Huawei ಕಂಪನಿಯ ಈ ಹೊಸ ಟ್ಯಾಬ್ಲೆಟ್‌ಗಳು ಈಗ Flipkart ನಲ್ಲಿ ಖರೀದಿಗೆ ಲಭ್ಯ!

ಪ್ರಮುಖ ಬ್ರಾಂಡ್‌ಗಳಲ್ಲಿ ಒಂದೆನಿಸಿರುವ ಹುವಾವೇ ಸಂಸ್ಥೆಯ ಹೊಸ Huawei MatePad SE 11 ಮತ್ತು Huawei MatePad 11.5 ಪೇಪರ್‌ಮ್ಯಾಟ್ ಆವೃತ್ತಿ ಟ್ಯಾಬ್‌ಗಳು ಈಗ ಲೀಡಿಂಗ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಖರೀದಿಗೆ ಲಭ್ಯವಿದೆ. ಅವುಗಳ ಪೈಕಿ ಹುವಾವೇ ಮೇಟ್‌ಪ್ಯಾಡ್ SE 11 ಸಂಸ್ಥೆಯ ಕಿರಿನ್ 710A ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿದೆ. ಹಾಗೆಯೇ ಈ ಟ್ಯಾಬ್‌ 7700mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಟ್ಯಾಬ್‌ಗಳ ಹುವಾವೇ M-ಪೆನ್ ಲೈಟ್ ಅನ್ನು ಬೆಂಬಲಿಸುತ್ತದೆ. ಹಾಗಾದರೆ ಹುವಾವೇ ಮೇಟ್‌ಪ್ಯಾಡ್ SE 11 ಮತ್ತು ಹುವಾವೇ ಮೇಟ್‌ಪ್ಯಾಡ್ 11.5 ಡಿವೈಸ್‌ಗಳ ಫೀಚರ್ಸ್‌ ಹಾಗೂ ಬೆಲೆ, ಲಭ್ಯತೆಯ ಬಗ್ಗೆ ಮುಂದೆ ತಿಳಿಯೋಣ.

Also Read : Samsung Galaxy A56 ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ! ಟ್ರಿಪಲ್‌ ಕ್ಯಾಮೆರಾ ರಚನೆ ಸೌಲಭ್ಯ

Huawei ಟ್ಯಾಬ್ಲೆಟ್‌ಗಳ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಹುವಾವೇ ಮೇಟ್‌ಪ್ಯಾಡ್ SE 11 ಮತ್ತು ಹುವಾವೇ ಮೇಟ್‌ಪ್ಯಾಡ್ 11.5 ಟ್ಯಾಬ್‌ ಡಿವೈಸ್‌ಗಳು ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೆದಿವೆ. ಇವುಗಳ ಪೈಕಿ ಹುವಾವೇ ಮೇಟ್‌ಪ್ಯಾಡ್ SE 11 ಡಿವೈಸ್‌ ಬೆಲೆ 25,999 ರೂ.ಗಳು ಆಗಿದೆ. ಹಾಗೆಯೇ ಹುವಾವೇ ಮೇಟ್‌ಪ್ಯಾಡ್ 11.5 ಪೇಪರ್‌ಮ್ಯಾಟ್ ಆವೃತ್ತಿಯ ಡಿವೈಸ್‌ ಬೆಲೆಯು 45,999 ರೂ.ಗಳು ಆಗಿದೆ. ಎರಡೂ ಟ್ಯಾಬ್ಲೆಟ್‌ಗಳು ದೇಶದಲ್ಲಿ ಪ್ರತ್ಯೇಕವಾಗಿ Flipkart ಮೂಲಕ ಖರೀದಿಸಲು ಲಭ್ಯವಿದೆ.

ಈ ಎರಡೂ ಟ್ಯಾಬ್ಲೆಟ್‌ಗಳ ಫೀಚರ್ಸ್‌ ಮಾಹಿತಿ

ಹುವಾವೇ ಮೇಟ್‌ಪ್ಯಾಡ್ 11.5 ಪೇಪರ್‌ಮ್ಯಾಟ್ ಮಾಡೆಲ್‌ 11.5-ಇಂಚಿನ 2.5K Huawei FullView PaperMatte ಡಿಸ್ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಇದು ಹುವಾವೇ ಕಂಪನಿಯ Kirin T82B ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ 8GB RAM + 256GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಅಲ್ಲದೇ 10,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 40W ಹುವಾವೇ ಸೂಪರ್‌ಚಾರ್ಜ್ ಸಪೋರ್ಟ್‌ ಹೊಂದಿದೆ.

ಇನ್ನು ಹುವಾವೇ ಮೇಟ್‌ಪ್ಯಾಡ್ SE 11 ಡಿವೈಸ್‌ 11 ಇಂಚಿನ ಪೂರ್ಣ HD+ 1,900 x 1,200 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ ಐ ಕಂಫರ್ಟ್ TFT LCD ಸ್ಕ್ರೀನ್‌ ಅನ್ನು ಹೊಂದಿದೆ. ಇದು ಹುವಾವೇ ಸ್ವಾಮ್ಯದ Kirin 710A ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ 8GB RAM ಮತ್ತು 128GB ಸ್ಟೋರೇಜ್‌ ಸೌಲಭ್ಯ ಪಡೆದಿದೆ. ಇದು ಹುವಾವೇ M-ಪೆನ್ ಲೈಟ್ ಅನ್ನು ಬೆಂಬಲಿಸುತ್ತದೆ. ಅಲ್ಲದೇ ಇದು 22.5W ವೇಗದ ಚಾರ್ಜಿಂಗ್‌ಗೆ ಸಪೋರ್ಟ್‌ನೊಂದಿಗೆ 7,700mAh ಬ್ಯಾಟರಿಯನ್ನು ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :