ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯ Google Pixel 10 Pro ಮೊಬೈಲ್ ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಗಮನಾರ್ಹ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್ Tensor G5 ಹಾಗೂ Titan M2 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 48MP ಸೆನ್ಸಾರ್ ಕ್ಯಾಮೆರಾ ರಚನೆ ಸಹ ಪಡೆದಿದೆ. ಅಲ್ಲದೇ ಈ ಫೋನ್ ಮೂನ್‌ಸ್ಟೋನ್, Jade, Porcelain ಹಾಗೂ ಅಬ್ಸಿಡಿಯನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಗೂಗಲ್ ಪಿಕ್ಸಲ್ 10 ಪ್ರೊ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Amazon Prime Day sale ಘೋಷಣೆ; ಪ್ರೈಮ್ ಸದಸ್ಯರಿಗೆ ಭರ್ಜರಿ ಕೊಡುಗೆಗಳು
ಆಕರ್ಷಕ ಫೀಚರ್ಸ್ ಮೂಲಕ ಮೊಬೈಲ್ ಪ್ರಿಯರ ಗಮನ ಸೆಳೆದಿರುವ ಗೂಗಲ್ ಪಿಕ್ಸಲ್ 10 ಪ್ರೊ ಮೊಬೈಲ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 16GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 1,09,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 1,04,990 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಮೂನ್‌ಸ್ಟೋನ್, Jade, Porcelain ಹಾಗೂ ಅಬ್ಸಿಡಿಯನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
ಗೂಗಲ್ ಪಿಕ್ಸಲ್ 10 ಪ್ರೊ ಮೊಬೈಲ್ 6.3 ಇಂಚಿನ LTPO OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಮೊಬೈಲ್ Tensor G5 ಹಾಗೂ Titan M2 ಚಿಪ್‌ಸೆಟ್ ಪ್ರೊಸೆಸರ್ ಬೆಂಬಲದಲ್ಲಿ ಕೆಲಸ ಮಾಡಲಿದೆ ಹಾಗೂ ಆಂಡ್ರಾಯ್ಡ್ 16 ಓಎಸ್ ಬೆಂಬಲ ಪಡೆದುಕೊಂಡಿದೆ. ಇದಕ್ಕೆ ಅನುಗುಣವಾಗಿ 16GB RAM + 256GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್ 4,870 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದ್ದು ಇದಕ್ಕೆ ಪೂರಕವಾಗಿ 30W ವೈರ್ಡ್ ಚಾರ್ಜಿಂಗ್ ಹಾಗೂ 15W Qi2 ವೈರ್‌ಲೆಸ್ ಚಾರ್ಜಿಂಗ್ ಒದಗಿಸಿದೆ.
ಹಾಗೆಯೇ ಗೂಗಲ್ ಪಿಕ್ಸಲ್ 10 ಪ್ರೊ ಮೊಬೈಲ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50MP ವೈಡ್ ಆಂಗಲ್ ಲೆನ್ಸ್ ಸೆನ್ಸಾರ್‌ನಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು ಕ್ರಮವಾಗಿ 48MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 48MP 5x ಟೆಲಿಫೋಟೋ ಲೆನ್ಸ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್ 48MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಈ ಫೋನ್ ಅತ್ಯುತ್ತಮ ಆಂಡ್ರಾಯ್ಡ್ ಅನುಭವ, ಶಕ್ತಿಯುತ ಕ್ಯಾಮೆರಾ ರಚನೆ ಮತ್ತು AI-ಚಾಲಿತ ವೈಶಿಷ್ಟ್ಯಗಳ ಮೂಲಕ ಗಮನ ಸೆಳೆಯುತ್ತದೆ.