ಜನಪ್ರಿಯ Xiaomi ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಇದೀಗ ಶಿಯೋಮಿ ಫ್ಯಾನ್ ಫೆಸ್ಟ್ (Xiaomi Fan Festival 2026) ಸೇಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ವಿಶೇಷ ಸೇಲ್‌ನ ಭಾಗವಾಗಿ ಶಿಯೋಮಿ ಮತ್ತು ರೆಡ್ಮಿ ಕಂಪನಿಯ ಹಲವು ಉತ್ಪನ್ನಗಳು ಆಫರ್ ಬೆಲೆಯಲ್ಲಿ ಲಭ್ಯವಿರುತ್ತವೆ. ಇನ್ನು ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ Redmi Note 15 SE ಫೋನ್ ಸಹ ಇಂದಿನಿಂದ ಸೇಲ್ ಶುರು ಮಾಡಿದೆ. ಇನ್ನು ಶಿಯೋಮಿ ಸಂಸ್ಥೆಯ ಶಿಯೋಮಿ ಫ್ಯಾನ್ ಫೆಸ್ಟ್ 2026 ಈಗಾಗಲೇ ಲೈವ್ ಆಗಿದ್ದು ಇದೇ ಏಪ್ರಿಲ್ 15 ರವರೆಗೆ ಚಾಲ್ತಿ ಇರಲಿದೆ ಎಂದು ವರದಿಯಾಗಿದೆ. ಹಾಗಾದರೆ ಶಿಯೋಮಿ ಫ್ಯಾನ್ ಫೆಸ್ಟ್ 2026 ಆಫರ್ ಕುರಿತು ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಇಂದಿನಿಂದ Redmi Note 15 SE 5G ಮೊಬೈಲ್ ಸೇಲ್ ಶುರು! ಆಕರ್ಷಕ ಫೀಚರ್ಸ್
ಶಿಯೋಮಿ ಆಯೋಜಿಸಿರುವ ಈ ಸೇಲ್ mi.com, Xiaomi ರಿಟೇಲ್ ಸ್ಟೋರ್, ಅಧಿಕೃತ ಆಫ್‌ಲೈನ್ ಪಾಲುದಾರರು ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿದೆ. ಈ ಮಾರಾಟದ ಕೊಡುಗೆಗಳು ಫ್ಲಾಟ್ ರಿಯಾಯಿತಿಗಳಲ್ಲ. ಆದರೆ ಬೆಲೆ ಕಡಿಮೆ ಮಾಡಲು ಸಹಾಯ ಮಾಡುವ ಕೊಡುಗೆಗಳು ಲಭ್ಯವಿದೆ.
ಶಿಯೋಮಿ ಫ್ಯಾನ್ ಫೆಸ್ಟ್ (Xiaomi Fan Festival 2026) ಭಾಗವಾಗಿ ರೆಡ್ಮಿ ನೋಟ್ 15 SE ಮೊಬೈಲ್ ಇಂದು ಭಾರತದಲ್ಲಿ ಸೇಲ್ ಪ್ರಾರಂಭ ಮಾಡಿದೆ. ಇನ್ನು ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯ ಇದ್ದು ಇದರ ಪ್ರಾರಂಭಿಕ ವೇರಿಯಂಟ್ 19,999 ರೂ.ಗಳಿಂದ ಪ್ರಾರಂಭ ಆಗುತ್ತದೆ. ಇದು ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಮೊಬೈಲ್ 5,800mAh ಬ್ಯಾಟರಿ ಸಪೋರ್ಟ್ ಒಳಗೊಂಡಿರುವ ಜೊತೆಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿರುವ ಜೊತೆಗೆ ಕರ್ವ್ಡ್ AMOLED ಸೌಲಭ್ಯ ಒಳಗೊಂಡಿದೆ.
ಸಂಸ್ಥೆಯ Redmi Pad 2 ಡಿವೈಸ್ ಟ್ಯಾಬ್ಲೆಟ್ ಗ್ರಾಹಕರ ಗಮನ ಸೆಳೆದಿದೆ. ಇದು ಸ್ಟೈಲಸ್ ಲುಕ್ ಜೊತೆಗೆ ದೀರ್ಘಾವಧಿಯ ವಿಶ್ವಾಸಾರ್ಹ ಬ್ಯಾಟರಿ ಬಾಳಿಕೆಯೊಂದಿಗೆ ಆಕರ್ಷಕ ಎನಿಸಿದೆ. ಅಂದಹಾಗೆ ಈ ಡಿವೈಸ್ ಅತ್ಯಂತ ಕೈಗೆಟುಕುವ ಟ್ಯಾಬ್ಲೆಟ್‌ಗಳಲ್ಲಿ ಒಂದಾಗಿದೆ. ಈ ಟ್ಯಾಬ್ಲೆಟ್ ನಿಯಮಿತ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಇನ್ನು ಇದು 4GB + 128GB (4G ವೇರಿಯಂಟ್) ಹಾಗೂ 8GB + 128GB (Wi-Fi ವೇರಿಯಂಟ್) ಆಯ್ಕೆಗಳಲ್ಲಿ ಲಭ್ಯ.
ಈ ವಿಶೇಷ ಸೇಲ್‌ನ ಭಾಗವಾಗಿ ಶಿಯೋಮಿ ಕಂಪನಿಯು ಇದೇ ಏಪ್ರಿಲ್ 15 ರಂದು ಶಿಯೋಮಿ TV S Mini LED ಸರಣಿ 2026 ನೊಂದಿಗೆ ಬಿಡುಗಡೆ ಮಾಡಲಿದೆ. ಅಲ್ಲದೇ ಶಿಯೋಮಿ ಭಾರತದಲ್ಲಿ ತನ್ನ ಮುಂಬರುವ ಟಿವಿ ಶ್ರೇಣಿಯೊಂದಿಗೆ ಹೆಚ್ಚಿನ ಗರಿಷ್ಠ ಬ್ರೈಟ್ನೆಸ್, LED/QLED ಗಿಂತ ಉತ್ತಮ ಕಾಂಟ್ರಾಸ್ಟ್ ನಿಯಂತ್ರಣ ಮತ್ತು ಹೆಚ್ಚು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಟೀಸರ್ ಮಾಡಿದೆ.