Vivo T5 Lite launch confirmed with big battery and fast charge support
ಮೊಬೈಲ್ ಪ್ರಿಯರ ನೆಚ್ಚಿನ ಬ್ರಾಂಡ್‌ಗಳಲ್ಲಿ ಒಂದಾದ ವಿವೋ ಇದೀಗ Vivo T5 Lite ಮೊಬೈಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯ ಈ ಸ್ಮಾರ್ಟ್‌ಫೋನ್ ಇಂದು (ಜುಲೈ 16 ರಂದು) ಅಧಿಕೃತವಾಗಿ ಭಾರತದಲ್ಲಿ ಲಾಂಚ್ ಆಗಲಿದೆ. ಮುಂಬರುವ ಈ ಮೊಬೈಲ್‌ನ ಲಾಂಚ್ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವುದು ಕನ್ಫರ್ಮ್ ಆಗಿದೆ. ಅಲ್ಲದೇ 50 ಮೆಗಾಪಿಕ್ಸಲ್ ಕ್ಯಾಮೆರಾ ಒಳಗೊಂಡಿರುವ ಜೊತೆಗೆ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಹಾಗಾದರೆ ಮುಂಬರುವ ವಿವೋ T5 ಲೈಟ್ ಮೊಬೈಲ್‌ನ ಲಾಂಚ್ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ರೈಲು ಟಿಕೆಟ್ ಬುಕಿಂಗ್ ಮತ್ತಷ್ಟು ಸುಲಭ! IRCTC ಹೊಸ ಬೀಟಾ ವೆಬ್‌ಸೈಟ್ ಆರಂಭ
ಬಿಡುಗಡೆಗೂ ಮುನ್ನವೇ ವಿವೋ T5 ಲೈಟ್ ಸ್ಮಾರ್ಟ್‌ಫೋನ್ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್ ಅನ್ನು ಇಂದು (ಜುಲೈ 16 ರಂದು) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈ ಮೊಬೈಲ್ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಲಾಂಚ್ ಬಳಿಕ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಸೇಲ್ ಶುರು ಮಾಡಲಿದೆ. ಅಂದಹಾಗೆ ಲೀಕ್ ಮಾಹಿತಿ ಪ್ರಕಾರ ಈ ಮೊಬೈಲ್ 4GB + 128GB, 6GB + 128GB ಮತ್ತು 6GB + 256GB ಸ್ಟೋರೇಜ್ ವೇರಿಯಂಟ್‌ಗಳ ಆಯ್ಕೆ ಬರಲಿದೆ ಎನ್ನಲಾಗಿದೆ. ಹಾಗೆಯೇ ಟ್ವಿಲೈಟ್ ಶ್ಯಾಡೋ ಮತ್ತು ವೇವ್ ಬ್ಲೂ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ.
ವಿವೋ T5 ಲೈಟ್ ಫೋನ್ 6.74 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಪಡೆದಿರುವ ಸಾಧ್ಯತೆಯಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಜೊತೆಗೆ 1,200 nits ವರೆಗಿನ ಹೈ ಬ್ರೈಟ್‌ನೆಸ್ ಸೌಲಭ್ಯ ಪಡೆದಿರಬಹುದು. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಅಥವಾ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ 4GB + 128GB, 6GB + 128GB ಮತ್ತು 6GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆಗಳು ಇವೆ.
ವಿವೋ T5 ಲೈಟ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿರುವ ಸೂಚನೆಗಳು ಇವೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ನಲ್ಲಿ ಇರಬಹುದು ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಬಲ ಪಡೆದಿರಲಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಬಹುದು ಎನ್ನಲಾಗಿದೆ. ಹಾಗೆಯೇ ಧೂಳು ಮತ್ತು ನೀರು-ನಿರೋಧಕ್ಕಾಗಿ ಇದು IP65 ರೇಟಿಂಗ್ ಸೌಲಭ್ಯ ಪಡೆದಿರಲಿದೆ.