ಟ್ರಿಪಲ್‌ ಕ್ಯಾಮೆರಾ ಇರುವ Google Pixel 10 ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

HIGHLIGHTS

ಗೂಗಲ್‌ ಪಿಕ್ಸಲ್‌ 10 ಮೊಬೈಲ್‌ ಭರ್ಜರಿ ಆಫರ್‌ ಬೆಲೆಯಲ್ಲಿ ಲಭ್ಯ

ಗೂಗಲ್‌ ಪಿಕ್ಸಲ್‌ 10 ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ

ಗೂಗಲ್‌ನ ಈ ಮೊಬೈಲ್‌ 4970mAh ಬ್ಯಾಟರಿ ಸೌಲಭ್ಯ ಹೊಂದಿದೆ

ಗೂಗಲ್‌ ಸಂಸ್ಥೆಯ ಪಿಕ್ಸಲ್‌ ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆದಿವೆ. ಗೂಗಲ್‌ ಕಂಪನಿಯ Google Pixel 10 ಸ್ಮಾರ್ಟ್‌ಫೋನ್‌ ಪ್ರೀಮಿಯಂ ವಿಭಾಗದಲ್ಲಿ ಭರ್ಜರಿ ಸದ್ದು ಮಾಡಿದೆ. ಪ್ರಸ್ತುತ ಈ ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಸಖತ್ ಬೆಲೆ ಇಳಿಕೆ ದರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಆಯ್ದ ಬ್ಯಾಂಕ್‌ ಕೊಡುಗೆಗಳ ಮೂಲಕ ಗ್ರಾಹಕರು ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಅಂದಹಾಗೆ ಗೂಗಲ್‌ ಸಂಸ್ಥೆಯ ಈ ಮೊಬೈಲ್‌ Octa Core Tensor G5 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ 4970mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಒಳಗೊಂಡಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಗೂಗಲ್‌ ಪಿಕ್ಸಲ್‌ 10 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Wireless Emergency Alerts: ನಿಮ್ಮ ಫೋನಿನಲ್ಲಿ ಇದ್ದಕ್ಕಿದ್ದಂತೆ ಸೈರನ್‌ ಸೌಂಡ್‌ ಬಂದಿತೆ? ಆತಂಕ ಬೇಡ..ಇಲ್ಲಿದೆ ಕಾರಣ

Google Pixel 10 ಮೊಬೈಲ್‌ ದರದಲ್ಲಿ ಕಡಿತ

ಗೂಗಲ್‌ ಪಿಕ್ಸಲ್‌ 10 ಮೊಬೈಲ್ ಪ್ರಸ್ತುತ Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬೊಂಬಾಟ್‌ ರಿಯಾಯಿತಿ ಪಡೆದಿದೆ. ಈ ಮೊಬೈಲ್‌ 12GB + 256GB ವೇರಿಯಂಟ್‌ ಬೆಲೆ 79,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 74,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಇನ್ನು ಈ ಸ್ಮಾರ್ಟ್‌ಫೋನ್‌ ಅಬ್ಸಿಡಿಯನ್, ಇಂಡಿಗೋ, ಲೆಮನ್ ಗ್ರಾಸ್ ಹಾಗೂ ಫ್ರಾಸ್ಟ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

ಗೂಗಲ್‌ ಪಿಕ್ಸಲ್‌ 10 ಫೀಚರ್ಸ್‌ ಮಾಹಿತಿ

ಗೂಗಲ್‌ ಪಿಕ್ಸಲ್‌ 10 ಮೊಬೈಲ್‌ 6.3 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಮೊಬೈಲ್‌ Octa Core Tensor G5 ಚಿಪ್‌ಸೆಟ್‌ ಪ್ರೊಸೆಸರ್‌ ಬೆಂಬಲದಲ್ಲಿ ಕೆಲಸ ಮಾಡಲಿದೆ ಹಾಗೂ ಆಂಡ್ರಾಯ್ಡ್‌ 16 ಓಎಸ್‌ ಬೆಂಬಲ ಪಡೆದುಕೊಂಡಿದೆ. ಇದಕ್ಕೆ ಅನುಗುಣವಾಗಿ 12GB RAM + 256GB ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ 4,870 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದ್ದು ಇದಕ್ಕೆ ಪೂರಕವಾಗಿ 30W ವೈರ್ಡ್ ಚಾರ್ಜಿಂಗ್ ಒದಗಿಸಿದೆ.

ಹಾಗೆಯೇ ಗೂಗಲ್‌ ಪಿಕ್ಸಲ್‌ 10 ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 48MP ವೈಡ್ ಆಂಗಲ್ ಲೆನ್ಸ್ ಸೆನ್ಸಾರ್‌ನಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು ಕ್ರಮವಾಗಿ 13MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 10.8MP ಟೆಲಿಫೋಟೋ ಲೆನ್ಸ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 10.5MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :