Sarvam AI ಸಾಧನೆ: ChatGPT ಮತ್ತು Google Gemini ಗಳನ್ನೇ ಮೀರಿಸಿದ ಬೆಂಗಳೂರಿನ ಸ್ಟಾರ್ಟ್‌ಅಪ್‌

Updated on 09-Feb-2026
HIGHLIGHTS

AI ವಲಯದಲ್ಲಿ ChatGPT ಮತ್ತು Google Gemini ಮೀರಿಸಿದ Sarvam

ಸಂಸ್ಥೆಯು Sarvam Vision ಮತ್ತು Bulbul ಹೆಸರಿನ ಎರಡು ಟೂಲ್‌ಗಳನ್ನು ಪರಿಚಯಿಸಿದೆ

Bulbul ಟೆಕ್ಸ್ಟ್‌ ಅನ್ನು ವಾಯ್ಸ್ ಆಗಿ ಪರಿವರ್ತಿಸುವ ಟೂಲ್‌ ಆಗಿದೆ

ಬಹುತೇಕ ಜನರಲ್ಲಿ ಅಮೆರಿಕಾ ಮತ್ತು ಚೀನಾ ಮಾತ್ರವೇ AI ಜಗತ್ತನ್ನು ಆಳುತ್ತಿವೆ ಎಂಬ ಭಾವನೆ ಇದೆ. ಆದರೆ ಈಗ ಆ ಚಿಂತನೆಗೆ ಬದಲಾವಣೆ ತರಲು ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥೆಯೊಂದು ಸಜ್ಜಾಗಿದೆ. ಭಾರತದ ಸ್ವಂತ Sarvam AI ಆ ಸಾಧನೆಯನ್ನು ಸಾಧಿಸಿದ್ದು ಈಗ ಇಡೀ ಜಗತ್ತೆ ಅಚ್ಚರಿಪಡುವಂತೆ ಮಾಡಿದೆ. ಸಂಸ್ಥೆಯ ಹೊಸ AI ಟೂಲ್‌ಗಳು ಸುದ್ದಿಗಳನ್ನು ಗಳಿಸಿವೆ ಮಾತ್ರವಲ್ಲದೆ ಕೆಲವು ಸಂದರ್ಭಗಳಲ್ಲಿ ChatGPT ಮತ್ತು Google Gemini ನಂತಹ AI ಪ್ಲಾಟ್‌ಫಾರ್ಮ್ ಗಳನ್ನೇ ಹಿಂದಿಕ್ಕಿದೆ. ಇದು ಸಾರ್ವಭೌಮ AI ಮಾದರಿಯಾಗಿ ಗುರುತಿಸಿಕೊಂಡಿದ್ದು, ಸದ್ಯ ಜಾಗತಿಕ ವೇದಿಕೆಯಲ್ಲಿ ತನ್ನ ಛಾಪು ಮೂಡಿಸುತ್ತಿದೆ. Sarvam AI ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಅಗ್ಗದ ಬೆಲೆಯಲ್ಲಿ Samsung Galaxy F70e ಸ್ಮಾರ್ಟ್‌ಫೋನ್‌ ಬಿಡುಗಡೆ; ಬೆಲೆ, ಫೀಚರ್ಸ್‌ ಮಾಹಿತಿ ಇಲ್ಲಿದೆ!

ಸಾರ್ವಭೌಮ AI

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಗ್ಗೆ ಮಾತನಾಡುವಾಗ ಅಮೆರಿಕ ಮತ್ತು ಚೀನಾ ದೇಶಗಳ ಸುದ್ದಿಗಳು ಹೆಚ್ಚಾಗಿ ಕಾಣುತ್ತೆವೆ. ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸರ್ವಮ್ AI ಈಗ ಸಾರ್ವಭೌಮ AI ಎಂದು ಕರೆಸಿಕೊಳ್ಳುವ ಮೂಲಕ ಆ ಗ್ರಹಿಕೆಯನ್ನು ಬದಲಾಯಿಸುತ್ತಿದೆ. ಸರ್ವಮ್ ಸಂಸ್ಥೆಯು ಭಾರತದಲ್ಲಿ ಮೂಲಭೂತ AI ಮಾದರಿಗಳನ್ನು ಮೊದಲಿನಿಂದಲೂ ನಿರ್ಮಿಸುತ್ತಿದೆ. ಹೊಸದಾಗಿ ಬಿಡುಗಡೆ ಆಗಿರುವ ಸಂಸ್ಥೆಯ ಎರಡು ಟೂಲ್‌ಗಳಾದ Sarvam Vision ಮತ್ತು Bulbul ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸುತ್ತಿವೆ ಎಂದು ವರದಿಯಾಗಿದೆ.

ಸಂಸ್ಥೆಯ ಸಹ-ಸಂಸ್ಥಾಪಕ ಪ್ರತ್ಯುಷ್ ಕುಮಾರ್ ಅವರ ಪೋಸ್ಟ್ ಪ್ರಕಾರ, ಸರ್ವಮ್ ವಿಷನ್ olmOCR-Bench ನಲ್ಲಿ 84.3 ಪ್ರತಿಶತದಷ್ಟು ನಿಖರತೆಯ ಸ್ಕೋರ್ ಅನ್ನು ಸಾಧಿಸಿದೆ. ಈ ಸ್ಕೋರ್ Gemini 3 ಪ್ರೊ ಮತ್ತು ಇತ್ತೀಚಿನ OCR ಮಾದರಿಗಳಾದ DeepSeek OCR v2 ಗಿಂತ ಅಧಿಕವಾಗಿದೆ. ಇನ್ನು ChatGPT ಬಹಳ ಕಡಿಮೆ ಸ್ಥಾನದಲ್ಲಿ ಕಾಣಿಸಿಕೊಂಡಿದೆ. OmniDocBench v1.5: ಸಂಕೀರ್ಣ ಲೇಔಟ್‌ಗಳು, ತಾಂತ್ರಿಕ ಕೋಷ್ಟಕಗಳು (Technical tables) ಮತ್ತು ಗಣಿತದ ಸೂತ್ರಗಳನ್ನು ಅರ್ಥೈಸಿಕೊಳ್ಳುವ ಈ ಪರೀಕ್ಷೆಯಲ್ಲಿ ಸರ್ವಂ 93.28% ಅಂಕ ಗಳಿಸಿದೆ. ಅತೀ ಕಠಿಣ ಫಾರ್ಮ್ಯಾಟಿಂಗ್ ಹೊಂದಿರುವ ದಾಖಲೆಗಳನ್ನು ಓದುವಲ್ಲಿ ಇದು ಪ್ರಬಲ ಎಐ ಮಾದರಿಗಳಿಗಿಂತ ಮೇಲುಗೈ ಸಾಧಿಸಿದೆ.

ಈ ಹಿಂದೆ ಭಾರತೀಯ ಭಾಷೆಗಳಿಗೆ ಸೀಮಿತವಾದ ಸಣ್ಣ AI ಮಾಡೆಲ್‌ಗಳನ್ನು ತಯಾರಿಸುತ್ತಿದೆ ಎಂದು ಟೀಕಿಸಿದ್ದ ಜಾಗತಿಕ ತಂತ್ರಜ್ಞಾನ ವಿಶ್ಲೇಷಕರು ಈಗ ಸರ್ವಂ AI ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಸಿದ್ಧ ವಿಶ್ಲೇಷಕ ಡೀಡಿ ದಾಸ್ ‘ನಾನು ಸರ್ವಂ ಬಗ್ಗೆ ತಪ್ಪು ತಿಳಿದಿದ್ದೆ. ಭಾರತೀಯ ಭಾಷೆಗಳಿಗಾಗಿ ಅವರು ರೂಪಿಸಿರುವ Text-to-speech ಮತ್ತು OCR ಮಾದರಿಗಳು ಅತ್ಯುತ್ತಮವಾಗಿವೆ ಮತ್ತು ಕಡಿಮೆ ದರದಲ್ಲಿ ಲಭ್ಯವಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಣ್ಣ ಭಾರತೀಯ ಭಾಷಾ ಮಾದರಿಗಳಿಗೆ ತರಬೇತಿ ನೀಡುವ ನಿರ್ದೇಶನ ತಪ್ಪಾಗಿದೆ ಎಂದು ನನಗೆ ಅನಿಸಿತು. ಆದರೆ ಹುಡುಗ, ಅವರು ಅದನ್ನು ಬದಲಾಯಿಸಿದ್ದಾರೆಯೇ ಎಂದು ಅವರು ಬರೆದಿದ್ದಾರೆ. ಅವರು ಭಾರತೀಯ ಭಾಷೆಗಳಿಗೆ ಅತ್ಯುತ್ತಮ ಪಠ್ಯದಿಂದ ಭಾಷಣ, ಭಾಷಣದಿಂದ ಟೆಕ್ಸ್ಟ್ ಮತ್ತು OCR ಮಾದರಿಗಳನ್ನು ಹೊಂದಿದ್ದಾರೆ. ಮತ್ತು ಅದು ನಿಜಕ್ಕೂ ಮೌಲ್ಯಯುತವಾಗಿದೆ. ಬೆಲೆ ನಿಗದಿ ತುಂಬಾ ಸಮಂಜಸವಾಗಿದೆ.”

Bulbul V3 ಟೂಲ್‌

ಸರ್ವಂ ಎಐ ಬಿಡುಗಡೆ ಮಾಡಿರುವ ಮತ್ತೊಂದು ಪ್ರಮುಖ ಟೂಲ್‌ ಎಂದರೇ ಅದು Bulbul V3. ಈ ಟೂಲ್‌ ಟೆಕ್ಸ್ಟ್‌ ಅನ್ನು ಧ್ವನಿಯಾಗಿ ಪರಿವರ್ತಿಸುವ ಎಐ ಮಾಡೆಲ್ ಆಗಿದೆ. ಇದು ಜಾಗತಿಕ ಮಟ್ಟದ ಲೀಡಿಂಗ್‌ನಲ್ಲಿ ಇರುವ ElevenLabs ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಸದ್ಯ 11 ಭಾರತೀಯ ಭಾಷೆಗಳಲ್ಲಿ 35ಕ್ಕೂ ಹೆಚ್ಚು ಧ್ವನಿಗಳನ್ನು ಒಳಗೊಂಡಿದೆ. ಸಂಸ್ಥೆಯು ಇದನ್ನು 22 ಭಾಷೆಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :