apple announces Apple Surprise and shine Event what to expect
Apple Surprise and shine Event: ಆಪಲ್‌ನ ಬಹುನಿರೀಕ್ಷಿತ ಸೆಪ್ಟೆಂಬರ್ ಕಾರ್ಯಕ್ರಮದ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಕಂಪನಿಯು ತನ್ನ ವಿಶೇಷ ಸರ್ಪ್ರೈಸ್ ಅಂಡ್ ಶೈನ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 9 ರಂದು ಆಯೋಜಿಸುವುದಾಗಿ ಖಚಿತಪಡಿಸಿದೆ. ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಸರಣಿ ಅಥವಾ ಮಡಿಸಬಹುದಾದ ಐಫೋನ್ ಬಿಡುಗಡೆಯಾಗುವ ನಿರೀಕ್ಷೆಯಷ್ಟೇ ಅಲ್ಲದೆ, ಜಾನ್ ಟೆರ್ನಸ್ CEO ಆಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಪ್ರಮುಖ ಆಪಲ್ ಕಾರ್ಯಕ್ರಮ ಎಂಬ ಕಾರಣಕ್ಕೂ ವಿಶೇಷ ಗಮನ ಸೆಳೆದಿದೆ. ಈ ಕಾರ್ಯಕ್ರಮದಲ್ಲಿ ಆಪಲ್ ಯಾವೆಲ್ಲ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ, ಯಾವ ಪ್ರಮುಖ ಘೋಷಣೆಗಳು ಹೊರಬೀಳಬಹುದು ಎಂಬುದರ ಕುರಿತು ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಕಾರ್ಯಕ್ರಮದಲ್ಲಿ ನಿರೀಕ್ಷಿಸಬಹುದಾದ ಪ್ರಮುಖ ಅಂಶಗಳ ವಿವರ ಇಲ್ಲಿದೆ.
Also Read : ಭಾರತದಲ್ಲಿ Realme P4s 5G ಮೊಬೈಲ್ ಬಿಡುಗಡೆ! ಬರೋಬ್ಬರಿ 8,000mAh ಬ್ಯಾಟರಿ ಸೌಲಭ್ಯ
ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ ಮಾದರಿಗಳನ್ನು ಪರಿಚಯಿಸುವುದು ಆಪಲ್‌ನ ಸಂಪ್ರದಾಯವಾಗಿದೆ. ಇದರ ಜೊತೆಗೆ, ಕೆಲವೊಮ್ಮೆ ಇತರ ಹೊಸ ಉತ್ಪನ್ನಗಳು ಮತ್ತು ಅಪ್‌ಡೇಟ್‌ಗಳನ್ನೂ ಕಂಪನಿ ಘೋಷಿಸುತ್ತದೆ. 2026 ರಲ್ಲೂ ಇದೇ ಸಂಪ್ರದಾಯ ಮುಂದುವರಿಯಲಿದ್ದು, ಸೆಪ್ಟೆಂಬರ್ 9 ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಆಪಲ್ ದೃಢಪಡಿಸಿದೆ.
‘ಸರ್ಪ್ರೈಸ್ ಅಂಡ್ ಶೈನ್’ ಹೆಸರಿನ ಆಪಲ್‌ನ ವಿಶೇಷ ಕಾರ್ಯಕ್ರಮ ಸೆಪ್ಟೆಂಬರ್ 9 ರಂದು ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಎಂದಿನಂತೆ ಈ ಕಾರ್ಯಕ್ರಮವನ್ನು YouTube, Apple Events ವೆಬ್‌ಪೇಜ್ ಮತ್ತು Apple TV ಆಪ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದು.
ಈ ಬಾರಿ ಆಪಲ್ ಈವೆಂಟ್‌ನಲ್ಲಿ ಹಲವು ಪ್ರಮುಖ ಉತ್ಪನ್ನಗಳ ಘೋಷಣೆ ನಡೆಯುವ ಸಾಧ್ಯತೆಯಿದೆ. ಪ್ರಮುಖವಾಗಿ ಮೂರು ಹೊಸ ಐಫೋನ್ ಮಾದರಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.
– iPhone 18 Pro
– iPhone 18 Pro Max
– foldable iPhone
ಸೆಪ್ಟೆಂಬರ್ 9ರ ಕಾರ್ಯಕ್ರಮದಲ್ಲಿ ಆಪಲ್ iPhone 18 Pro ಮತ್ತು iPhone 18 Pro Max ಅನ್ನು ಅಧಿಕೃತವಾಗಿ ಪರಿಚಯಿಸುವ ಸಾಧ್ಯತೆಯಿದೆ. ಇದರ ಜೊತೆಗೆ, ಹಲವು ವರ್ಷಗಳಿಂದ ನಿರೀಕ್ಷಿಸಲಾಗುತ್ತಿರುವ ಕಂಪನಿಯ ಮೊದಲ foldable iPhone ಕೂಡ ವೇದಿಕೆಗೆ ಬರಬಹುದು. ಈ ಹೊಸ ಸಾಧನಕ್ಕೆ iPhone Ultra ಅಥವಾ iPhone Fold ಎಂಬ ಹೆಸರು ಇಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಐಫೋನ್ 18 ಪ್ರೊ ಸರಣಿಯ ಜೊತೆಗೆ, ಹೊಸ ತಲೆಮಾರಿನ Apple Watch ಕೂಡ ಈ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.