ಭಾರತದಲ್ಲಿ iPhone 17e ಮೊಬೈಲ್‌ ಬಿಡುಗಡೆ! 48MP ಕ್ಯಾಮೆರಾ, A19 ಚಿಪ್‌ಸೆಟ್‌ ಸೌಲಭ್ಯ

HIGHLIGHTS

ಐಫೋನ್ 17e ಮೊಬೈಲ್‌ ಸೂಪರ್ ರೆಟಿನಾ XDR OLED ಪ್ಯಾನಲ್ ಡಿಸ್‌ಪ್ಲೇ ಪಡೆದಿದೆ

ಐಫೋನ್ 17e ಫೋನ್‌ ಮುಂಭಾಗದಲ್ಲಿ 48MP ಸೆನ್ಸಾರ್‌ನ ಕ್ಯಾಮೆರಾವನ್ನು ಪಡೆದಿದೆ

ಆಪಲ್‌ನ ಐಫೋನ್ 17e ಮೊಬೈಲ್‌ ಸಾಫ್ಟ್ ಪಿಂಕ್, ವೈಟ್‌ ಮತ್ತು ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದಿದೆ

ಟೆಕ್ ದಿಗ್ಗಜ ಆಪಲ್ ಕಂಪನಿಯು ತನ್ನ ಬಹುನಿರೀಕ್ಷಿತ iPhone 17e ಅನ್ನು ಘೋಷಿಸಿದೆ. ನೂತನ ಐಫೋನ್ 17e ಮೊಬೈಲ್‌ ಆಪಲ್‌ನ A19 ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿದೆ. ಈ ನೂತನ ಐಫೋನ್ ಹೆಚ್ಚು ಖರ್ಚು ಮಾಡದೇ ಫ್ಲ್ಯಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆಯನ್ನು ಬಯಸುವ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಂದಹಾಗೆ ಈ ಐಫೋನ್‌ ಸಾಫ್ಟ್ ಪಿಂಕ್, ವೈಟ್‌ ಮತ್ತು ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗೆಯೇ ಐಫೋನ್ 17e ಮೊಬೈಲ್ OLED ಪ್ಯಾನೆಲ್ ಅನ್ನು ಹೊಂದಿದೆ ಜೊತೆಗೆ iOS 26 ನಲ್ಲಿ ಕೆಲಸ ನಿರ್ವಹಿಸುತ್ತದೆ. ಅಲ್ಲದೇ ಇದು 48MP ಫ್ಯೂಷನ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಐಫೋನ್ 17e ಮೊಬೈಲ್‌ನ ಫೀಚರ್ಸ್‌ ಮತ್ತು ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿದುಕೊಳ್ಳೋಣ.

Also Read : Holi Wishes 2026 in Kannada: ಹೋಳಿ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಬೆಸ್ಟ್‌ ಮೆಸೆಜ್‌ಗಳು

iPhone 17e ಮೊಬೈಲ್‌ ಬೆಲೆ ಹಾಗೂ ಲಭ್ಯತೆ

ಆಪಲ್‌ ಸಂಸ್ಥೆಯ ಐಫೋನ್ 17e ಮೊಬೈಲ್ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಐಫೋನ್‌ 256GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 64,900 ರೂ.ಗಳು ಆಗಿದೆ. 512GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 84,900 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರಲಿದೆ. ಇನ್ನು ಐಫೋನ್ 17e ಮೊಬೈಲ್‌ ಮಾರ್ಚ್ 11 ರಿಂದ ಮಾರಾಟಕ್ಕೆ ಬರಲಿದೆ. ಅಂದಹಾಗೆ ಈ ಐಫೋನ್‌ ಬ್ಲ್ಯಾಕ್‌, ವೈಟ್‌ ಮತ್ತು ಮ್ಯಾಟ್ ಟೆಕ್ಸ್ಚರ್ ಹೊಂದಿರುವ ಹೊಸ ಸಾಫ್ಟ್ ಪಿಂಕ್ ಫಿನಿಶ್‌ ಕಲರ್‌ನಲ್ಲಿ ಲಭ್ಯವಿರುತ್ತದೆ.

ಐಫೋನ್ 17e ಮೊಬೈಲ್‌ ಫೀಚರ್ಸ್‌ ಹೀಗಿವೆ

ಐಫೋನ್ 17e ಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಪ್ಯಾನಲ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಮೊಬೈಲ್‌ 1200 ನಿಟ್‌ಗಳ ವರೆಗೆ ಬ್ರೈಟ್ನೆಸ್‌ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಐಫೋನಿನ ಡಿಸ್‌ಪ್ಲೇ ಅನ್ನು ಗೀರುಗಳಿಂದ ರಕ್ಷಿಸಲು ಇದು ಸೆರಾಮಿಕ್ ಶೀಲ್ಡ್ 2 ಅನ್ನು ಪಡೆದುಕೊಂಡಿದೆ. ಇದಲ್ಲದೆ ಮೊಬೈಲ್‌ IP68 ರೇಟಿಂಗ್ ಸೌಲಭ್ಯವನ್ನು ಒಳಗೊಂಡಿದ್ದು ಇದು ನೀರು ಮತ್ತು ಧೂಳಿನಿಂದ ಸುರಕ್ಷಿತವಾಗಿರಿಸುತ್ತದೆ. ಈ ಮೊಬೈಲ್‌ ಇತ್ತೀಚಿನ iOS 26 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಐಫೋನ್ ಆಪಲ್‌ನ A19 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದೆ. ಇದು ಸುಧಾರಿತ 3nm ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್‌ 6 ಕೋರ್ CPU, 4 ಕೋರ್ GPU ಮತ್ತು ಜನರೇಟಿವ್ AI ಮಾಡೆಲ್‌ಗಳಿಗೆ ಹೊಂದುವಂತೆ ಮಾಡಲಾದ 16 ಕೋರ್ ನ್ಯೂರಲ್ ಎಂಜಿನ್ ಅನ್ನು ಪಡೆದುಕೊಂಡಿದೆ.

ಹಾಗೆಯೇ ಈ ಐಫೋನ್‌ ಮುಂಭಾಗದಲ್ಲಿ 48MP ಸೆನ್ಸಾರ್‌ನ ಕ್ಯಾಮೆರಾವನ್ನು ಪಡೆದಿದೆ. ಹಾಗೆಯೇ 48MP ಫ್ಯೂಷನ್ ಕ್ಯಾಮೆರಾ ಸಿಸ್ಟಮ್ ಆಪ್ಟಿಕಲ್ ಗುಣಮಟ್ಟದ 2x ಟೆಲಿಫೋಟೋ ಜೂಮ್ ಅನ್ನು ಸಪೋರ್ಟ್‌ ಮಾಡುತ್ತದೆ. ಅಲ್ಲದೇ ಪರಿಣಾಮಕಾರಿಯಾಗಿ 2 ಇನ್ 1 ಕ್ಯಾಮೆರಾ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ಹಾಗೆಯೇ 24MP ಡೀಫಾಲ್ಟ್ ಇಮೇಜ್ ಕ್ಯಾಪ್ಚರ್, ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸ್ಮಾರ್ಟ್ HDR ಮತ್ತು 60fps ವರೆಗೆ 4K ಡಾಲ್ಬಿ ವಿಷನ್ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಐಫೋನ್ 17e ಮೊಬೈಲ್‌ USB-C ಮೂಲಕ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದು ಸುಮಾರು 30 ನಿಮಿಷಗಳಲ್ಲಿ 50% ರಷ್ಟು ಚಾರ್ಜ್ ಒದಗಿಸುತ್ತದೆ. ಇದಕ್ಕೆ ಪೂರಕವಾಗಿ 15W ವರೆಗೆ MagSafe ಮತ್ತು Qi2 ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್‌ ಮಾಡುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :