತ್ತು. ವಿಜಯ್ ಸೇಲ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹೈ-ಎಂಡ್ ಸ್ಮಾರ್ಟ್‌ಫೋನ್ ಸದ್ಯ 5,910 ರೂ.ಗಳ ಫ್ಲಾಟ್ ರಿಯಾಯಿತಿ ಪಡೆದಿದ್ದು, ಸದ್ಯ 1,43,990 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು ಸಹ ಲಭ್ಯ.
ಆಪಲ್ ಐಫೋನ್ 17 ಪ್ರೊ ಮ್ಯಾಕ್ಸ್ 6.9 ಇಂಚಿನ 120Hz ಪ್ರೊಮೋಷನ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಆಂಟಿ-ರಿಫ್ಲೆಕ್ಟಿವ್ ಡಿಸ್ಪ್ಲೇಯನ್ನು ಹೊಂದಿದೆ. ಹಾಗೆಯೇ ಈ ಮೊಬೈಲ್ A19 ಪ್ರೊ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಈ ಫೋನ್ 4,823 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಇದು 30W ವೈರ್ಡ್ ಚಾರ್ಜಿಂಗ್, 25W ವೈರ್‌ಲೆಸ್ ಚಾರ್ಜಿಂಗ್ ಮತ್ತು 4.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ. ಇದು ವೇಪರ್ ಚೇಂಬರ್ ಕೂಲಿಂಗ್ ಅನ್ನು ಸಹ ಹೊಂದಿರುವ ಜೊತೆಗೆ ಇದು iOS 26 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾಗೆಯೇ ಐಫೋನ್ 17 ಪ್ರೊ ಮ್ಯಾಕ್ಸ್ ಟ್ರಿಪಲ್ ಫ್ಯೂಷನ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದು 48MP ಮುಖ್ಯ ಕ್ಯಾಮೆರಾ, 48MP ಅಲ್ಟ್ರಾವೈಡ್ ಸೆನ್ಸರ್ ಮತ್ತು 4x ಆಪ್ಟಿಕಲ್ ಜೂಮ್‌ನೊಂದಿಗೆ 48MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಈ ಮೊಬೈಲ್ ಮುಂಭಾಗದಲ್ಲಿ 18MP ಕ್ಯಾಮೆರಾವನ್ನು ಹೊಂದಿದೆ.