ಆಪಲ್ ಇತ್ತೀಚೆಗೆ ತನ್ನ ಮೊದಲ ಫೋಲ್ಡಬಲ್ ಐಫೋನ್ ಜೊತೆಗೆ ಐಫೋನ್ 18 ಪ್ರೊ ಸರಣಿಯನ್ನು ಭಾರತೀಯ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಹೊಸ ಐಫೋನ್‌ಗಳ ಬೆಲೆಯತ್ತ ಎಲ್ಲರ ಚಿತ್ತ ಇರುವ ನಡುವೆಯೇ, ಆಪಲ್ ಭಾರತದಲ್ಲಿ ತನ್ನ ಹಿಂದಿನ ತಲೆಮಾರಿನ ಐಫೋನ್‌ಗಳು, ಏರ್‌ಪಾಡ್‌ಗಳು ಮತ್ತು ಆಪಲ್ ವಾಚ್‌ಗಳ ಕೆಲವು ಮಾದರಿಗಳ ಬೆಲೆಯನ್ನು ಸದ್ದಿಲ್ಲದೆ ಪರಿಷ್ಕರಿಸಿದೆ. ಹೊಸ ಐಫೋನ್ ಸರಣಿಯ ಬಿಡುಗಡೆಯ ಬೆನ್ನಲ್ಲೇ ಈ ಬೆಲೆ ಬದಲಾವಣೆ ನಡೆದಿದೆ. ಇದರ ಪರಿಣಾಮವಾಗಿ iPhone 17, iPhone 17e, iPhone Air, iPhone 16 ಸೇರಿದಂತೆ ಹಲವು ಮಾದರಿಗಳು ಈಗ ಹಿಂದಿನ ಬೆಲೆಗಿಂತ ದುಬಾರಿಯಾಗಿವೆ. ಹಾಗಾದರೆ ಪರಿಷ್ಕೃತ ಬೆಲೆಗಳ ಮಾಹಿತಿ ಮುಂದೆ ನೋಡೋಣ.
Also Read : ಭಾರತದಲ್ಲಿ Apple Watch Series 12 ಮತ್ತು Watch Ultra 4 ಬಿಡುಗಡೆ: ಜಬರ್ದಸ್ತ್ ಫೀಚರ್ಸ್
ಆಪಲ್‌ನ ಇತ್ತೀಚಿನ ಬೆಲೆ ಪರಿಷ್ಕರಣೆ ಐಫೋನ್ 17 ಸರಣಿಯ ಬೆಲೆಗಳಲ್ಲಿ ಶೇ.14 ಕ್ಕಿಂತ ಹೆಚ್ಚಿನ ಏರಿಕೆಯಾಗಬಹುದು ಎಂಬ ನಮ್ಮ ಹಿಂದಿನ ವರದಿಯನ್ನೂ ದೃಢಪಡಿಸಿದೆ. ಸ್ಟ್ಯಾಂಡರ್ಡ್ ಐಫೋನ್ 17 ರ 256GB ಬೇಸ್ ಮಾದರಿಯ ಬೆಲೆ ಇದೀಗ 99,900 ರೂ.ಗಳಿಗೆ ಏರಿಕೆಯಾಗಿದೆ. ಈ ಮಾದರಿಯ ಬಿಡುಗಡೆಯ ಬೆಲೆ 82,900 ರೂ.ಗಳು ಆಗಿತ್ತು. ಇನ್ನು 512GB ಮಾದರಿಯ ಬೆಲೆ 1,24,900 ರೂ.ಗಳಿಗೆ ತಲುಪಿದೆ.
ಐಫೋನ್ 17e ಮಾದರಿಯ ಬೆಲೆಯಲ್ಲೂ ಗಮನಾರ್ಹ ಏರಿಕೆಯಾಗಿದೆ. ಸ್ಟೋರೇಜ್ ರೂಪಾಂತರವನ್ನು ಅವಲಂಬಿಸಿ ಇದರ ಬೆಲೆ ಶೇ 23.11 ರಿಂದ ಶೇ 23.56 ರಷ್ಟು ಹೆಚ್ಚಾಗಿದೆ. ಹೀಗಾಗಿ ಹೊಸ ಬೆಲೆಯಲ್ಲಿ ಐಫೋನ್ 17e ಖರೀದಿಸಲು ಗ್ರಾಹಕರು ಹೆಚ್ಚು ಹಣ ನೀಡುವಂತಾಗಿದೆ. ಅಲ್ಲದೇ ಐಫೋನ್ 16 ಮತ್ತು ಐಫೋನ್ ಏರ್ ಮಾದರಿಗಳ ಬೆಲೆ ಹೆಚ್ಚಳ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಐಫೋನ್ 16 ರ ಬೆಲೆ ಈಗ ಅದರ ಆರಂಭಿಕ 79,900 ರೂ.ಗಳ ಬೆಲೆಗೆ ಹೋಲಿಸಿದರೆ ಶೇ.12.52 ರಷ್ಟು ಹೆಚ್ಚಾಗಿದೆ. ಇನ್ನು ಐಫೋನ್ ಏರ್‌ನ ಬೇಸ್ ರೂಪಾಂತರದ ಬೆಲೆ ಇದೀಗ 1,49,900 ರೂ.ಗಳಿಗೆ ತಲುಪಿದೆ.
ಐಫೋನ್ 17 6.3 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿದೆ. ಈ ಡಿಸ್‌ಪ್ಲೇಯು ಗರಿಷ್ಠ 3,000 nits ಬ್ರೈಟ್‌ನೆಸ್ ನೀಡುವ ಸಾಮರ್ಥ್ಯ ಹೊಂದಿದೆ. ಕಾರ್ಯಕ್ಷಮತೆಗಾಗಿ ಆಪಲ್‌ನ A19 ಚಿಪ್‌ಸೆಟ್ ಕೆಲಸ ಮಾಡಲಿದ್ದು, 8GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.
ಇನ್ನು ಐಫೋನ್ 17 ಫೋನ್ 48MP ಪ್ರೈಮರಿ ಸೆನ್ಸರ್ ಹೊಂದಿದೆ. ಇದರೊಂದಿಗೆ 48MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿ ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 18MP ಕ್ಯಾಮೆರಾ ಇದೆ. ಹಾಗೆಯೇ ಐಫೋನ್ 17 ನಲ್ಲಿ 3,692mAh ಬ್ಯಾಟರಿ ನೀಡಲಾಗಿದೆ. ಇದು 40W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಪಡೆದಿರುವ ಜೊತೆಗೆ 25W Qi2 ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನೂ ಒಳಗೊಂಡಿದೆ.
| Device and variant | Old price | New price | Percentage |
|---|---|---|---|
| iPhone 17 (256GB) | Rs 82,900 | Rs 99,900 | 20.51% |
| iPhone 17 (512GB) | Rs 1,02,900 | Rs 1,24,900 | 21.38% |
| iPhone 17e (256GB) | Rs 64,900 | Rs 79,900 | 23.11% |
| iPhone 17e (512GB) | Rs 84,900 | Rs 1,04,900 | 23.56% |
| iPhone Air (256GB) | Rs 1,19,900 | Rs 1,49,900 | 25.02% |
| iPhone Air (512GB) | Rs 1,39,900 | Rs 1,74,900 | 25.02% |
| iPhone Air (1TB) | Rs 1,59,900 | Rs 2,24,900 | 40.65% |
| iPhone 16 (128GB) | Rs 79,900 | Rs 89,900 | 12.52% |