Infinix ಮೊಬೈಲ್ ಬ್ರಾಂಡ್‌ನ ನೂತನ Infinix NOTE Edge 5G ಮೊಬೈಲ್ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಇನ್ಫಿನಿಕ್ಸ್ ನೋಟ್ ಎಡ್ಜ್ 5G ಮೊಬೈಲ್‌ನ ಮೊದಲ ಮಾರಾಟ ಇಂದು (ಫೆಬ್ರವರಿ 25 ರಿಂದ) ಪ್ರಾರಂಭವಾಗಲಿದೆ. ಈ ಸ್ಮಾರ್ಟ್‌ಫೋನ್ MediaTek Dimensity 7100 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು ಜೊತೆಗೆ 6,500mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ. ಇಂದು ಮಾರಾಟ ಶುರು ಮಾಡಲಿರುವ ಇನ್ಫಿನಿಕ್ಸ್ ನೋಟ್ ಎಡ್ಜ್ 5G ಮೊಬೈಲ್ ಸಿಲ್ಕ್ ಫೈಬರ್, ಸ್ಟೆಲ್ಲರ್ ಬ್ಲೂ ಮತ್ತು ಲೂನಾರ್ ಟೈಟಾನಿಯಂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ಇನ್ಫಿನಿಕ್ಸ್ ನೋಟ್ ಎಡ್ಜ್ ಮೊಬೈಲ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಭಾರತದಲ್ಲಿ iQOO 15R ಬಿಡುಗಡೆ! 50MP ಕ್ಯಾಮೆರಾ, 7600mAh ಬ್ಯಾಟರಿ ಸಪೋರ್ಟ್ ಇದೆ
Infinix NOTE Edge 5G ಸ್ಮಾರ್ಟ್‌ಫೋನ್ ಇಂದು (ಫೆಬ್ರವರಿ 25 ರಿಂದ) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಮೊಬೈಲ್‌ನ 6GB + 128GB ವೇರಿಯಂಟ್ ಪ್ರೈಸ್ 21,999 ರೂಗಳು ಆಗಿದೆ. ಅದೇ ರೀತಿ 8GB + 128GB ವೇರಿಯಂಟ್ ಬೆಲೆಯು 23,999 ರೂಗಳು ಆಗಿದ್ದು ಹಾಗೆಯೇ 8GB + 256GB ವೇರಿಯಂಟ್ 25,999 ರೂಗಳ ಬೆಲೆಯಲ್ಲಿ ಲಭ್ಯ. ಇನ್ನು ಈ ಮೊಬೈಲ್ ಸಿಲ್ಕ್ ಫೈಬರ್, ಸ್ಟೆಲ್ಲರ್ ಬ್ಲೂ ಮತ್ತು ಲೂನಾರ್ ಟೈಟಾನಿಯಂ ಕಲರ್ ಆಯ್ಕೆಯನ್ನು ಒಳಗೊಂಡಿದೆ. ಗ್ರಾಹಕರು ಆರಂಭಿಕ ಪರಿಚಯಾತ್ಮಕ ಕೊಡುಗೆಯಾಗಿ ICICI ಮತ್ತು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಇನ್‌ಸ್ಟಂಟ್ 2,000 ರೂ.ಗಳ ರಿಯಾಯಿತಿ ಪಡೆಯಬಹುದು.
ಇನ್ಫಿನಿಕ್ಸ್ ನೋಟ್ ಎಡ್ಜ್ 5G ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.78 ಇಂಚಿನ 1.5K 3D ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಮೊಬೈಲ್ ಸ್ಕ್ರೀನ್ 4,500 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಪಡೆದಿದ್ದು ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಒಳಗೊಂಡಿದೆ. ಹಾಗೆಯೇ ಈ ನೂತನ ಮೊಬೈಲ್ MediaTek Dimensity 7100 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ XOS 16 ಸಾಫ್ಟ್‌ವೇರ್ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ 128GB ಹಾಗೂ 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಹಾಗೆಯೇ Infinix NOTE Edge 5G ಸ್ಮಾರ್ಟ್‌ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 6,500mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್ ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಪಡೆದಿದ್ದು ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಮೊಬೈಲ್ JBL ಬೆಂಬಲಿತ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಪಡೆದುಕೊಂಡಿದೆ.