ಪ್ರಮುಖ ಟೆಕ್ ಸಂಸ್ಥೆಯಾಗಿರುವ LG ಕಂಪನಿಯು ಹಲವು ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. LG ಸಂಸ್ಥೆಯು ಇದೀಗ LG Gram 14 (2026) ಲ್ಯಾಪ್‌ಟಾಪ್ ಅನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಿದೆ. ಇದು ತೆಳುವಾದ ಮತ್ತು ಹಗುರವಾದ ರಚನೆ ಅನ್ನು ಹೊಂದಿರುವ ಇತ್ತೀಚಿನ ಆವೃತ್ತಿಯಾಗಿದೆ. ಇದು AMD ರೈಜೆನ್ AI 7 450 ಪ್ರೊಸೆಸರ್ ಪವರ್ ಪಡೆದಿದ್ದು ಪೋರ್ಟಬಿಲಿಟಿ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಅಲ್ಲದೇ ಇದು 72Wh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದ್ದು ದೀರ್ಘಾವಧಿಯ ವರೆಗೆ ಬ್ಯಾಕ್‌ಅಪ್ ಒದಗಿಸಲಿದೆ. ಹಾಗಾದರೆ LG Gram 14 (2026) ಲ್ಯಾಪ್‌ಟಾಪ್‌ನ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸ್ಟೈಲಿಶ್ ಲುಕ್ ಇರುವ Vivo T4x 5G ಖರೀದಿಗೆ ಇದುವೇ ಬೆಸ್ಟ್ ಟೈಮ್! ಭರ್ಜರಿ ಡಿಸ್ಕೌಂಟ್ ಲಭ್ಯ
ಮಾರುಕಟ್ಟೆಗೆ ಹೊಸದಾಗಿ ಪರಿಚಯವಾಗಿರುವ LG Gram 14 (2026) ಲ್ಯಾಪ್‌ಟಾಪ್ ಆರಂಭಿಕ ಬೆಲೆ ಜಪಾನ್‌ನಲ್ಲಿ JPY 2,51,820 (ಭಾರತದಲ್ಲಿ ಅಂದಾಜು 1,47,800 ರೂ.ಗಳು) ಆಗಿದೆ. ಇದು 16GB RAM ಮತ್ತು 512GB ಸ್ಟೋರೇಜ್ ಹೊಂದಿರುವ AMD Ryzen AI 5 435 ಚಿಪ್‌ಸೆಟ್ ವೇರಿಯಂಟ್ ಆಗಿದೆ. ಹಾಗೆಯೇ 32GB RAM ಮತ್ತು 512GB ಸ್ಟೋರೇಜ್ ಹೊಂದಿರುವ AMD Ryzen AI 7 450 ಪ್ರೊಸೆಸರ್ ವೇರಿಯಂಟ್ ಬೆಲೆ ಜಪಾನ್‌ನಲ್ಲಿ JPY 3,49,800 (ಭಾರತದಲ್ಲಿ ಅಂದಾಜು 2,05,000 ರೂ.ಗಳು) ಆಗಿದೆ.
ಈ ನೂತನ ಲ್ಯಾಪ್‌ಟಾಪ್ ವಿಂಡೋಸ್ 11 ಹೋಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದು 14 ಇಂಚಿನ WUXGA IPS ಡಿಸ್‌ಪ್ಲೇ ಅನ್ನು ಹೊಂದಿದ್ದು, DCI-P3 ಬಣ್ಣದ ಗ್ಯಾಮಟ್ ಕವರೇಜ್ ಜೊತೆಗೆ 60Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಲ್ಯಾಪ್‌ಟಾಪ್ AMD Ryzen AI 7 450 ಪ್ರೊಸೆಸರ್ ಜೊತೆಗೆ Radeon ಗ್ರಾಫಿಕ್ಸ್ ಸಪೋರ್ಟ್ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ 32GB LPDDR5x ಮೆಮೊರಿ ಮತ್ತು 512GB NVMe (Gen 4) SSD ವರೆಗಿನ ಸ್ಟೋರೇಜ್ ಅನ್ನು ಒದಗಿಸುತ್ತದೆ. ಅಲ್ಲದೇ ಹೆಚ್ಚುವರಿ M.2 ವಿಸ್ತರಣಾ ಸ್ಲಾಟ್ ಅನ್ನು ಹೊಂದಿರುವ ಜೊತೆಗೆ ಡಾಲ್ಬಿ ಅಟ್ಮಾಸ್ ಸಪೋರ್ಟ್‌ನ ಡ್ಯುಯಲ್ 1.5W ಸ್ಟೀರಿಯೊ ಸ್ಪೀಕರ್‌ಗಳನ್ನು ಪಡೆದುಕೊಂಡಿದೆ.
ಅದೇ ರೀತಿ ಎಲ್‌ಜಿ ಸಂಸ್ಥೆಯು ಈ ಲ್ಯಾಪ್‌ಟಾಪ್ 72Wh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರುವ ಜೊತೆಗೆ 65W AC ಅಡಾಪ್ಟರ್ ಅನ್ನು ಸಹ ಒಳಗೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೆ 18.5 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಮತ್ತು 30.5 ಗಂಟೆಗಳ ವರೆಗೆ ಬ್ಯಾಕ್‌ಅಪ್ ನೀಡಬಲ್ಲದು ಎನ್ನಲಾಗಿದೆ. ಹಾಗೆಯೇ ಬ್ಲೂಟೂತ್ 5.4 ಮತ್ತು Wi-Fi 6E ಆಯ್ಕೆಗಳ ಸಪೋರ್ಟ್ ಇದೆ. ಅತ್ಯುತ್ತಮ ವೀಡಿಯೊ ಕರೆಗಳಿಗಾಗಿ ಪೂರ್ಣ HD (1080p) ವೆಬ್‌ಕ್ಯಾಮ್ ಸಪೋರ್ಟ್ ಸಹ ಪಡೆದುಕೊಂಡಿದೆ. ಇದು ಸ್ಟೀರಿಯೊ ಮಿನಿ ಜ್ಯಾಕ್ ಜೊತೆಗೆ HDMI ಪೋರ್ಟ್, USB ಟೈಪ್-C ಮತ್ತು USB ಟೈಪ್-A ಪೋರ್ಟ್‌ಗಳನ್ನು ಹೊಂದಿದೆ.