ನಾಳೆ Boltt ಕಂಪನಿಯ ಈ ಎರಡು ಮೊಬೈಲ್‌ಗಳ ಮಾರಾಟ ಪ್ರಾರಂಭ; ಅಗ್ಗದ ಬೆಲೆಗೆ ಲಭ್ಯ

HIGHLIGHTS

ನಾಳೆ ಬೋಲ್ಟ್ ACE 5G ಹಾಗೂ EVO 4G ಮೊಬೈಲ್‌ಗಳ ಸೇಲ್‌

ಬೋಲ್ಟ್ ACE 5G ಸ್ಮಾರ್ಟ್‌ಫೋನ್ 6,500mAh ಬ್ಯಾಟರಿ ಸಪೋರ್ಟ್‌ ಪಡೆದಿದೆ

ಬೋಲ್ಟ್ EVO 4G ಮೊಬೈಲ್‌ ಯುನಿಸೊಕ್ T7250 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ

ಬೋಲ್ಟ್‌ ಕಂಪನಿಯ ಇತ್ತೀಚಿನ Boltt ACE 5G ಮೊಬೈಲ್‌ ಬಜೆಟ್‌ ಬೆಲೆ ಹಾಗೂ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ನಾಳೆ (ಸೆಪ್ಟೆಂಬರ್ 1 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಸೇಲ್‌ ಪ್ರಾರಂಭ ಮಾಡಿದೆ. ಈ ನೂತನ ಮೊಬೈಲ್‌ ಆಕ್ಟಾ-ಕೋರ್ ಯುನಿಸಾಕ್ T8200 ಚಿಪ್‌ಸೆಟ್‌ ಪ್ರೊಸೆಸರ್‌ ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಬೋಲ್ಟ್‌ EVO 4G ಮೊಬೈಲ್‌ ಸಹ ನಾಳೆ ಮಾರಾಟ ಪ್ರಾರಂಭ ಮಾಡಲಿದೆ. ಈ ಫೋನ್ ಯುನಿಸೊಕ್ T7250 ಚಿಪ್‌ಸೆಟ್‌ ಪ್ರೊಸೆಸರ್‌ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೇ ಬೋಲ್ಟ್ ACE 5G ಹಾಗೂ EVO 4G ಸ್ಮಾರ್ಟ್‌ಫೋನ್‌ಗಳ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಫ್ಲಿಪ್‌ಕಾರ್ಟ್‌ ತಾಣದಲ್ಲಿ Oppo K14x 5G ಮೊಬೈಲ್‌ ಭರ್ಜರಿ ರಿಯಾಯಿತಿ ದರದಲ್ಲಿ ಲಭ್ಯ!

ನಾಳೆ Boltt ACE 5G ಮೊಬೈಲ್‌ ಸೇಲ್‌

ಬೋಲ್ಟ್‌ ಕಂಪನಿಯ ನೂತನ ಬೋಲ್ಟ್ ACE 5G ಹಾಗೂ EVO 4G ಮೊಬೈಲ್‌ಗಳು ನಾಳೆ (ಸೆಪ್ಟೆಂಬರ್ 1 ರಿಂದ) ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಲಿವೆ. ಬೋಲ್ಟ್ ACE 5G ಮೊಬೈಲ್‌ 4GB RAM + 128GB ಸ್ಟೋರೇಜ್‌ ಮಾದರಿಯ ಬೆಲೆ 12,999 ರೂ.ಗಳು ಆಗಿದೆ. ಅಲ್ಲದೇ 6GB RAM + 128GB ಸ್ಟೋರೇಜ್‌ ವೇರಿಯಂಟ್‌ಗೆ 13,999 ರೂ.ಗಳ ಬೆಲೆ ನಿಗದಿಪಡಿಸಲಾಗಿದೆ. ಟಾಪ್‌ ಎಂಡ್‌ 8GB RAM + 128GB ಸ್ಟೋರೇಜ್‌ ಮಾದರಿಯ ಬೆಲೆ 14,999 ರೂ.ಗಳು ಆಗಿದೆ. ಇನ್ನು ಬೋಲ್ಟ್ EVO 4G ಫೋನ್‌ನ 4GB RAM + 64GB ಸ್ಟೋರೇಜ್‌ ವೇರಿಯಂಟ್‌ 9,999 ರೂ.ಗಳು ಆಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್‌ ಮಾದರಿಯ ಬೆಲೆ 10,999 ರೂ.ಗಳು ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದಾಗಿದೆ.

ಬೋಲ್ಟ್ ACE 5G ಮತ್ತು EVO 4G ಫೀಚರ್ಸ್‌

ಬೋಲ್ಟ್ ACE 5G ಹಾಗೂ EVO 4G ಫೋನ್‌ಗಳು ಆಕರ್ಷಕ ಫೀಚರ್ಸ್‌ ಹೊಂದಿವೆ. ಇನ್ನು ಡಿಸ್‌ಪ್ಲೇ ವಿಚಾರದಲ್ಲಿ ಬೋಲ್ಟ್ ACE 5G ಮತ್ತು EVO 4G ಎರಡೂ 6.79 ಇಂಚಿನ HD+ ಡಿಸ್ಪ್ಲೇ ಹೊಂದಿವೆ. ಈ ಸ್ಕ್ರೀನ್‌ 720×1640 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಫ್ರೆಶ್‌ ರೇಟ್‌ ಮತ್ತು 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡುತ್ತದೆ. ಬ್ಯಾಟರಿ ವಿಚಾರದಲ್ಲಿ ಎರಡೂ ಫೋನ್‌ಗಳಲ್ಲಿ 6,000mAh ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದೆ. ಇದು 18W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಹೀಗಾಗಿ ಸಾಮಾನ್ಯ ಬಳಕೆಯಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್‌ ನಿರೀಕ್ಷಿಸಬಹುದು.

ಹಾಗೆಯೇ ಬೋಲ್ಟ್ ACE 5G ಯುನಿಸೊಕ್ T8200 ಚಿಪ್‌ಸೆಟ್‌ ಬಳಸಿಕೊಂಡಿದೆ. ಮತ್ತೊಂದೆಡೆ ಬೋಲ್ಟ್ EVO 4G ಸ್ಮಾರ್ಟ್‌ಫೋನ್‌ ಯುನಿಸೊಕ್ T7250 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನೊಂದಿಗೆ ಬರುತ್ತದೆ. ಕ್ಯಾಮೆರಾ ವಿಭಾಗದಲ್ಲಿ ACE 5G ಹಿಂಭಾಗದಲ್ಲಿ f/1.8 ಅಪರ್ಚರ್‌ನ 64MP ಪ್ರೈಮರಿ ಕ್ಯಾಮೆರಾ ಹೊಂದಿದೆ. ಬೋಲ್ಟ್‌ EVO 4G ನಲ್ಲಿ 50MP ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಎರಡೂ ಫೋನ್‌ಗಳಲ್ಲಿ f/2.0 ಅಪರ್ಚರ್‌ನ 8MP ಫ್ರಂಟ್‌ ಕ್ಯಾಮೆರಾ ಇದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :