ಪ್ರೇಮಿಗಳ ದಿನದ ಪ್ರಯುಕ್ತ ಆಪಲ್ ಸಂಸ್ಥೆಯ iPhone 16 Plus ಮೊಬೈಲ್ ಖರೀದಿಸಲು ಪ್ಲಾನ್ ಮಾಡಿದ್ದರೆ, ನೀವು Vijay Sales ಆನ್‌ಲೈನ್ ಪ್ಲಾಟ್‌ಫಾರ್ಮ್ ಕಡೆಗೆ ಗಮನ ನೀಡುವುದು ಸೂಕ್ತ ಎನ್ನಬಹುದು. ಏಕೆಂದರೆ ಈ ಆನ್‌ಲೈನ್ ತಾಣದಲ್ಲಿ ಇದೀಗ ಆಪಲ್‌ನ iPhone 16 Plus ಮಾಡೆಲ್ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ. ಇನ್ನು ಈ ಐಫೋನ್ ಆಕರ್ಷಕ ಬ್ಲ್ಯಾಕ್, ಪಿಂಕ್, ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಈ ಫೋನ್ iOS 18 ಓಎಸ್ ಸಪೋರ್ಟ್ ಪಡೆದಿದೆ. ಇನ್ನುಳಿದಂತೆ Vijay Sales ವೆಬ್‌ಸೈಟ್‌ನಲ್ಲಿ iPhone 16 Plus ಫೋನಿಗೆ ಲಭ್ಯ ಇರುವ ಆಫರ್ ಹಾಗೂ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Airtel ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಸಿಗುತ್ತೆ ಭರ್ಜರಿ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ
ಆಪಲ್ ಕಂಪನಿಯ iPhone 16 Plus ಮೊಬೈಲ್ ಇದೀಗ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. ಪ್ರಸ್ತುತ Vijay Sales ನ ಅಧಿಕೃತ ಆನ್‌ಲೈನ್ ಪ್ಲಾಟ್‌ಫಾರ್ಮ್ನಲ್ಲಿ 128GB ಸ್ಟೋರೇಜ್‌ನ iPhone 16 Plus ಸ್ಮಾರ್ಟ್‌ಫೋನ್ 79,900 ರೂ.ಗಳ ಬೆಲೆಯನ್ನು ಹೊಂದಿದ್ದು, ಆದರೆ ಇದೀಗ 71,890 ರೂ.ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಹಾಗೆಯೇ HDFC Bank ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 3,500 ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಗ್ರಾಹಕರು ಪಡೆದುಕೊಳ್ಳಲು ಅವಕಾಶ ಇದೆ.
iPhone 16 Plus ಮೊಬೈಲ್ ಸಂಸ್ಥೆಯ A18 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು ಇದು ಆಪಲ್‌ನ ಇಂಟೆಲಿಜೆನ್ಸ್ ಫೀಚರ್ಸ್‌ಗಳ ಸಂಪೂರ್ಣ ಸೂಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ 6.7 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಅನ್ನು ಪಡೆದಿದೆ. ಫೋಟೋಗ್ರಫಿಗಾಗಿ ಇದು 12MP ಅಲ್ಟ್ರಾವೈಡ್ ಲೆನ್ಸ್ ಜೊತೆಗೆ ಜೋಡಿಸಲಾದ 48MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 12MP ಕ್ಯಾಮೆರಾ ರಚನೆ ಪಡೆದುಕೊಂಡಿದೆ.
ಈ ಐಫೋನ್ 128GB ಸ್ಟೋರೇಜ್, 256GB ಸ್ಟೋರೇಜ್ ಹಾಗೂ 512GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ. Face ID, Emergency SOS, Messages ಮತ್ತು Find My via satellite ನಂತಹ ಅಗತ್ಯ ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ. ಇದರ ಜೊತೆಗೆ ಈ ಮೊಬೈಲ್ IP68 ರೇಟಿಂಗ್ ಅನ್ನು ಪಡೆದಿದ್ದು ಇದು ಅಲ್ಯೂಮಿನಿಯಂ ಫ್ರೇಮ್ ರಚನೆ ಅನ್ನು ಹೊಂದಿದೆ. ಹಾಗೆಯೇ ದೀರ್ಘಾವಧಿಯ ವರೆಗೂ ಬ್ಯಾಕ್‌ಅಪ್ ಒದಗಿಸುವ ಬ್ಯಾಟರಿ ಸೌಲಭ್ಯ ಇದ್ದು, ಒಂದೇ ಚಾರ್ಜ್‌ನಲ್ಲಿ 27 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಒದಗಿಸಬಲ್ಲದು.